ಮುಕ್ತಿ ಮಾರ್ಗದೆಡೆ ಕೊಂಡೊಯ್ಯುವುದೇ ಮಠಗಳ ಕಾರ್ಯ
Team Udayavani, Aug 23, 2018, 5:11 PM IST
ರಾಣಿಬೆನ್ನೂರು: ಮನುಷ್ಯ ರೂಪದಿಂದ ಜನ್ಮ ತಾಳಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲಡಗಿರುವ ಅಜ್ಞಾನವನ್ನು ಹೊಡೆದೊಡಿಸಿ, ಸುಜ್ಞಾನದಡೆಗೆ ಕೊಂಡೊಯ್ಯುವ ಗುರು ಸೇವೆ ಮುಕ್ತಿ ಪಡೆಯಲು ಸುಲಭ ಮಾರ್ಗವಾಗಿದೆ ಎಂದು ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಬುಧವಾರ ತಾಲೂಕಿನ ಚಳಗೇರಿ ಗ್ರಾಮದಲ್ಲಿ ದಿ| ಮಹಾದೇವಪ್ಪ ದೂಳೆಹೊಳಿ ದಂಪತಿಗಳ ಸಮಾ ಧಿಗಳ ದೇವಸ್ಥಾನದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಆರೂಢ ಪರಂಪರೆಯ ಮಠಗಳು ಜಾತಿಯ ಸೊಂಕಿಲ್ಲದೆ ನಾಡಿನ ಸರ್ವಧರ್ಮ ಸಮಾಜದ ಜನರನ್ನು ಸನ್ಮಾರ್ಗದಡೆ ಕೊಂಡೊಯ್ಯುವುದೆ ಆಗಿದೆ ಎಂದು ನುಡಿದರು.
ಹುಬ್ಬಳ್ಳಿಯ ಸಿದ್ಧಾರೂಢರ ಪರಮ ಶಿಷ್ಯರಾದ ಮುಪ್ಪಿನಾರ್ಯರು, ಈ ಗ್ರಾಮವನ್ನು ಪುಣ್ಯಮಯ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಎಲ್ಲ ನದಿಗಳು ಸಮುದ್ರವನ್ನು ಸೇರುವಂತೆ ಎಲ್ಲ ಮಠಗಳ ಉದ್ದೇಶ ಜನರನ್ನು ಮುಕ್ತಿ ಮಾರ್ಗದೆಡೆಗೆ ಕೊಂಡೊಯ್ಯುವುದೇ ಆಗಿದೆ. ಅಂತಹ ಮಹಾಪುರುಷರಾದ ಮುಪ್ಪಿನಾರ್ಯರ ಸೇವೆಯನ್ನು ದಿ| ಮಹಾದೇವಪ್ಪ ದಂಪತಿಗಳು ತ್ರೀಕರ್ಣ ಭಾವನೆಯಿಂದ ಸೇವೆ ಮಾಡಿದ ಪುಣ್ಯದಿಂದಾಗಿ ಅವರ ಸಮಾಧಿಯ ಮೇಲೆ ಮುಪ್ಪಿನಾರ್ಯ ಮಹಾತ್ಮಾರ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ ಸಾಕ್ಷಿಯಾಗಿದೆ ಎಂದರು.
ಕೊಟ್ನೂರ ವಿರಕ್ತಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಆರೂಢ ಪರಂಪರೆಯ ಮಠಗಳು ತನ್ನನ್ನು ತಾನು ಮೊದಲು ತಿಳಿಯಲು ಜ್ಞಾನದ ಅಮೃತ ಧಾರೆಯನ್ನ ಉಣಿಸುತ್ತ ಬಂದಿವೆ. ಅದ್ವೈತ ಜ್ಞಾನದಿಂದ ಜನಸಾಮಾನ್ಯರು ಮುಕ್ತಿಯ ಮಾರ್ಗವನ್ನು ಪಡೆಯಲು ಸದಾ ಗುರುಚಿಂತನೆ ಮತ್ತು ಗುರುಮಾರ್ಗದಲ್ಲಿ ನಡೆದರೆ ಮಾತ್ರ ಸಾಧ್ಯ ಎಂದರು.
ಸ್ಥಳೀಯ ಕಟಗಿಹಳ್ಳಿ ಮಠದ ಡಾ| ಮಹಾಂತೇಶ್ವರ ಸ್ವಾಮೀಜಿ, ಖಂಡೇರಾಯನಹಳ್ಳಿಯ ಸಿದ್ಧಾಶ್ರಮದ ನಾಗರಾಜಾನಂದ ಶ್ರೀಗಳು, ಕುಳ್ಳೂರಿನ ಶಿವಯೋಗೀಶ್ವರ ಸಂಸ್ಥಾನಮಠದ ಬಸವಾನಂದ ಶ್ರೀಗಳು, ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಅಂಗಡಿ, ಬಸನಗೌಡ ಕರೇಗೌಡ್ರ, ರೇವಣಪ್ಪ ಬದ್ನಿಕಾಯಿ ಮಾತನಾಡಿದರು. ನಂದೆಪ್ಪ ತೆಗ್ಗಿನ, ಜನಾರ್ಧನ ಕಡೂರು, ಸತೀಶಗೌಡ ಮಲ್ಲನಗೌಡ್ರ, ವಕೀಲಪ್ಪ ಧೂಳೆಹೊಳಿ, ರಾಯಪ್ಪ ತೆಗ್ಗಿನ ಸೇರಿದಂತೆ ಮತ್ತಿತರರು ಇದ್ದರು. ಬಾಬಣ್ಣ ಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ ಶಿಲಾಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿಯೊಂದಿಗೆ ಸರ್ವ ಮಹಾತ್ಮರು ಪ್ರಾಣ ಪ್ರತಿಷ್ಠಾಪನೆಯ ಮೂಲಕ ಜೀವಕಳೆ ತುಂಬಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.