ಜಲಮಂಡಳಿಗೆ ಪೆಡಂಭೂತವಾದ ಬಾಕಿ ಹಣ
Team Udayavani, Jun 26, 2021, 9:43 AM IST
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಸುತ್ತಮುತ್ತಲ ಕೆಲ ಪಟ್ಟಣ ಹಾಗೂ ಗ್ರಾಮಗಳಿಗೆ ನೀರು ಪೂರೈಸುವ ಜಲಮಂಡಳಿಗೆ ಬರಬೇಕಾದ ಬಾಕಿ ಬಹುದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಮಂಡಳಿಗೆ ಸರಿಸುಮಾರು 71.44 ಕೋಟಿ ರೂ.ಗಳ ಬಾಕಿ ಬರಬೇಕಿದೆ.
ಜಿಲ್ಲಾಡಳಿತ ಸೂಚನೆಯಂತೆ ಬೇಸಿಗೆ ಇಲ್ಲವೆ ಮಳೆಕೊರತೆ ಸಂದರ್ಭದಲ್ಲಿ ಅವಳಿನಗರ ಸೇರಿದಂತೆ ನೆರೆ ತಾಲೂಕು ಗ್ರಾಮಗಳಿಗೆ ಮಹಾನಗರದಿಂದಲೇ ಕುಡಿಯುವ ನೀರು ಪೂರೈಸಲಾಗುತ್ತದೆ. ಆದರೆ ನೀರು ಪೂರೈಕೆ ಮಾಡಿದ್ದಷ್ಟೆ ಬಂತು ಕಳೆದ ಕೆಲ ವರ್ಷಗಳಿಂದ ನೀರಿನ ಬಾಕಿ ಮಾತ್ರ ಬಂದಿಲ್ಲ. ಒಂದೆರಡುಕಡೆ ಏಳೆಂಟು ಕೋಟಿ ರೂ. ಲೆಕ್ಕದಲ್ಲಿ ಬಡ್ಡಿಯೇ ಬರಬೇಕಿದೆ.
ಬರಬೇಕಾದ ಬಾಕಿ ಹಣ ಬಾರದಿದ್ದರೆ ಕಾರ್ಯ ನಿರ್ವಹಣೆ ಹೇಗೆ ಎಂಬ ಅಳಲು ಮಂಡಳಿಯವರದ್ದಾಗಿದೆ. ಕಳೆದ ಹಲವಾರು ವರ್ಷಗಳಿಂದ ಬಾಕಿ ಬಾಬತ್ತು ಬೆಳೆಯುತ್ತಲೇ ಸಾಗಿದೆ.ಬಾಕಿ ವಸೂಲಿ ಅಭಿಯಾನ, ಒತ್ತಡ, ನಳದ ಸಂಪರ್ಕ ಕಡಿತ ಇಲ್ಲದವರ ನಡುವೆಯೂ ಜಲ ಮಂಡಳಿಗೆ ಒಟ್ಟು 71,44,52,896 ರೂ.ಗಳಷ್ಟು ಬಾಕಿ ಬರಬೇಕಿದೆ. ಕೆಲ ಪ್ರಕರಣಗಳು ಕಾನೂನು ಸಮರದಲ್ಲಿವೆ.
ಹುಬ್ಬಳ್ಳಿ-ಧಾರವಾಡ 24/7 ನೀರು ಪೂರೈಕೆ ವ್ಯವಸ್ಥೆ ಅಳವಡಿಕೆ ನಿಟ್ಟಿನಲ್ಲಿ ದೇಶಕ್ಕೆ ಮಾದರಿಯಾಗಿದೆ. ವಿವಿಧ ರಾಜ್ಯದವರು ಮಹಾನಗರಕ್ಕೆ ಭೇಟಿ ನೀಡಿ ಯೋಜನೆ
ಪರಿಶೀಲಿಸಿದ್ದಾರೆ. ಮಹಾನಗರದ ಕೆಲವು ವಾರ್ಡ್ ಗಳು ಈಗಾಗಲೇ 24/7 ವ್ಯವಸ್ಥೆ ಹೊಂದಿವೆ. ಇನ್ನು ಕೆಲವು ಪ್ರಾಯೋಗಿಕ ಹಂತದಲ್ಲಿವೆ. ಮಹಾನಗರದ ಎಲ್ಲ ವಾರ್ಡ್‌ಗಳಿಗೂ ಸೌಲಭ್ಯ ವಿಸ್ತರಣೆ ಕಾರ್ಯ ಪ್ರಗತಿ ಹಂತದಲ್ಲಿದೆ. ಈ ವ್ಯವಸ್ಥೆ ಇಲ್ಲದ ವಾರ್ಡ್‌ಗಳಲ್ಲಿ ಸದ್ಯಕ್ಕೆ 4-6 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.
ವಾರ್ಡ್‌ವಾರು ಬಾಕಿ: 2021ರ ಮೇ ಅಂತ್ಯದವರೆಗೆ ನೀರಿನ ಶುಲ್ಕ ಪಾವತಿ ಬಾಕಿಯ ಪಟ್ಟಿ ನೋಡಿದರೆ 25 ಸಾವಿರ ರೂ.ನಿಂದ ಹಿಡಿದು 2 ಲಕ್ಷ ರೂ. ಗಳವರೆಗೆ ಅದಕ್ಕೂ ಮೇಲ್ಪಟ್ಟು ಬಾಕಿ ಇರುವವರಸಂಖ್ಯೆ ಸುಮಾರು 8914 ಗ್ರಾಹಕರಿದ್ದು, ಅವರಿಂದ ಒಟ್ಟು 55,66,63,747 ರೂ.ಗಳ ಬಾಕಿ ಬರಬೇಕಿದೆ. 25 ಸಾವಿರ ರೂ.ಒಳಗೆ ಬಾಕಿ ಇರಿಸಿಕೊಂಡವರು ಸೇರಿದಂತೆ ಒಟ್ಟು ಅಂದಾಜು 71.44 ಕೋಟಿ ರೂ. ಗಳಿಗೂ ಅಧಿಕ ನೀರಿನ ಬಿಲ್ ಬಾಕಿ ಬರಬೇಕಿದೆ.
ವಾರ್ಡ್ ಸಂಖ್ಯೆ 24ರಲ್ಲಿ ಅಂದಾಜು 3.30 ಕೋಟಿ ರೂ. ಬಾಕಿ ಬರಬೇಕಿದೆ. ಅದರಂತೆ ವಾರ್ಡ್ 25-94.39 ಲಕ್ಷ, ವಾರ್ಡ್ 26-65 ಲಕ್ಷ ರೂ., ವಾರ್ಡ್ 27-1 ಲಕ್ಷ ರೂ., ವಾರ್ಡ್ 28-1 .5 ಲಕ್ಷರೂ., ವಾರ್ಡ್ 29-11 ಲಕ್ಷರೂ., ವಾರ್ಡ್ 30-1.24 ಕೋಟಿ, ವಾರ್ಡ್ 34-2.44 ಕೋಟಿ, ವಾರ್ಡ್ 35-18 ಲಕ್ಷ, ವಾರ್ಡ್ 35ಎ-96 ಲಕ್ಷ, ವಾರ್ಡ್ 36-49 ಲಕ್ಷ, ವಾರ್ಡ್ 36ಎ-36 ಲಕ್ಷ , ವಾರ್ಡ್ 37-1.60 ಕೋಟಿ, ವಾರ್ಡ್ 38-4.27 ಕೋಟಿ, ವಾರ್ಡ್ 39-2.46 ಕೋಟಿ, ವಾರ್ಡ್ 40-1.94 ಕೋಟಿ, ವಾರ್ಡ್ 41-92 ಲಕ್ಷ, ವಾರ್ಡ್ 42-1.85 ಕೋಟಿ, ವಾರ್ಡ್ 43-3.65 ಕೋಟಿ, ವಾರ್ಡ್ 44-1.39 ಕೋಟಿ, ವಾರ್ಡ್ 45-1.46 ಕೋಟಿ, ವಾರ್ಡ್ 45ಎ-1.28 ಕೋಟಿ, ವಾರ್ಡ್ 46-1.67 ಕೋಟಿ, ವಾರ್ಡ್ 47-2 ಕೋಟಿ, ವಾರ್ಡ್ 48-47 ಲಕ್ಷ, ವಾರ್ಡ್ 49-2.03 ಕೋಟಿ, ವಾರ್ಡ್ 50-3.05 ಕೋಟಿ, ವಾರ್ಡ್ 51-1.54 ಕೋಟಿ, ವಾರ್ಡ್ 52-2.14 ಕೋಟಿ, ವಾರ್ಡ್ 53-1.72 ಕೋಟಿ, ವಾರ್ಡ್ 54-2.47 ಕೋಟಿ, ವಾರ್ಡ್ 55-41 ಲಕ್ಷ , ವಾರ್ಡ್ 56-84 ಲಕ್ಷ, ವಾರ್ಡ್ 57-75 ಲಕ್ಷ, ವಾರ್ಡ್ 58-1.24 ಕೋಟಿ, ವಾರ್ಡ್ 59-2.58 ಕೋಟಿ, ವಾರ್ಡ್ 60-4.28 ಕೋಟಿ,ವಾರ್ಡ್ 61-84 ಲಕ್ಷ, ವಾರ್ಡ್ 62-2.02 ಕೋಟಿ, ವಾರ್ಡ್ 63-96 ಲಕ್ಷ, ವಾರ್ಡ್ 64-1.40 ಕೋಟಿ, ವಾರ್ಡ್ 65-2.22 ಕೋಟಿ, ವಾರ್ಡ್ 65ಎ-1.84 ಕೋಟಿ, ವಾರ್ಡ್ 66-2.47 ಕೋಟಿ, ವಾರ್ಡ್ 67-1.21 ಕೋಟಿ ಬಾಕಿ ಬರಬೇಕಿದೆ.
25 ಸಾವಿರ ರೂ.ಗಳ ಮೇಲ್ಪಟ್ಟ ಸುಮಾರು 3,706 ಗ್ರಾಹಕರಿಂದ 13.63 ಕೋಟಿ, 50 ಸಾವಿರ ರೂ.ಗಳ ಮೇಲ್ಪಟ್ಟ 4,735 ಗ್ರಾಹಕರಿಂದ 28.41 ಕೋಟಿ, 1ಲಕ್ಷ ಮೇಲ್ಪಟ್ಟ 90 ಗ್ರಾಹಕರಿಂದ 1.10 ಕೋಟಿ, 1.5 ಲಕ್ಷಮೇಲ್ಪಟ್ಟ 84 ಗ್ರಾಹಕರಿಂದ 1.43 ಕೋಟಿ, 2 ಲಕ್ಷ ಮೇಲ್ಪಟ್ಟ 299 ಗ್ರಾಹಕರಿಂದ 11.06 ಕೋಟಿ ರೂ. ಗಳ ಬಾಕಿ ಇದೆ. ಇದರಲ್ಲಿ 1.5 ಮೇಲ್ಪಟ್ಟ ಗ್ರಾಹಕರನೀರಿನ ಬಿಲ್ ಕುರಿತು ಹಲವು ವ್ಯಾಜ್ಯಗಳಿದ್ದು, ಇಂತಹ ಬಿಲ್‌ಗಳ ಸಮಸ್ಯೆ ಇವೆ ಎನ್ನುತ್ತಾರೆ ಅಧಿಕಾರಿಗಳು.
ನೆರೆಯ ತಾಲೂಕಿನಿಂದ ಬರಬೇಕು ಕೋಟಿ ಕೋಟಿ ಬಾಕಿ :
ಜಲಮಂಡಳಿಗೆ ಕಳೆದ 10 ವರ್ಷಗಳಿಂದ ನೀರು ಸರಬರಾಜು ಮಾಡಿರುವ ಬಿಲ್ ಬಾಕಿ ಹಣಕೋಟಿಗಟ್ಟಲೆ ಬರಬೇಕಿದ್ದು, ಆಗೊಮ್ಮೆ-ಈಗೊಮ್ಮೆ ಎನ್ನುವಂತೆ ಅಲ್ಪ ಪ್ರಮಾಣದಲ್ಲಿ ಬರುತ್ತಿದ್ದು, ಇದು ಯಾವುದಕ್ಕೂ ಸಾಲದಾಗಿದೆ. 2010ರಿಂದ ಕುಂದಗೋಳ ಪಟ್ಟಣದಿಂದ ಸುಮಾರು 9 ಕೋಟಿಗೂಅಧಿಕ ಅಸಲು ಹಾಗೂ 8 ಕೋಟಿಗೂ ಅಧಿಕ ಬಡ್ಡಿಒಟ್ಟು ಸುಮಾರು 17 ಕೋಟಿ ನಷ್ಟು ಬಾಕಿ ಹಣಬರಬೇಕಿದೆ. ಯರಿಕೊಪ್ಪದಿಂದ ಸುಮಾರು 1 ಕೋಟಿ ಬಾಕಿ ಬರಬೇಕಿದೆ. ಇಂದು, ನಾಳೆ ಬಂದೀತೆಂದು ಜಲಮಂಡಳಿ ಕಾಯುವಂತಾಗಿದೆ.
ಪ್ರಾಯೋಗಿಕ ವಾರ್ಡ್‌ಗಳಲ್ಲಿ ಆಗುತ್ತಿಲ್ಲ ಬಿಲ್ ಪಾವತಿ :
24/7 ಕುಡಿಯುವ ನೀರು ಸರಬರಾಜು ನಗರದ ಕೆಲ ವಾರ್ಡ್‌ಗಳಲ್ಲಿ ಪ್ರಾಯೋಗಿಕ ನೀರು ಸರಬರಾಜು ಮಾಡುತ್ತಿದ್ದು, ಇಂತಹ ಬಹುತೇಕ ವಾರ್ಡ್‌ಗಳಲ್ಲಿ ಸರಿಯಾದ ಬಿಲ್ ವಿತರಿಸುತ್ತಿಲ್ಲ. ಮಾಡಿದರೂ ಮೂರು-ನಾಲ್ಕು ತಿಂಗಳಿಗೊಮ್ಮೆ ಬಿಲ್ ನೀಡಲಾಗುತ್ತಿದೆ. ಇದರಿಂದ ಬಹುತೇಕ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಒಂದೇ ಬಾರಿಗೆ 5ರಿಂದ 10 ಸಾವಿರ ರೂ.ಗಳವರೆಗೆ ಬಿಲ್ ನೀಡಿದ್ದಾರೆ. ಇದು ಹೇಗೆಸಾಧ್ಯ? ಎಂದು ಗ್ರಾಹಕರು ಜಲಮಂಡಳಿ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.
ಜಲಮಂಡಳಿಯ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂದರೆ ಗ್ರಾಹಕರು ಕೈ ಜೋಡಿಸಬೇಕು. ಎಲ್ಲವೂ ಇಲಾಖೆಯೇ ಮಾಡಲಿ ಎಂದರೆ ಅದು ಸಾಧ್ಯವಿಲ್ಲದ ಮಾತು. ಜಲಮಂಡಳಿಗೆ ಸುಮಾರು 71.44 ಕೋಟಿ ರೂ.ನಷ್ಟು ಬಾಕಿ ಬರಬೇಕಿದೆ. ಕುಂದಗೋಳ-ಯರಿಕೊಪ್ಪ ಇನ್ನಿತರೆಕಡೆಯ ಸುಮಾರು 20 ಕೋಟಿ ಬಾಕಿ ಬಂದಲ್ಲಿಜಲಮಂಡಳಿ ಪುನಶ್ಚೇತನಕ್ಕೆ ಕಾರಣವಾಗಬಹುದು. ಆದ್ದರಿಂದ ಗ್ರಾಹಕರು ಜಲಮಂಡಳಿಗೆ ಬರಬೇಕಾದ ಬಾಕಿಯನ್ನು ಹಂತ-ಹಂತವಾಗಿ ಸಂದಾಯ ಮಾಡಿದ್ದಲ್ಲಿ ಉತ್ತಮ ಸೇವೆ ಮಾಡಲು ಸಹಕಾರಿಯಾಗಲಿದೆ.–ವಸಂತ ಗುಡಿ, ಸಹಾಯಕ ಅಭಿಯಂತರರ, ಜಲಮಂಡಳಿ.
–ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.