“ಇ’ವಾಹನಗಳತ್ತ ಜನರ ಚಿತ್ತ
ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ , ಸ್ಮಾರ್ಟ್ ನಗರದತ್ತ ಲಗ್ಗೆಯಿಟ್ಟ ಎಲೆಕ್ಟ್ರಿಕ್ ಸ್ಕೂಟರ್
Team Udayavani, Feb 10, 2021, 4:32 PM IST
ಹುಬ್ಬಳ್ಳಿ: ದುಬಾರಿ ಇಂಧನ, ರಸ್ತೆ ತೆರಿಗೆ ಏರಿಕೆ ಬಿಸಿ, ಪರಿಸರ ಸಂರಕ್ಷಣೆಗೆ ಪರ್ಯಾಯವಾಗಿ ಎಲೆಕ್ಟ್ರಿಕಲ್ ವಾಹನಗಳು ಅನಿವಾರ್ಯವಾಗುತ್ತಿವೆ.ಬಳಕೆ-ನಿರ್ವಹಣೆ ವೆಚ್ಚ ಕಡಿಮೆ ಇರುವುದರಿಂದ ಮಹಾನಗರದಲ್ಲಿ ಇ-ವಾಹನಗಳ ಬಳಕೆಗೆ ಜನರು ಹೆಚ್ಚಿನ ಒಲವು ತೋರುತ್ತಿದ್ದು, ಸ್ಮಾರ್ಟ್ ನಗರದತ್ತದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲಿ ಇ-ವಾಹನಗಳ ಉತ್ತೇಜನ ನೀಡುವುದು ಅಗತ್ಯವಾಗಿದೆ.
ದ್ರವ ರೂಪದ ಬಂಗಾರವಾಗಿರುವ ಪೆಟ್ರೋಲ್, ಡಿಸೇಲ್ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.ದುಬಾರಿ ರಸ್ತೆ ತೆರಿಗೆಯಿರುವುದರಿಂದ ಇದಕ್ಕೆಪರ್ಯಾವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಎಲೆಕ್ಟ್ರಿಕ್‌ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.ಮನೆಯಿಂದ ಕಚೇರಿ, ಒಂದಿಷ್ಟು ಮಾರುಕಟ್ಟೆಗೆ ಓಡಾಡುವವರುಇ-ವಾಹನಗಳತ್ತ ಮುಖ ಮಾಡುತ್ತಿದ್ದಾರೆ. 90ರೂ. ಒಂದು ಲೀಟರ್ ಪೆಟ್ರೋಲ್ ಹಾಕಿಸುವಬದಲು 20-25 ರೂ.ನಲ್ಲಿ 80-100 ಕಿ.ಮೀ. ದೂರಕ್ರಮಿಸಬಹುದಾಗಿದೆ. ನಿರ್ವಹಣೆ ದೃಷ್ಟಿಯಿಂದ ಪೆಟ್ರೋಲ್ ವಾಹನಗಳಿಗಿಂತ ಇದು ಅತ್ಯಂ ಸರಳವಾಗಿರುವುದರಿಂದ ನಗರ ವಾಸಿಗಳು ಇ-ಸ್ಕೂಟರ್‌ಗಳಿಗೆ ಮನ ಸೋಲುತ್ತಿದ್ದಾರೆ.
ಸ್ಕೂಟರ್‌ಗಳಿಗೆ ಬೇಡಿಕೆ: ಮಹಾನಗರವ್ಯಾಪ್ತಿಯಲ್ಲಿ ಈಗಾಗಲೇ 8 ಮಾರಾಟ ಮಳಿಗೆಗಳುಆರಂಭವಾಗಿವೆ. ಈ ಮಳಿಗೆಗಳಲ್ಲಿ ಕನಿಷ್ಠ 8-12 ವಿವಿಧ ಮಾದರಿಯ ಸ್ಕೂಟರ್ ಲಭ್ಯವಿದೆ.43,000-1,40,000 ರೂ.ವರೆಗೂ ಬೆಲೆಯಿದೆ.ಎಲ್ಲದಕ್ಕಿಂತಲೂ ಮಿಗಿಲಾಗಿ 25 ಕಿ.ಮೀ. ವೇಗಕ್ಕಿಂತಕಡಿಮೆಯಿರುವ ವಾಹನಗಳಿಗೆ ಆರ್‌ಟಿಒ ನೋಂದಣಿ ಅಗತ್ಯವಿಲ್ಲ. ಇನ್ನು ಹೆಲ್ಮೇಟ್ ಕಡಾಯವಲ್ಲ. 14 ವರ್ಷ ಮೇಲ್ಪಟ್ಟವರು ಚಾಲನೆ ಮಾಡಬಹುದಾಗಿದೆ. ಹೀಗಾಗಿ ಈ ಸ್ಕೂಟರ್‌ಗಳಿಗೆ ಹೆಚ್ಚು ಬೇಡಿಕೆಬರುತ್ತಿದೆಯಲ್ಲದೇ ಖರೀದಿಯಾಗುತ್ತಿವೆ. ಕೇಂದ್ರದಗುಜರಿ ನೀತಿ ಜಾರಿಯಾದರೆ ಲಕ್ಷಾಂತರ ವಾಹನಗಳುಗುಜರಿಗೆ ಸೇರಲಿವೆ. ಹೀಗಾಗಿ ಹೊಸ ದ್ವಿಚಕ್ರ ವಾಹನ ಖರೀದಿಗೆ ಮನಸ್ಸು ಮಾಡುತ್ತಿರುವವರುಇ-ವಾಹನಗಳತ್ತ ದೃಷ್ಟಿ ನೆಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ಕೆಲ ದೊಡ್ಡ ನಗರಗಳಿಗೆ ಹೋಲಿಸಿದರೆ ಮಹಾನಗರದಲ್ಲಿ ಇ-ವಾಹನಗಳ ಬಳಕೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಪೂರ್ವ ಪ್ರಾದೇಶಿಕ ಸಾರಿಗೆಕಚೇರಿಯಲ್ಲಿ 109 ಸಾರಿಗೆಯೇತರ ಹಾಗೂ 29 ವಾಣಿಜ್ಯ ಬಳಕೆಯ ವಾಹನಗಳು ಹಾಗೂ 78 ಸಿಎನ್‌ಜಿ ವಾಹನಗಳು ನೋಂದಣಿಯಾಗಿವೆ. ಇನ್ನೂ ಧಾರವಾಡ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 79 ಸಾರಿಗೆಯೇತರವಾಹನಗಳು ನೋಂದಣಿಯಾಗಿವೆ. ವಾಣಿಜ್ಯ,ಸಿಎನ್‌ಜಿ ವಾಹನಗಳು ನೋಂದಣಿಯಾಗಿಲ್ಲ.
ಅನುಕೂಲಗಳಂತೆ ಕೆಲ ಸಮಸ್ಯೆಗಳೂ ಇವೆ :
ದ್ವಿಚಕ್ರ ವಾಹನಗಳನ್ನು ಮನೆಯಲ್ಲಿ ಮೊಬೈಲ್‌ನಂತೆ ಸುಲಭವಾಗಿ ಚಾರ್ಜ್‌ಮಾಡಬಹುದಾಗಿದೆ. ಬಾಕಿ ಇಂಧನಗಳ ವಾಹನಕ್ಕಿಂತ ಇ-ವಾಹನದ ಖರ್ಚು ಕಡಿಮೆ. ಇನ್ನು ಅಪಾಯಕಾರಿ ಹೊಗೆ ಹೊರ ಸೂಸುವುದಿಲ್ಲ. ರಸ್ತೆ ತೆರಿಗೆ ಭಾರವೂ ಇಲ್ಲ. ಅತ್ಯಂತ ಕಡಿಮೆವೆಚ್ಚದಲ್ಲಿ ಸಂಚಾರ ಮಾಡಬಹುದು. ಅನುಕೂಲದಂತೆ ಕೆಲ ಸಮಸ್ಯೆಗಳಿದ್ದು, ಚಾರ್ಜಿಂಗ್ ಕೇಂದ್ರಗಳಿಲ್ಲ. ದೂರದ ಪ್ರಯಾಣಕ್ಕೆ ಅಷ್ಟೊಂದು ಸೂಕ್ತವಲ್ಲ, ಚಾರ್ಜಿಂಗ್ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಇತರೆ ಇಂಧನ ವಾಹನಗಳಿಗೆ ಹೋಲಿಸಿದರೆ ಇದರ ವೇಗ ಕಡಿಮೆ ಎನ್ನುವ ಮನಸ್ಥಿತಿ ಜನರಲ್ಲಿದೆ.
ಪೂರಕ ವ್ಯವಸ್ಥೆ ಅಗತ್ಯ :
ಈಗಾಗಲೇ ಸಾರ್ವಜನಿಕರು ಇ-ವಾಹನಗಳ ಬಳಕೆಗೆ ಮನಸ್ಸು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ವ್ಯವಸ್ಥೆಗಳನ್ನು ನೀಡುವಲ್ಲಿ ಸರಕಾರ ಕಾಳಜಿ ತೋರುತ್ತಿಲ್ಲ. ಆರಂಭದಲ್ಲಿ ದ್ವಿಚಕ್ರ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಕಾರುಗಳು ಇನ್ನೂಮಹಾನಗರಕ್ಕೆ ಕಾಲಿಟ್ಟಿಲ್ಲ. ಆದರೆ ಬೆಂಗಳೂರು, ಮಂಗಳೂರುದಂತಹ ನಗರಗಳಿಂದಕಾರುಗಳನ್ನು ಖರೀದಿಸಿ ಇಲ್ಲಿ ನೋಂದಣಿ ಮಾಡಿಸಲಾಗುತ್ತಿದೆ. ಬೇಕಾದ ಚಾರ್ಜಿಂಗ್ ಕೇಂದ್ರಗಳ ಆರಂಭಕ್ಕೆ ಇನ್ನೂ ಚಿಂತನೆ ನಡೆದಿಲ್ಲ. ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದರೆ ಇ-ವಾಹನಗಳ ಬಳಕೆದಾರರ ಪ್ರಮಾಣ ಹೆಚ್ಚಲಿದೆ.
ಇ-ವಾಹನಗಳಿಗೆ ಉತ್ತೇಜನ ನೀಡಲಿ :
ಹು-ಧಾ ಮಹಾನಗರ ಸ್ಮಾರ್ಟ್ ನಗರವಾಗಿ ರೂಪಗೊಳ್ಳುತ್ತಿದೆ. ಕೇವಲ ಕಟ್ಟಡಗಳನ್ನು ನಿರ್ಮಿಸುವುದೇ ಸ್ಮಾರ್ಟ್‌ಸಿಟಿ ಯೋಜನೆಯಲ್ಲ. ಸ್ವತ್ಛ, ಸ್ವಸ್ಥ ಹಾಗೂ ಪರಿಸರ ಸ್ನೇಹಿ ಮಹಾನಗರದ ಬಗ್ಗೆ ಚಿಂತನೆ ನಡೆಸಬೇಕಿದೆ. ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿಇ-ವಾಹನಗಳ ಖರೀದಿಗೆ ಜನರಿಗೆ ಉತ್ತೇಜನ ನೀಡುವುದು ಬಹು ಮುಖ್ಯ. ಭುವನೇಶ್ವರನಗರದಲ್ಲಿ ಇ-ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಮಾದರಿ ಯೋಜನೆಯಾಗಿದೆ. ಈ ಕಾರ್ಯ ಹು-ಧಾ ಮಹಾನಗರದಲ್ಲಿ ಪರಿಣಾಮಕಾರಿಯಾಗಿ ಆಗಬೇಕಿದೆ.
ಪೆಟ್ರೋಲ್ ದರ ಏರಿಕೆ, ರಸ್ತೆ ತೆರಿಗೆ ವಿನಾಯಿತಿ, ಪರಿಸರರಕ್ಷಣೆ ದೃಷ್ಟಿಯಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ಜನರು ಕೂಡ ವಾಹನಗಳ ಬಗ್ಗೆ ಹೆಚ್ಚೆಚ್ಚುವಿಚಾರಿಸುತ್ತಿದ್ದಾರೆ. ನಮ್ಮಲ್ಲಿ 43 ಸಾವಿರ ರೂ.ದಿಂದ ದರ ಆರಂಭವಾಗುತ್ತದೆ. ನಗರವಾಸಿಗಳಿಗೆ ಹೇಳಿ ಮಾಡಿಸಿದ ವಾಹನಗಳಾಗಿವೆ. ಸುಖದೇವಸಿಂಗ್ ಛೆಡ್ಡಾ, ಎಂಡಿ, ಛೆಡ್ಡಾ ಆಟೋ ಎಲೆಕ್ಟ್ರಿಕ್
ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿರ್ವಹಣಾ ಸಾಕಷ್ಟು ಕಡಿಮೆಯಿದೆ. ಅ ಧಿಕೃತಮೆಕ್ಯಾನಿಕ್‌ಗಳಿಂದ ಸರ್ವಿಸ್ ಲಭ್ಯವಿದೆ. ಅಗತ್ಯ ಬಿಡಿಭಾಗಗಳಿಗೆ ಸಮಸ್ಯೆಯಿಲ್ಲ. ಆರ್‌ಟಿಒ ನೋಂದಣಿ ವಿನಾಯಿತಿ ಇರುವಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅರವಿಂದ ಪೂಜಾರ,ಬನಶಂಕರಿ ಎಂಟರ್‌ಪ್ರೈಸೆಸ್
ಪೆಟ್ರೋಲ್ ಬೆಲೆ ಇಷ್ಟೊಂದುದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಎನ್ನಿಸುತ್ತಿದೆ. ನಿರ್ವಹಣೆ ಕಡಿಮೆ, 15-20 ರೂ.ನಲ್ಲಿ 60-80 ಕಿ.ಮೀ. ಓಡಾಡಬಹುದು. ನಿತ್ಯ ಮನೆ, ಕಚೇರಿ ಹಾಗೂ ಒಂದಿಷ್ಟು ಮಾರುಕಟ್ಟೆಗೆ ಅತ್ಯುಪಯುಕ್ತವಾಗಿದೆ. ಹೀಗಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುತ್ತಿದ್ದೇನೆ. –ಸಂದೇಶ ಕುಲಕರ್ಣಿ, ಉದ್ಯೋಗಿ
–ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.