ಸಾಧನೆ ಮಾತಾಗಲಿ: ಚಂದ್ರಶೇಖರ ಸ್ವಾಮೀಜಿ
ಆರನೇ ರಂಗಾಯಣವಾಗಿ ಯಕ್ಷ ರಂಗಾಯಣ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ
Team Udayavani, Mar 11, 2022, 6:23 PM IST
ಧಾರವಾಡ: ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯೇ ಮಾತಾಗಬೇಕು ಹೊರತಾಗಿ ಬರೀ ಮಾತೇ ಸಾಧನೆಯಾಗಬಾರದು ಎಂದು ಹುಕ್ಕೇರಿ ಹಿರೇಮಠದ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ರಂಗಾಯಣದ ಪಂ|ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಮಾ.10ರಿಂದ ಮಾ.17ರವರೆಗೆ ಹಮ್ಮಿಕೊಂಡಿರುವ ಕಾಲೇಜು ಯುವ ರಂಗೋತ್ಸವ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಕಲಿಕಾ ಜೀವನದಲ್ಲಿ ಏನನ್ನು ಸಾ ಧಿಸಬೇಕು ಎಂಬುದನ್ನು ಅರಿತಿರಬೇಕು ಎಂದರು.
ರಂಗೋತ್ಸವಕ್ಕೆ ಚಾಲನೆ ನೀಡಿದ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ|ಬಸು ಬೇವಿನಗಿಡದ ಮಾತನಾಡಿ, ರಂಗಾಯಣವು ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಗುರುತಿಸಿ, ಅವರಿಗೆ ನಾಟಕ ತರಬೇತಿ ನೀಡುವ ಮೂಲಕ ರಂಗಭೂಮಿಯತ್ತ ಸೆಳೆಯುವಲ್ಲಿ ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸಿದೆ ಎಂದರು.
ರಂಗಸಮಾಜ ಸದಸ್ಯ ಹಿಪ್ಪರಗಿ ಸಿದ್ಧರಾಮ ಮಾತನಾಡಿ, ರಂಗಾಯಣವು ಎಲ್ಲರಿಗೂ ಅವಕಾಶ ನೀಡುವ ಮೂಲಕ ವ್ಯಕ್ತಿತ್ವ ವಿಕಾಸಗೊಳಿಸುತ್ತಿದೆ. ಇದೀಗ ಕಾರವಾರದಲ್ಲಿ ಆರನೇ ರಂಗಾಯಣವಾಗಿ ಯಕ್ಷ ರಂಗಾಯಣ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ, ಧಾರವಾಡ ರಂಗಾಯಣ ಕಾಲೇಜು ಯುವ ರಂಗೋತ್ಸವ ಮೂಲಕ ಸುಮಾರು 150 ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದೆ ಎಂದರು. ಕಲಘಟಗಿ ಗುಡ್ ನ್ಯೂಸ್ ಪಪೂ ಕಾಲೇಜ್ ಪ್ರಾಚಾರ್ಯ ಡಾ|ಬಿ.ಜೆ ಬಿರಾದಾರ, ಕವಿಸಂ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ ಹೊರಕೇರಿ, ಡಾ|ಡಿ.ಎ.ಉಪಾಧ್ಯ ಇದ್ದರು. ರಂಗಾಯಣದ ಆಡಳಿತಾಧಿ ಕಾರಿ ಶಶಿಕಲಾ ಹುಡೇದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಫಕ್ಕೀರಪ್ಪ ಮಾಧನಭಾವಿ ನಿರೂಪಿಸಿ ವಂದಿಸಿದರು. ಡಾ|ಡಿ.ಎ. ಉಪಾಧ್ಯ ರಚಿಸಿ, ಶಶಿಕಲಾ ಪುರೂಟಿ ನಿರ್ದೇಶಿಸಿದ ಬ್ರಹ್ಮ ಬರಹ ನಾಟಕವನ್ನು ಗುಡ್ ನ್ಯೂಸ್ ವೆಲ್ಫೆರ್ ಸಂಸ್ಥೆಯ ಕಲಾ-ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.