ಅವಳಿನಗರ ಸ್ವಚ್ಛತೆಗೆ ಜನರ ಸಹಕಾರ ಅವಶ್ಯ: ನಾಗರಾಜ
Team Udayavani, Jul 17, 2017, 12:37 PM IST
ಹುಬ್ಬಳ್ಳಿ: ಅವಳಿ ನಗರದಲ್ಲಿ ಸ್ವಚ್ಛತೆಗೆ ಒತ್ತು ನೀಡುವ ಮೂಲಕ ಮಹಾನಗರ ಅಭಿವೃದ್ಧಿಗೆ ಎಲ್ಲರು ಕಂಕಣ ಬದ್ಧರಾಗಬೇಕು ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ ಛಬ್ಬಿ ಹೇಳಿದರು. ಮಹಾನಗರ ಪಾಲಿಕೆ ಹಾಗೂ ಭಗಿರಥ ಸಂಸ್ಥೆಯ ಆಶ್ರಯದಲ್ಲಿ ರವಿವಾರ ವಾರ್ಡ್ ಸಂಖ್ಯೆ 28ರ ಅಶೋಕ ನಗರದಲ್ಲಿ ಘನತಾಜ್ಯ ವಸ್ತು ನಿರ್ವಹಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವಳಿನಗರ ಅಭಿವೃದ್ಧಿಯತ್ತ ದಾಪುಗಾಲು ಇರಿಸುತ್ತಿದೆ. ಅದಕ್ಕೆ ತಕ್ಕಂತೆ ಸಮಸ್ಯೆಗಳು ಉದ್ಭವಿಸುತ್ತಿವೆ. ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಕೈ ಜೋಡಿಸಬೇಕು. ನಮ್ಮ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವಿಂಗಡಣೆ ಮಾಡಿ ವಿಲೇವಾರಿ ಮಾಡುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಎಂದರು.
ಇದಕ್ಕೂ ಮೊದಲು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಹುಬ್ಬಳ್ಳಿ-ಧಾರವಾಡವಾಗಿದೆ. 12 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ.
ಪ್ರತಿದಿನ ಹುಬ್ಬಳ್ಳಿಯಲ್ಲಿ 200 ಟನ್, ಧಾರವಾಡದಲ್ಲಿ ಸುಮಾರು 100 ಟನ್ ನಷ್ಟು ಕಸ ಸಂಗ್ರಹವಾಗುತ್ತದೆ. ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ ಎಂದರು. ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತ್ಯಾಜ್ಯ ವಿಲೇವಾರಿ ಮಾಡಲಾಗುವುದು.
ಈಗಾಗಲೇ ಅವಳಿನಗರದಲ್ಲಿ ಹಂದಿ, ನಾಯಿ ಹಾಗೂ ಬಿಡಾಡಿ ದನಗಳ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಹಂತ-ಹಂತವಾಗಿ ಎಲ್ಲವನ್ನು ತಡೆಯಲಾಗುವುದು. ಅವಳಿನಗರದ ಜನರು ಬೀದಿ ನಾಯಿ, ಹಂದಿ, ದನಗಳಿಗೆ ಆಹಾರ ನೀಡದಿದ್ದರೆ ಅವುಗಳನ್ನು ತಡೆಯುವಲ್ಲಿ ಸಫವಾಗುತ್ತೇವೆ.
ಇದಕ್ಕೆ ಅವಳಿನಗರದ ಎಲ್ಲ ಜನರು ಸಹಕಾರ ಅಗತ್ಯ ಎಂದರು. ವಾರ್ಡ್ 28ರ ಅಶೋಕನಗರದ 180 ಕುಟುಂಬಗಳಿಗೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ ಛಬ್ಬಿ ಅವರು ಕಸ ವಿಂಗಡಣೆ ಮಾಡಲು ಬಕೇಟ್‌ಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಡಾ| ಅನಿತಾ ಕಡಗದ ಮಾತನಾಡಿ, ಕಸ ವಿಂಗಡನೆ ಹಾಗೂ ಕಸದಿಂದ ರಸ ತೆಗೆಯುವುದು, ಹಣ ಸಂಪಾದನೆ ಮಾಡುವುದರ ಕುರಿತು ಸಮಗ್ರ ಮಾಹಿತಿ ನೀಡಿದರು. ರಾಜಾ ದೇಸಾಯಿ ಮಾತನಾಡಿದರು. ಎಂ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಪ್ರಕಾಶ ಕ್ಯಾರಕಟ್ಟಿ, ಕಾರ್ಯನಿರ್ವಾಹಕ ಅಭಿಯಂತರ ಗಿರೀಶ ತಳವಾರ,
-ಪರಿಸರ ಅಭಿಯಂತರ ನಯನಾ ಕೆ.ಎಸ್., ಆನಂದಕುಮಾರ ಜಳಕೆ, ಅರ್ಜುನ ಅಥಣಿ, ಜ್ಯೋತಿ ದೇಸಾಯಿ, ದಿನೇಶ ನಾಯ್ಕ, ಕ್ಯಾತರಿನ್ ದಿನೇಶ, ಭಗಿರಥ ಸಂಸ್ಥೆಯ ನಿವೇದಿತಾ, ಎಸ್.ಜಿ.ಜೋಶಿ, ಸಿದ್ದರಾಮಯ್ಯ ಹಿರೇಮಠ ಹಾಗೂ ಭಗಿರಥ ಸಂಸ್ಥೆಯ ಕ್ಷೇತ್ರಾಧಿಕಾರಿಗಳು ಇದ್ದರು. ರೊಟ್ಟಿಗವಾಡ ನಿರೂಪಿಸಿದರು. ಸೋಮಲಿಂಗಪ್ಪ ಜವಳಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Friendship: ವಿಶ್ವದ ಸುಂದರ ಸಂಬಂಧ ಗೆಳೆತನ
Kota Shivarama Karanth: ಅನುಭವದ ಬುತ್ತಿ ಕೊಟ್ಟ ಕಾರಂತರು…
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.