ಪಂಚಾಯತ್‌ರಾಜ್‌ಗೆ ಕಾರ್ಯವೈಖರಿ ಸೂಚ್ಯಂಕ
ಸಿಎಂಡಿಆರ್‌ನಿಂದ ಅತ್ಯುತ್ತಮ ಪಂಚಾಯಿತಿಗಳ ಆಯ್ಕೆ ,ರಾಜ್ಯದ ಎಲ್ಲಾ ಗ್ರಾಪಂ, ತಾಪಂ, ಜಿಪಂಗಳಿಗೆ ಅಂಕ ನಿಗದಿ
Team Udayavani, Feb 22, 2021, 4:08 PM IST
ಸಾಮದರ್ಭಿಕ ಚಿತ್ರ
ಧಾರವಾಡ: ಗ್ರಾಪಂ ಸದಸ್ಯರ ಆಯ್ಕೆಯಾಗಿ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕೂಡ ನಡೆಯಿತು. ಇನ್ನೇನು ಒಂದು ತಿಂಗಳಲ್ಲಿ ತಾಪಂ, ಜಿಪಂ ಸದಸ್ಯರ ಆಯ್ಕೆಗೆ ಚುನಾವಣೆಗಳು ಬರಲಿವೆ. ಹೀಗೆಯೇ ಸದಸ್ಯರು, ಅಧ್ಯಕ್ಷರ ಆಯ್ಕೆ ನಿರಂತರ. ಆದರೆ ಇದೇ ಮೊದಲ ಬಾರಿಗೆ ರಾಜ್ಯದ ಅತ್ಯುತ್ತಮ ಗ್ರಾಪಂ, ತಾಪಂಮತ್ತು ಜಿಪಂಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶುರುವಾಗಿದೆ.
ಗ್ರಾಪಂ, ತಾಪಂ ಮತ್ತು ಜಿಪಂಗಳಿಗೆ ಪ್ರತಿವರ್ಷಅಭಿವೃದ್ಧಿಗಾಗಿ ಕೋಟಿ ಕೋಟಿ ರೂ. ಹಣ ಖರ್ಚಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಆದರೆ ಈ ಖರ್ಚಾದ ಹಣದಿಂದ ಜನರ ಜೀವನ ಮಟ್ಟ ಸುಧಾರಣೆ ಮತ್ತು ಅಭಿವೃದ್ಧಿ ಎಷ್ಟರ ಮಟ್ಟಿಗೆ ಆಗಿದೆಎಂಬುದನ್ನು ಪತ್ತೆ ಹಚ್ಚಲು ಸಜ್ಜಾಗಿದೆ ಧಾರವಾಡದ ಸಿಎಂಡಿಆರ್ ಸಂಸ್ಥೆ. ಸೆಂಟರ್ ಫಾರ್ ಮಲ್ಟಿ ಡಿಸಿಪ್ಲೆನರಿ ಆ್ಯಂಡ್ ರಿಸರ್ಚ್ ಇದೀಗ ರಾಜ್ಯದ ಪ್ರತಿಯೊಂದು ಗ್ರಾಪಂ, ತಾಪಂ ಮತ್ತು ಜಿಪಂಗಳು ತಮ್ಮ ವ್ಯಾಪ್ತಿಯಲ್ಲಿ ಸರ್ಕಾರನೀಡಿದ ಅನುದಾನ ಬಳಸಿ ಜನರ ಜೀವನ ಮಟ್ಟ ಸುಧಾರಣೆಗೆ ಎಷ್ಟರ ಮಟ್ಟಿಗೆ ಶ್ರಮಿಸಿವೆ ಎನ್ನುವಕುರಿತು ಸಮೀಕ್ಷೆಯೊಂದನ್ನು ಆಯೋಜಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶನ ಮೇರೆಗೆ ಹಾಗೂ ಪ್ರಾಯೋಜಕತ್ವದಲ್ಲಿಯೇ ಸಿಎಂಡಿಆರ್ ಸಂಸ್ಥೆ ಈ ಯೋಜನೆ ಕೈಗೆತ್ತಿಕೊಂಡಿದ್ದು, ಮುಂದಿನ ಆರು ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆಯ ಮೂರು ಸ್ತರಗಳ ಸಾಧನೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಮುನ್ನಡೆಯಲು ಮಾರ್ಗಸೂಚಿ: ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿನ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡುವ ಸರ್ಕಾರದ ಅನುದಾನ ಒಂದೇ ತೆರನಾಗಿದ್ದರೂ ಅವುಗಳ ಕಾರ್ಯವೈಖರಿ ಮತ್ತು ಫಲಿತಾಂಶ ಮಾತ್ರ ವಿಭಿನ್ನವಾಗಿದೆ.ಒಂದೊಂದು ಯೋಜನೆಗಳನ್ನು ಒಂದೊಂದು ಭಾಗದಲ್ಲಿನ ಪಂಚಾಯತ್‌ಗಳು ಅಚ್ಚುಕಟ್ಟಾಗಿನಿರ್ವಹಿಸಿವೆ. ಇಂತಹ ಯಶೋಗಾಥೆಗಳು ಮತ್ತು ಅದನ್ನು ಜಾರಿಗೊಳಿಸಲು ಅವರು ಅನುಸರಿಸಿದ ಸೂತ್ರಗಳನ್ನು ಆಯ್ಕೆ ಮಾಡಿಕೊಂಡು ಅದನ್ನೇ ಇತರೆ ಪಂಚಾಯಿತಿಗಳಿಗೆ ಮಾರ್ಗಸೂಚಿಯನ್ನಾಗಿ ಮಾಡಲು ಈ ಸಮೀಕ್ಷೆ ಸಹಾಯಕ್ಕೆ ನಿಲ್ಲಲಿದೆ.
ಒಂದು ಗ್ರಾಮಮಟ್ಟದಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ರೂಪಿಸಿರುವ ಯೋಜನೆಗಳನ್ನು ಆಯಾ ಗ್ರಾಪಂಗಳು ಹೇಗೆ ಅನುಷ್ಠಾನಗೊಳಿಸಿವೆ ಎಂಬುದನ್ನುಪ್ರಶ್ನಾವಳಿ ಮೂಲಕ ಅಧ್ಯಯನ ನಡೆಸಲಾಗುತ್ತದೆ.ಪಂಚಾಯತ್ ರಾಜ್ ವ್ಯವಸ್ಥೆಯ ಕಾರ್ಯಕ್ಷಮತೆ, ಯೋಜನೆ, ಕೌಶಲ್ಯ ವೃದ್ಧಿ, ಜನರ ಜೀವನ ಮಟ್ಟ,ಸ್ವಚ್ಛತೆ, ಕೃಷಿ, ಕಿರು ಉದ್ಯಮ, ಹೈನುಗಾರಿಕೆ,ನಿರುದ್ಯೋಗ ನಿವಾರಣೆ ಹೀಗೆ 108 ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆ ಪೈಕಿ ಕಳೆದ ಮೂರು ವರ್ಷಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದಪಂಚಾಯಿತಿಯನ್ನು ಪರಿಗಣಿಸಲಾಗುತ್ತದೆ.ಅಷ್ಟೇಯಲ್ಲ, ಉತ್ತಮ ತಂತ್ರಗಳನ್ನು ಪತ್ತೆ ಹಚ್ಚಿಅವುಗಳನ್ನೇ ಮುಂದೇ ಕಾನೂನು ರೂಪದಲ್ಲಿ ಇಡೀ ರಾಜ್ಯದ ಎಲ್ಲಾ ಪಂಚಾಯಿತಿಗಳಿಗೂ ಅನ್ವಯಿಸಲು ಯೋಜಿಸಲಾಗಿದೆ.
ಅಧ್ಯಯನ ಹೇಗೆ?: ರಾಜ್ಯದಲ್ಲಿ 30 ಜಿಪಂಗಳು, 196 ತಾಪಂಗಳು ಹಾಗೂ 6022 ಗ್ರಾಪಂಗಳಿದ್ದು, ಇಡೀ ಪಂಚಾಯತ್‌ರಾಜ್ ವ್ಯವಸ್ಥೆ ಗ್ರಾಮೀಣ ಕರ್ನಾಟಕದಅಭಿವೃದ್ಧಿಗೆ ಸೂತ್ರಧಾರನಂತೆ ಕೆಲಸ ನಿರ್ವಹಿಸುತ್ತದೆ.ಹೀಗಾಗಿ ಇಲ್ಲಿನ ಅಭಿವೃದ್ಧಿಯ ಸೂಚ್ಯಂಕವೇ ಮುಂದಿನಯೋಜನೆಗಳ ಅನುಷ್ಠಾನಕ್ಕೆ ಮಾರ್ಗದರ್ಶಿಯಾಗಲಿದೆ.ಗ್ರಾಮ ಸಭೆಗಳು, ಮಹಿಳಾ ಸಬಲೀಕರಣ, ಸ್ವತ್ಛತೆ,ಜಲ ಸಂರಕ್ಷಣೆ, ಅಂತರ್ಜಲ ಹೆಚÛಳ, ಕೌಶಲ್ಯಾಭಿವೃದ್ಧಿ,ಅಪೌಷ್ಟಿಕತೆ ನಿವಾರಣೆ, ವಿಕಲಚೇತನ ಕಲ್ಯಾಣ,ಹಿಂದುಳಿದವರ ಅಭಿವೃದ್ಧಿ ಹೀಗೆ ಅನೇಕ ಮಜಲುಗಳನ್ನುವಿಭಿನ್ನವಾಗಿ ಅನುಷ್ಠಾನಗೊಳಿಸಿದ ಮಾದರಿಗಳನ್ನು ಇಲ್ಲಿ ಹೆಕ್ಕಿ ತೆಗೆಯಲಾಗುತ್ತದೆ.
ಈ ಕಾರ್ಯಕ್ಕಾಗಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮೈಸೂರು ಕರ್ನಾಟಕ ಮತ್ತು ಕರಾವಳಿಕರ್ನಾಟಕದ ತಲಾ ಒಂದೊಂದು ಜಿಪಂ, ತಲಾ 8 ತಾಪಂ ಹಾಗೂ ತಲಾ 10 ಗ್ರಾಪಂಗಳನ್ನು ಮೊದಲು ಅಧ್ಯಯನಕ್ಕೆಒಳಪಡಿಸಿ ಅಲ್ಲಿ ಬರುವ ಫಲಿತಗಳನ್ನು ಆಧರಿಸಿ ಪ್ರಶ್ನಾವಳಿ ಸಜ್ಜುಗೊಳಿಸಿ ರಾಜ್ಯದ ಎಲ್ಲಾ ಜಿಪಂಗಳು, ತಾಪಂ ಹಾಗೂಗ್ರಾಪಂಗಳ ಸಮಗ್ರ ಮಾಹಿತಿ ಪಡೆದು ವಿಶ್ಲೇಷಣೆ ನಡೆಸಿ ಅಭಿವೃದ್ಧಿ ಸೂಚ್ಯಂಕ ನೀಡಲಾಗುತ್ತದೆ.
ತಜ್ಞರು ಏನಂತಾರೆ? :
ಸಿಎಂಡಿಆರ್ ಸಂಸ್ಥೆ ಡಾ| ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನಕುರಿತು ಸಮಗ್ರ ಅಧ್ಯಯನ ನಡೆಸಿಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಸಂಸದರಆದರ್ಶ ಗ್ರಾಮಗಳನ್ನು ಅಧ್ಯಯನಕ್ಕೆತೆಗೆದುಕೊಂಡು ಇದರಲ್ಲಿ ಪ್ರಭಾಕರ ಕೋರೆ, ನಳಿನಕುಮಾರ್ ಕಟೀಲ್,ಪ್ರಹ್ಲಾದ ಜೋಶಿ ಅವರ ಆದರ್ಶ ಗ್ರಾಮಗಳು ಉತ್ತಮ ಸಾಧನೆ ಮಾಡಿದ್ದನ್ನು ಸಂಸ್ಥೆ ವಿಶ್ಲೇಷಿಸಿ ಸೂಚ್ಯಂಕ ನಿಗದಿಪಡಿಸಿತ್ತು. ಅದರಂತೆ ನರೇಗಾಯೋಜನೆ, ಪಂಚಾಯತ್ ರಾಜ್‌ವ್ಯವಸ್ಥೆ, ಪಂಚಾಯಿತಿ ಸದಸ್ಯರ ವರ್ತನೆಗಳು ಮತ್ತು ಕೌಶಲ್ಯವೃದ್ಧಿ, ಯೋಜನೆಗಳ ಅನುಷ್ಠಾನದ ಅನುಪಾತಗಳು ಹೀಗೆ ಹತ್ತಾರು ವಿಚಾರಗಳ ಕುರಿತು ಸಂಶೋಧನೆ ಮತ್ತುಅಧ್ಯಯನ ನಡೆಸಿ ಸೈ ಎನಿಸಿಕೊಂಡಿದೆ. ಇದೀಗ ಪಂಚಾಯತ್ ರಾಜ್ ಸಮಗ್ರ ವ್ಯವಸ್ಥೆಯಲ್ಲಿಯೇ ಅಗ್ರಗಣ್ಯ ಸಾಧನೆಪಟ್ಟಿಗೆ ಸಜ್ಜಾಗಿರುವುದು ಉತ್ತಮ ಸಂಗತಿಎನ್ನುತ್ತಿದ್ದಾರೆ ಪಂಚಾಯತ್‌ರಾಜ್ ತಜ್ಞರು.
ಅಭಿವೃದ್ಧಿ ಸೂಚ್ಯಂಕದಲ್ಲಿ ಉತ್ತಮ ಸಾಧನೆ ಮಾಡಿದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಆಯ್ಕೆ ಮಾಡುವುದುಹಾಗೂ ಉತ್ತಮ ತಂತ್ರಗಳನ್ನು ಹೆಕ್ಕಿ ತೆಗೆದು ಇಡೀ ವ್ಯವಸ್ಥೆಗೆಮಾರ್ಗಸೂಚಿ ಮಾಡುವುದು ಈ ಸಮೀಕ್ಷೆಯ ಉದ್ದೇಶ. –ಡಾ|ನಾರಾಯಣ ಬಿಲ್ಲವ, ಪಂಚಾಯತ್‌ರಾಜ್ ತಜ್ಞ, ಸಿಎಂಡಿಆರ್, ಧಾರವಾಡ
ಡಾ|ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.