ಪಕ್ಷ-ವ್ಯಕ್ತಿಗಿಂತ ಜನರ ವಿಚಾರಗಳು ಗೆಲ್ಲಬೇಕು


Team Udayavani, Apr 12, 2019, 3:50 PM IST

hub-1
ಹುಬ್ಬಳ್ಳಿ: ಯಾವುದೇ ಚುನಾವಣೆ ಇರಲಿ, ಪಕ್ಷ-ವ್ಯಕ್ತಿಗಿಂತ ವಿಚಾರ ಗೆಲ್ಲಬೇಕು. ಅದೇ ಆಶಯ ಹಾಗೂ ಬದಲಾವಣೆ ಚಿಂತನೆಯೊಂದಿಗೆ ಉತ್ತಮ ಪ್ರಜಾಕೀಯ ಪಕ್ಷ ಹೊಸತನದ ಹೆಜ್ಜೆ ಇರಿಸಿದೆ ಎಂದು ಪಕ್ಷದ ಸಂಸ್ಥಾಪಕ, ನಾಯಕ ನಟ ಉಪೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವ್ಯವಸ್ಥೆಯಲ್ಲಿ ಬದಲಾವಣೆ ಬರಬೇಕಾಗಿದೆ. ಹಣ ನೀಡಿ ಮತ ಖರೀದಿ ವ್ಯವಸ್ಥೆ ಬದಲಾಗಿ, ವೇತನ ಪಡೆದು ಕೆಲಸ ಮಾಡುವ ಜನಪ್ರತಿನಿಧಿ ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಪ್ರಜಾಕೀಯ ಈ ಬಾರಿಯ ಲೋಕಸಭಾ ಚುನಾವಣೆಗೆ ಬಳ್ಳಾರಿಯೊಂದನ್ನು ಹೊರತು ಪಡಿಸಿ ಉಳಿದ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದರು.
ಚುನಾವಣೆಯಲ್ಲಿ ಹಣ ಸುರಿದು ಅಬ್ಬರದ ಪ್ರಚಾರ ಸೃಷ್ಟಿಸುವ, ಗೆದ್ದ ಮೇಲೆ ಚುನಾವಣೆಗೆ ಹೂಡಿದ ಬಂಡವಾಳಕ್ಕೆ ದುಪ್ಪಟ್ಟು ರೀತಿಯಲ್ಲಿ ಹಣ ಮಾಡಿಕೊಳ್ಳುವ ವ್ಯವಸ್ಥೆ ನಿಲ್ಲಲು ನಾವು ಕೈಗೊಂಡ ಯತ್ನಕ್ಕೆ ಜನ ಬೆಂಬಲಿಸಬೇಕು. ಜನ ಬದಲಾದಲ್ಲಿ
ಅದು ಜನರ ಗೆಲುವಾಗಲಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ, ತಂತ್ರಜ್ಞಾನ ಬಳಸಿಕೊಂಡು ಜನರನ್ನು ತಲುಪುತ್ತೇವೆ. ಅವರ ಬೇಕು-ಬೇಡಿಕೆ ಹಾಗೂ ಸಮಸ್ಯೆಗಳ ಕುರಿತಾಗಿ ಅವರಿಂದಲೇ ಮಾಹಿತಿ ಪಡೆದು ಪರಿಹಾರಕ್ಕೆ ಯತ್ನಿಸುತ್ತೇವೆ. ಪಕ್ಷದ ಅಭ್ಯರ್ಥಿ ಆಯ್ಕೆಯಾದರೆ, ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸದಿದ್ದರೆ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಅಧಿಕಾರವನ್ನು ಜನರಿಗೆ ನೀಡಲಾಗುತ್ತದೆ ಎಂದರು.
ಮತ ವಿಚಾರದಲ್ಲಿ ನಾವೇನು ಭಿಕ್ಷೆ ಕೇಳುತ್ತಿಲ್ಲ. ವ್ಯವಸ್ಥೆ ಸುಧಾರಣೆ ಹಾಗೂ ಬದಲಾವಣೆ ನಿಟ್ಟಿನಲ್ಲಿ ಜನರ ಬಳಿಗೆ ಹೋಗುತ್ತೇವೆ. ಬದಲಾವಣೆ ಬಯಸಿದರೆ ಮುಂದುವರಿಯುತ್ತೇವೆ. ಇದ್ದ ವ್ಯವಸ್ಥೆಯೇ ಇರಲಿ ಎಂದಾದರೆ ನಾವೇನು ಮಾಡಲಾಗುತ್ತದೆ ಎಂದರು.
ಸಂಸದರು ರಾಜೀನಾಮೆ ನೀಡಬೇಕಿತ್ತು: ಮಹದಾಯಿ ವಿಚಾರವಾಗಿ ಇಲ್ಲಿಂದ ಆಯ್ಕೆಯಾಗಿ ಹೋದ ಸಂಸದರು ಮಾತನಾಡಬೇಕಿತ್ತು. ಕೇಂದ್ರದ ಮೇಲೆ ಒತ್ತಡ ತರಬೇಕಿತ್ತು. ಸ್ಪಂದನೆ ಸಿಗದಿದ್ದರೆ ಸಂಸದರು ರಾಜೀನಾಮೆ ನೀಡಬೇಕಿತ್ತು. ಅದನ್ನು ಮಾಡದೆ ಅವರು ಕರ್ತವ್ಯ ನಿರ್ವಹಣೆಯಲ್ಲಿ ವಿಫ‌ಲರಾಗಿದ್ದಾರೆ. ರಾಜಕೀಯ ಎಂಬುದೇ ಉತ್ತಮ ಸಮಾಜ ಸೇವೆ ಆಗಿದೆ. ಆದರೆ, ಹಣದ ಮೂಲಕ ಅದನ್ನು ರೂಪಿಸುವಂತಹದ್ದಲ್ಲ ಎಂದರು.
ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಯಾವ ಪಕ್ಷಕ್ಕೆ ನಾವು ಬೆಂಬಲ ನೀಡಬೇಕು ಎಂದು ಜನರನ್ನೇ ಕೇಳುತ್ತೇವೆ. ಅವರ ಬೇಡಿಕೆಗಳೊಂದಿಗೆ ತಿಳಿಸಿದ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ ಬೆಂಬಲ ಹಿಂಪಡೆಯುತ್ತೇವೆ, ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ. ಲೋಕಸಭಾ ಚುನಾವಣೆ ಪ್ರಧಾನಿ ಚುನಾವಣೆಯಲ್ಲ, ಸಂಸದರ ಚುನಾವಣೆ ಆಗಬೇಕಿದೆ ಎಂದರು. ಕ್ಷೇತ್ರದ ಅಭ್ಯರ್ಥಿ ಸಂತೋಷ ಸುದ್ದಿಗೋಷ್ಠಿಯಲ್ಲಿ ಇದ್ದರು.
ರಾಜಕೀಯ ಪಕ್ಷಗಳಿಂದಲೇ ಜಾತಿ ಉಳಿದಿದು: ಉಪೇಂದ್ರ
ಧಾರವಾಡ: ರಾಜಕೀಯ ಪಕ್ಷಗಳಿಂದಲೇ ಜಾತಿಗಳು ಉಳಿಯುವಂತಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬದಲಾವಣೆ ತರಲು ಒಳ್ಳೆಯ ವಿಚಾರ ಮುಂದಿಟ್ಟುಕೊಂಡು ನಮ್ಮ ಪಕ್ಷ ಮುನ್ನಡೆದಿದೆ. ಅದರಲ್ಲೂ ನಮ್ಮ ಪಕ್ಷಕ್ಕೆ ಯಾವುದೇ ಪ್ರಣಾಳಿಕೆ ಸಹ ಇಲ್ಲ ಎಂದು ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ, ನಟ ಉಪೇಂದ್ರ ಹೇಳಿದರು. ನಗರದಲ್ಲಿರುವ ಪಕ್ಷದ ಅಭ್ಯರ್ಥಿ ಸಂತೋಷ ನಂದೂರ ಮನೆಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು. ನಮಗೆ ಜನರೇ ಸ್ಟಾರ್‌ಗಳು. ನಮ್ಮ ಪಕ್ಷದ ಪರ ಯಾವುದೇ ಸ್ಟಾರ್‌ಗಳು ಪ್ರಚಾರ ನಡೆಸಲ್ಲ. ಈಗಿನ ರಾಜಕಾರಣ ಬಿಜಿನೆಸ್‌ಆಗಿದೆ. ಹಣ ಹಾಕಿ, ಹಣ ತೆಗೆಯುವುದಾಗಿದೆ. ಇದು ತೊಲಗಬೇಕು. ಬದಲಿಗೆ ಸ್ವಂತ ಹಣ ತಂದು ಸಮಾಜ ಸೇವೆ ಮಾಡುವ ಶಿಸ್ತುಬದ್ಧ ರಾಜಕೀಯ ವೃತ್ತಿ ಕಟ್ಟಬೇಕಿದೆ ಎಂದರು. ಇಂದಿನ ರಾಜಕೀಯ ವ್ಯವಸ್ಥೆ ದುಡ್ಡಿನ ಮೇಲೆ ನಿಂತಿದೆ. ನಮ್ಮ ಪಕ್ಷ ಯಾವುದೇ ಆಡಂಬರದಿಂದ ಕೂಡಿಲ್ಲ. ಜಾಹೀರಾತುಗಳಿಲ್ಲ, ಮೆರವಣಿಗೆಗಳಿಲ್ಲ. ನಾವು ನೇರವಾಗಿ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದೇವೆ.  ಹೋದ ಕಡೆಗಳಲ್ಲೆಲ್ಲ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ಟಾಪ್ ನ್ಯೂಸ್

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.