ಪಿಂಚಣಿ ಹಣ ತಂದ್ರೆ “ಕೈ’ಗೆ ಸನ್ಮಾನ


Team Udayavani, Jun 26, 2017, 3:50 PM IST

hub4.jpg

ಹುಬ್ಬಳ್ಳಿ: ಅವಳಿನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಪಿ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಕಾಂಗ್ರೆಸ್‌ ನವರು ಪಾಲಿಕೆಯ ನಿವೃತ್ತ ನೌಕರರ 105 ಕೋಟಿ ರೂ. ಪಿಂಚಣಿ ಬಾಕಿ ಹಣವನ್ನು ಎರಡು ತಿಂಗಳೊಳಗೆ ತೆಗೆದುಕೊಂಡು ಬರಲಿ ಸಾಕು. ಅವರನ್ನು ಬಿಜೆಪಿಯಿಂದ ಸನ್ಮಾನಿಸಲಾಗುವುದು ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಸವಾಲು ಹಾಕಿದರು. 

ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ರವಿವಾರ ಹಮ್ಮಿಕೊಂಡಿದ್ದ ಹು-ಧಾ ಬಿಜೆಪಿ ಕೇಂದ್ರವಿಧಾನಸಭಾ ಕ್ಷೇತ್ರದ ವಾರ್ಡ್‌ ನಂ.  46ರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.  ಪಾಲಿಕೆಯ ನಿವೃತ್ತ ನೌಕರರಿಗೆ ರಾಜ್ಯ ಸರಕಾರ ಪಿಂಚಣಿ ಹಣ ನೀಡಬೇಕು. ಆದರೆ, ಕಳೆದ 3 ವರ್ಷಗಳಿಂದ ಕೊಡುತ್ತಿಲ್ಲ. ಪಾಲಿಕೆಯು ಎಸ್‌ಎಫ್‌ಸಿ ಅನುದಾನದಲ್ಲಿಯೇ ಹಣ ನೀಡುತ್ತಿದೆ.

ಇದರಿಂದ ನಿರ್ವಹಣೆಗೆ ತುಂಬಾ ಸಮಸ್ಯೆ ಆಗುತ್ತಿದೆ. ಅವಳಿ ನಗರದ ಅಭಿವೃದ್ಧಿ ಕಾಮಗಾರಿಗೆ ಕಾಂಗ್ರೆಸ್‌ನವರು ಸಾವಿರಾರು ಕೋಟಿ ರೂ. ತರುವುದರ ಬಗ್ಗೆ ಚಿಂತಿಸುವುದು ಬಿಡಲಿ. ಅದನ್ನು ನಾವು ಮಾಡುತ್ತೇವೆ. ಅವರು ಪಾಲಿಕೆಯ ನಿವೃತ್ತ ನೌಕರರ ಪಿಂಚಣಿ ಹಣ ತರುವುದನ್ನಷ್ಟೆ ಮಾಡಲಿ ಎಂದು ಕುಟುಕಿದರು. ಗದಗನಲ್ಲಿ 45 ದಿನಕ್ಕೊಮ್ಮೆ ಹಾಗೂ ವಿಜಯಪುರದಲ್ಲಿ 30 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.

ನೀರು ಇಲ್ಲವೆಂಬ ಕಾರಣಕ್ಕೆ ಮಹಿಳಾ ವಿವಿಗೆ 3 ದಿನ ರಜೆ ನೀಡಲಾಯಿತು. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ, ದುಮ್ಮವಾಡ ಕೆರೆ ಬತ್ತಿದ್ದರೂ ಅವಳಿ ನಗರದ ಜನತೆಗೆ 4-5 ದಿನಕ್ಕೊಮ್ಮೆ ನೀರು ಒದಗಿಸಲಾಗುತ್ತಿದೆ. ಇಂದಿನಿಂದ 46ನೇ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಪ್ರತಿದಿನ 3-4 ತಾಸು ನೀರು ಸರಬರಾಜು ಮಾಡಲಾಗುತ್ತದೆ. ಒಂದು ತಿಂಗಳ ನಂತರ ನಿರಂತರ ನೀರು ಪೂರೈಕೆಯಾಗಲಿದೆ ಎಂದರು.

ಅವಳಿ ನಗರದ ರಸ್ತೆಗಳ ಸುಧಾರಣೆಗಾಗಿ ಕೇಂದ್ರ ಸರಕಾರದಿಂದ 368 ಕೋಟಿ ರೂ. ವಿಶೇಷ ಅನುದಾನ ತರಲಾಗಿದೆ. ರಾಜ್ಯದಲ್ಲೆ ಮಹಾನಗರ ಪಾಲಿಕೆಗೆ ಇಷ್ಟೊಂದು ಪ್ರಮಾಣದಲ್ಲಿ ಸಿಆರ್‌ಎಫ್‌ ಸಿಕ್ಕಿದ್ದು ಹು-ಧಾ ಪಾಲಿಕೆಗೆ ಮಾತ್ರ. 220 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.

ಇನ್ನು 15 ದಿನದಲ್ಲಿ ದೇಸಾಯಿ ಕ್ರಾಸ್‌ನಿಂದ ಬೈಲಪ್ಪನವರ ನಗರ, ಕಿಮ್ಸ್‌ ಹಿಂಭಾಗ, ಲೋಕಪ್ಪನ ಹಕ್ಕಲ ಮಾರ್ಗವಾಗಿ ವಿದ್ಯಾನಗರ ವರೆಗೆ 50 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಗೆ ಚಾಲನೆ ನೀಡಲಾಗುವುದು. ನಿಲಿಜಿನ್‌ ರಸ್ತೆ ಸೇರಿದಂತೆ ಕಾಟನ್‌ ಮಾರ್ಕೆಟ್‌ನ ಎಲ್ಲ ರಸ್ತೆಗಳು ಸಿಸಿ ರಸ್ತೆಗಳಾಗಲಿವೆ. 

ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜು ಎದುರಿನ ರಸ್ತೆಯಿಂದ ತೋಳನಕೆರೆ ವರೆಗಿನ 2 ಕಿಮೀ ರಸ್ತೆಯನ್ನು ಟೆಂಡರ್‌ ಸುರ್‌ ಮಾದರಿ ರಸ್ತೆ ಮಾಡಲಾಗುವುದು. ಇವಕ್ಕೆ ಒಂದು ತಿಂಗಳೊಳಗೆ ಚಾಲನೆ ನೀಡಲಾಗುವುದು. ಮುಂದಿನ ಹಂತದಲ್ಲಿ ತೋಳನಕೆರೆಯಿಂದ ಗೋಕುಲ ರಸ್ತೆಯ ರಾಧಾಕೃಷ್ಣ ನಗರ ವರೆಗೆ ಮಾದರಿ ರಸ್ತೆ ಮಾಡಲಾಗುವುದು.

ಬಿಜೆಪಿಯವರ ಪ್ರಯತ್ನದಿಂದಲೇ ಹು-ಧಾಗೆ ಸ್ಮಾರ್ಟ್‌ ಸಿಟಿ ಭಾಗ್ಯ ಲಭಿಸಿದೆ. ನಗರದಲ್ಲಿ ನಿರ್ಮಾಣವಾದ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರಿಂದ ಚಾಲನೆ ನೀಡಲು ಯೋಚಿಸಲಾಗಿದೆ. ವಾರ್ಡ್‌ ನಂ. 46 ಬಿಜೆಪಿಯ ಶಕ್ತಿ ಕೇಂದ್ರವಾಗಿದೆ ಎಂದರು. 

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಅವರು ಅಭಿವೃದ್ಧಿಯ ಹರಿಕಾರ ಆಗಿದ್ದಾರೆ  ಎಂದರು. ಮಹಾಪೌರ ಡಿ.ಕೆ. ಚಹಾಣ, ಶಂಕರಣ್ಣ ಮುನವಳ್ಳಿ, ಲಿಂಗರಾಜ ಪಾಟೀಲ, ವೀರಭದ್ರಪ್ಪ ಹಾಲಹರವಿ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಮೀನಾಕ್ಷಿ ಒಂಟಮೂರಿ, ವಿಜಯಾನಂದ ಹೊಸಕೋಟಿ, ಲಕ್ಷ್ಮೀ ಉಪ್ಪಾರ, ವಸಂತ ನಾಡಜೋಶಿ, ರಾಜು ಕಾಳೆ, ಶಿಲ್ಪಾ ಶೆಟ್ಟರ ಇತರರಿದ್ದರು.

ಪಾಲಿಕೆ ಸದಸ್ಯೆ ಲೀನಾ ಮಿಸ್ಕಿನ ಅಧ್ಯಕ್ಷತೆ ವಹಿಸಿದ್ದರು. ತಿಪ್ಪಣ್ಣ ಮಜ್ಜಗಿ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಾ ಗಂಡಗಾಳೇಕರ ನಿರೂಪಿಸಿದರು. ಸಮಾವೇಶಕ್ಕೂ ಮೊದಲು ಜಗದೀಶ ಶೆಟ್ಟರ ಅವರು ದೇಶಪಾಂಡೆ ನಗರದ ಬಾಳಿಗಾ ವೃತ್ತದಲ್ಲಿ ವಾರ್ಡ್‌ ನಂ. 46ರ 24/7 ನೀರು ಸರಬರಾಜು ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.    

ಟಾಪ್ ನ್ಯೂಸ್

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

1-aaa-gggg–rp

Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

1-qewqe

Ayodhya; ಖಲಿಸ್ಥಾನ್ ನಾಯಕನಿಂದ ಬೆದರಿಕೆ: ರಾಮ ಮಂದಿರದ ಭದ್ರತೆ ಇನ್ನಷ್ಟು ಹೆಚ್ಚಳ

Pakshikere-1

Kinnigoli: ಶೌಚಾಲಯದ ಕಮೋಡ್‌ನ‌ಲ್ಲಿ ಮೊಬೈಲ್‌ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?

Mangaluru-VV

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

1-vitla

Vitla: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಪಲ್ಟಿ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

Bengaluru: ರಸ್ತೆಯಲ್ಲೇ ಜಗಳಕ್ಕಿಳಿದಿದ್ದ ಇಬ್ಬರು ಬಸ್‌ಗೆ ಬಲಿ!

Bengaluru: ರಸ್ತೆಯಲ್ಲೇ ಜಗಳಕ್ಕಿಳಿದಿದ್ದ ಇಬ್ಬರು ಬಸ್‌ಗೆ ಬಲಿ!

1-aaa-gggg–rp

Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.