ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ಎಲ್ಲಡೆ ಶಾಂತಿಯುತ ಮತದಾನ
Team Udayavani, Sep 3, 2021, 9:18 PM IST
ಹುಬ್ಬಳ್ಳಿ: ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದ್ದು, 82 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 53.81 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಹಲವು ಅಡೆ ತಡೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಕೇವಲ ಶೇ.೫೩.೮೧ ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ಶೇಕಡವಾರು ಮತದಾನ ಸಾಕಷ್ಟು ಕಡಿಮೆಯಾಗಿದೆ. ಬೆಳಗ್ಗಿನಿಂದಲೂ ಪಾಲಿಕೆ ಚುನಾವಣೆ ಮತದಾನ ಪ್ರಕ್ರಿಯೆ ತುರುಸು ಪಡೆದಿರಲಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಒಂದಿಷ್ಟು ಬಿರುಸಿನ ಮತದಾನ ಕಂಡಿತ್ತಾದರೂ ಸಂಜೆ ವೇಳೆಗೆ ಮತ್ತಷ್ಟು ವೇಗಗೊಳ್ಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
೨೦೧೩ ಮಾರ್ಚ್ ತಿಂಗಳಲ್ಲಿ ೬೭ ವಾರ್ಡುಗಳಿಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಶೇ.೬೬ ರಷ್ಟು ಮತದಾನವಾಗಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಶೇ.೧೨.೧೯ ರಷ್ಟು ಮತದಾನ ಕಡಿಮೆಯಾಗಿದೆ. ಕಳೆದ ಬಾರಿಯ ಶೇಕಡವಾರು ಮತದಾನ ಹಾಗೂ ಹಕ್ಕು ಚಲಾಯಿಸುವ ಕುರಿತು ಜನರಲ್ಲಿ ಜಾಗೃತಿ ಕಾರಣದಿಂದ ಈ ಬಾರಿ ಶೇ.೬೫-೭೦ ರಷ್ಟು ಮತದಾನ ಆಗಲಿದೆ ಎನ್ನುವ ನಿರೀಕ್ಷಿಸಲಾಗಿತ್ತು.
ಬೆಳಿಗ್ಗೆ ೯:೦೦ ಗಂಟೆಯ ಹೊತ್ತಿಗೆ ಶೇ.೭.೭೩, ೧೧:೦೦ ಗಂಟೆಯ ಹೊತ್ತಿಗೆ ಶೇ.೧೮.೧೮, ೧:೦೦ ಗಂಟೆಗೆ ಶೇ.೨೯.೦೧, ಮಧ್ಯಾಹ್ನ ೩:೦೦ ಗಂಟೆಗೆ ಶೇ.೩೯.೨೨, ಸಂಜೆ ೫:೦೦ ಗಂಟೆಗೆ ೫೦.೩೯ ಆಗಿತ್ತು. ಮತದಾನ ಕೊನೆಗೆ ಶೇ.೫೩.೮೧ ರಷ್ಟು ಮತದಾನವಾಗಿದೆ. ಹು-ಧಾ ಮಹಾನಗರ ಪಾಲಿಕೆಯ ೮೨ ವಾರ್ಡುಗಳಲ್ಲಿ ೮೪೨ ಮತಗಟ್ಟೆಗಳು, ೮,೧೭,೪೫೮ ಮತದಾರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Kundapura: ಅಪ್ರಾಪ್ತ ವಯಸ್ಕಳ ಜತೆ ಸಂಪರ್ಕ; ಮದುವೆಯಾಗುವುದಾಗಿ ಮೋಸ; 20 ವರ್ಷ ಶಿಕ್ಷೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.