ಬಸ್‌ನಿಲ್ದಾಣದಲ್ಲಿ ಪಾರ್ಕಿಂಗ್ ಬಲು ದುಬಾರಿ
Team Udayavani, Oct 12, 2018, 4:56 PM IST
ಹುಬ್ಬಳ್ಳಿ: ವಾಯವ್ಯ ಸಾರಿಗೆ ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣಗಳಲ್ಲಿನ ಪಾರ್ಕಿಂಗ್ ಶುಲ್ಕ ಗಣನೀಯವಾಗಿ ಹೆಚ್ಚಳವಾಗಿದ್ದು, ಶುಲ್ಕ ನಿಗದಿ ಅವೈಜ್ಞಾನಿಕವಾಗಿದೆ ಎಂದು ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇತ್ತೀಚೆಗೆ ಹೊಸ ಆದೇಶದ ಪ್ರಕಾರ ಸೂಚಿಸಿರುವ ಪಾರ್ಕಿಂಗ್ ಶುಲ್ಕದಿಂದ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದೆ. ಹಳೇ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ಏರಿಕೆಯಾಗಿದ್ದು, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ನಗರದ ನಿಲ್ದಾಣಗಳಲ್ಲಿ ಒಂದು ದಿನ ಬೈಕ್ ನಿಲ್ಲಿಸಿದರೆ 50 ರೂ., ಕಾರಿಗೆ 100 ರೂ. ಪಾರ್ಕಿಂಗ್ ಶುಲ್ಕ ನಿಗದಿ ಮಾಡಿದೆ. ನಿತ್ಯವೂ ವಾಹನಗಳನ್ನು ಪಾರ್ಕ್ ಮಾಡುವ ಪ್ರಯಾಣಿಕರು ದ್ವಿಚಕ್ರ ವಾಹನಕ್ಕಾಗಿ ತಿಂಗಳಿಗೆ 1500 ರೂ. ಹಾಗೂ ಕಾರಿಗೆ 3000 ರೂ. ಶುಲ್ಕಕ್ಕಾಗಿಯೇ ವೆಚ್ಚ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ!
ದುಬಾರಿ ಶುಲ್ಕ: 2017 ನವೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದರ ಹೆಚ್ಚಳ ಮಾಡಿದೆ. ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿನ ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ಬಸ್ ನಿಲ್ದಾಣಗಳಲ್ಲಿ 12-24 ತಾಸಿಗೆ ಬೈಕ್‌ಗೆ 50 ರೂ., ಕಾರುಗಳಿಗೆ 100 ರೂ. ಪಾರ್ಕಿಂಗ್ ಶುಲ್ಕ ನಿಗದಿ ಮಾಡಿದ್ದು, ದಿನವೊಂದಕ್ಕೆ ಇದೇ ದರ ನಿಗದಿ ಮಾಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕಕ್ಕೆ ಹೋಲಿಸಿದರೆ ಇಲ್ಲಿ ಸಾಕಷ್ಟು ಹೆಚ್ಚಳವಾಗಿದೆ.
2018 ಅ. 3ರಿಂದ ಹೊಸದಾಗಿ ಪಾರ್ಕಿಂಗ್ ನಿರ್ವಹಣೆ ಪರವಾನಗಿ ಪಡೆದಿರುವ ಗುತ್ತಿಗೆದಾರರು ಹೊಸ ಶುಲ್ಕ ವಿಧಿಸುತ್ತಿದ್ದು, 12ರಿಂದ 24 ಗಂಟೆಗೆ 50 ರೂ. ಶುಲ್ಕ ನಿಗದಿ ಮಾಡಿರುವುದು ಸಾರಿಗೆ ಸಂಸ್ಥೆಯ ಜನರಿಂದ ಹಗಲು ದರೋಡೆ ಮಾಡುತ್ತಿದೆ ಎಂಬುವುದು ಸಾರ್ವಜನಿಕ ಅಸಮಾಧಾನವಾಗಿದೆ.
ಇತರೆಡೆ ಕಡಿಮೆ ಶುಲ್ಕ: ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿ ಹೊರತುಪಡಿಸಿದರೆ ಜಿಲ್ಲಾ ಹಾಗೂ ವಿಭಾಗೀಯ ಕೇಂದ್ರ ಸ್ಥಾನದ ಬಸ್ ನಿಲ್ದಾಣಗಳಲ್ಲಿ 4-24 ತಾಸುಗಳಿಗೆ ಬೈಕ್‌ಗೆ 10 ರೂ., ಕಾರಿಗೆ 20 ರೂ. ಇದ್ದರೆ ಪ್ರತಿದಿನಕ್ಕೆ 20-40 ರೂ. ಶುಲ್ಕವಿದೆ. ಇನ್ನು ತಾಲೂಕು ಕೇಂದ್ರಗಳಲ್ಲಿನ ನಿಲ್ದಾಣಗಳಲ್ಲಿ ಬೈಕ್‌ಗೆ 4-24 ಗಂಟೆಗೆ 8 ರೂ. ಕಾರಿಗೆ 15 ರೂ. ಇದ್ದರೆ ಪ್ರತಿದಿನಕ್ಕೆ 16 ರೂ. ಮತ್ತು 30 ರೂ. ಇದೆ.
ವಿಪರ್ಯಾಸವೆಂದರೆ ತಾಲೂಕು ಕೇಂದ್ರವಾಗಿರುವ ಹುಬ್ಬಳ್ಳಿಯಲ್ಲಿ ಒಂದು ದಿನಕ್ಕೆ 50 ರೂ. ಹಾಗೂ ಕಾರಿಗೆ 100 ರೂ. ಶುಲ್ಕ ವಿಧಿಸಿರುವುದು ಅವೈಜ್ಞಾನಿಕವಾಗಿದೆ. ದಿನವೊಂದಕ್ಕೆ 50 ರೂ. ವಸೂಲಿ ಮಾಡುವ ಗುತ್ತಿಗೆದಾರರು ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳಿಗೆ ನೆರಳಿನ ಸೌಲಭ್ಯ ಕಲ್ಪಿಸಿಲ್ಲ.
ಸೈಕಲ್‌ಗೂ 50 ರೂ. ಕೊಡ್ಬೇಕು!
ಸರಕಾರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪರಿಸರ ರಕ್ಷಣೆ ಹಾಗೂ ಆರೋಗ್ಯದ ದೃಷ್ಟಿಯಿಂದ ಸೈಕಲ್ ಬಳಕೆಗೆ ಹೆಚ್ಚು ಒತ್ತು ನೀಡುವಂತೆ ಪ್ರೋತ್ಸಾಹ ನೀಡುತ್ತಿವೆ. ಆದರೆ ಸಾರಿಗೆ ಸಂಸ್ಥೆ ಮಾತ್ರ ನಿಲ್ದಾಣಗಳಲ್ಲಿ ಸೈಕಲ್‌ಗಳನ್ನು ನಿಲ್ಲಿಸಿದರೂ 12 ತಾಸು ಮೀರಿದರೆ 50 ರೂ. ಪಾರ್ಕಿಂಗ್ ಶುಲ್ಕ ಪಾವತಿಸಬೇಕು. ಕನಿಷ್ಠ ಸೈಕಲ್‌ಗಾದರೂ ವಿನಾಯಿತಿ ನೀಡಬೇಕಿತ್ತು. ಅಲ್ಲದೆ ಸೈಕಲ್ ನಿಲ್ಲಿಸಲು ಸರಿಯಾದ ವ್ಯವಸ್ಥೆಯೂ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿಲ್ಲ. ದ್ವಿಚಕ್ರ ವಾಹನದಂತೆ ಸೈಕಲ್ ಪರಿಗಣಿಸಿರುವುದು ಹಾಸ್ಯಾಸ್ಪದವಾಗಿದೆ.
ಸುತ್ತೋಲೆ ಪ್ರಕಾರ ಹೊಸ ಗುತ್ತಿಗೆದಾರರಿಗೆ ಪಾರ್ಕಿಂಗ್ ನಿರ್ವಹಣೆ ಪರವಾನಗಿ ನೀಡಲಾಗಿದ್ದು,ದರ ನಿಗದಿ ಮಾಡಲಾಗಿದೆ. ನಿಗದಿ ಮಾಡಿದ ಶುಲ್ಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಡೆದರೆ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
. ವಿವೇಕಾನಂದ ವಿಶ್ವಜ್ಞ,
ವಿಭಾಗೀಯ ನಿಯಂತ್ರಣಾಧಿಕಾರಿ
ಪಾರ್ಕಿಂಗ್ ಶುಲ್ಕ ನಿಗದಿ ಮಾಡಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ದಿನವೊಂದಕ್ಕೆ ಬೈಕ್‌ಗೆ 50 ರೂ. ಪಡೆಯುವ ಗುತ್ತಿಗೆದಾರರಾಗಲಿ ಅಥವಾ ಸಾರಿಗೆ ಸಂಸ್ಥೆಯಾಗಲಿ ನಮ್ಮ ವಾಹನಗಳಿಗೆ ನೆರಳಿನ ವ್ಯವಸ್ಥೆ ಮಾಡಿದೆಯೇ? ಸಾರಿಗೆ ಸಂಸ್ಥೆಯಿಂದ ಹಗಲು ದರೋಡೆ ನಡೆಯುತ್ತಿದ್ದು, ಕೂಡಲೇ ಅವೈಜ್ಞಾನಿಕ ಶುಲ್ಕ ರದ್ದುಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಶುಲ್ಕ ನಿಗದಿ ಮಾಡಬೇಕು.
ಮಂಜುನಾಥ ಗೌಡರ,
ವೈದ್ಯಕೀಯ ಪ್ರತಿನಿಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.