ಪಾಲಿಕೆಗೆ ಸವಾಲಾದ ಹಂದಿ-ಬೀದಿ ನಾಯಿ
Team Udayavani, Mar 14, 2020, 11:40 AM IST
ಹುಬ್ಬಳ್ಳಿ: ಕೊರೊನಾ ಅಬ್ಬರದ ನಡುವೆಯೇ ಎಚ್1ಎನ್1, ಮಲೇರಿಯಾ, ಕಾಲರದಂತಹ ಸಾಂಕ್ರಾಮಿಕ ರೋಗಳು ಸುಳಿದಾಡುತ್ತಿವೆ. ಇಂತಹ ರೋಗಳ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳ ನಿಟ್ಟಿನಲ್ಲಿ ಹಲವು ಕೊರತೆಗಳು ಕಂಡು ಬರುತ್ತಿದ್ದು, ಜತೆಗೆ ಹಂದಿ ಹಾಗೂ ಬೀದಿ ನಾಯಿಗಳು ಪಾಲಿಕೆಗೆ ಸವಾಲಾಗಿ ಪರಿಣಮಿಸಿವೆ.
ರಾಜ್ಯ ಹಲವು ಕಡೆಗಳಲ್ಲಿ ಎಚ್1ಎನ್1 ರೋಗ ಲಕ್ಷಣ ಕಂಡು ಬಂದಿದ್ದು, ಅವಳಿನಗರಕ್ಕೂ ವ್ಯಾಪಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ, ಅವಳಿನಗರದಲ್ಲಿ ಇಂತಹ ರೋಗ ತಡೆ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಗಮನಿಸಿದರೆ ಸ್ವತ್ಛತೆ, ಸೊಳ್ಳೆಗಳ ನಿರ್ಮೂಲನೆಗೆ ಕ್ರಮ ಇತ್ಯಾದಿಗಳ ಕೊರತೆ ಕಾಣಿಸುತ್ತಿದೆ. ಹಂದಿಗಳು ಮಾತ್ರ ರಾಜಾರೋಷವಾಗಿ ಪ್ರತಿ ಬಡಾವಣೆಯಲ್ಲೂ ತಿರುಗಾಡುತ್ತಿವೆ. ಇವುಗಳ ಸ್ಥಳಾಂತರಕ್ಕೆ ಹಂದಿ ಸಾಕುವವರ ತೀವ್ರ ವಿರೋಧವೂ ಅಡ್ಡಿಯಾಗಿದೆ.
ಮಿತಿ ಮೀರುತ್ತಿದೆ ಹಂದಿ ಕಾಟ: ಅವಳಿನಗರದಲ್ಲಿ ಹಲವು ಬಾರಿ ಹಂದಿಗಳ ವಿರುದ್ಧ ಸಮರ ಸಾರಲಾಗಿದ್ದರೂ, ಪ್ರತಿ ಬಾರಿ ಸೋಲು ಕಂಡಿದ್ದು ಮಹಾನಗರ ಪಾಲಿಕೆಯೇ. ಹಂದಿಗಳ ಹಾವಳಿ ತಡೆ ನಿಟ್ಟಿನಲ್ಲಿ ಪಾಲಿಕೆ ಅನೇಕ ಬಾರಿ “ಆಪರೇಶನ್ ವರಾಹ’ ನಡೆಸಿದೆಯಾದರೂ, ಯಶಸ್ಸಿಗಿಂತ ಅರ್ಧದಲ್ಲೇ ಮೊಟಕುಗೊಂಡಿದ್ದೇ ಅಧಿಕ. ಹಂದಿಗಳ ವಿರುದ್ಧ ಕಾರ್ಯಾಚರಣೆಗೆ ಹಂದಿಗಳನ್ನು ಸಾಕುವವರ ವಿರೋಧ ಎಷ್ಟರ ಮಟ್ಟಿಗೆ ಇದೆ ಎಂದರೆ, ಹಂದಿ ಹಿಡಿಯಲು ಬರುವ ಹೊರಗಿನ ವ್ಯಕ್ತಿಗಳ ಮೇಲೆ ಹಲ್ಲೆ ಮಾಡುವುದು, ಕಾರ್ಯಾಚರಣೆಗೆ ಒಂದಿಲ್ಲ ಒಂದು ರೀತಿಯಲ್ಲಿ ಅಡ್ಡಿ ಪಡಿಸುವುದು, ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸುವಂತಹ ಕಾರ್ಯಗಳು ನಡೆದಿವೆ.
ಪೊಲೀಸ್ ಬಲದೊಂದಿಗೆ ಕಾರ್ಯಾಚರಣೆ ಕೈಗೊಳ್ಳಬೇಕೆಂದರೆ, ಸಕಾಲಕ್ಕೆ ಪೊಲೀಸ್ ನೆರವು ದೊರೆಯದೆ ಅದೆಷ್ಟೋ ಬಾರಿ ಕಾರ್ಯಾಚರಣೆಯಿಂದ ಹಿಂದೆ ಸರಿದಿದ್ದು ಇಲ್ಲವೆ ಮುಂದೂಡಿದ್ದು ಇದೆ. ಪಾಲಿಕೆಯವರು ತಮಿಳುನಾಡಿನಿಂದ ಹಂದಿ ಹಿಡಿಯುವವರನ್ನು ಕರೆಸಿ ಕಾರ್ಯಾಚರಣೆಗೆ ಮುಂದಾದರೆ, ಈ ಬಗ್ಗೆ ಮಾಹಿತಿ ಪಡೆಯುವ ಹಂದಿ ಸಾಕುವವರು ಯಾವ ವಾರ್ಡ್‌ನಲ್ಲಿ ಕಾರ್ಯಾಚರಣೆ ನಡೆಯಲಿದೆಯೋ ಅಲ್ಲಿನ ಹಂದಿಗಳನ್ನು ಬೇರೆಡೆಗೆ ಓಡಿಸಿಬಿಡುತ್ತಾರೆ. ಹಂದಿ ಹಿಡಯುವವರ ಮೇಲೆ ಹಲ್ಲೆಗೆ ಮುಂದಾಗುವುದರಿಂದ ಅವರೂ ಕಾರ್ಯಾಚರಣೆಗೆ ಹಿಂದೇಟು ಹಾಕುತ್ತಿದ್ದಾರೆ.
ಇದೆಲ್ಲದರ ನಡೆವೆಯೂ ಪಾಲಿಕೆ ಹಂದಿ ವಿರುದ್ಧದ ಕಾರ್ಯಾಚರಣೆಗೆ ಮುಂದಾಗಿತ್ತಾದರೂ, ಇತ್ತೀಚೆಗೆ ತಮಿಳುನಾಡಿನಿಂದ ಬಂದಿದ್ದವರಲ್ಲಿ ಒಬ್ಬ ವ್ಯಕ್ತಿ ಹಂದಿ ಸಾಕಣೆ ವಾಹನ ಟೈರ್ ಸ್ಫೋಟಗೊಂಡು ಮೃತ ಪಟ್ಟ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ.
ಫಲಪ್ರದವಾಗದ ಸಂತತಿ ನಿಯಂತ್ರಣ ಕ್ರಮ : ಯಾವುದೇ ರಸ್ತೆಗೆ ಹೋದರೂ ಹಿಂಡು ಹಿಂಡು ಬೀದಿ ನಾಯಿಗಳು ಕಂಡು ಬರುತ್ತಿದ್ದು, ರಾತ್ರಿ ವೇಳೆ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರ ಫಜೀತಿ ಹೇಳ ತೀರದಾಗಿದೆ. ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿ ಕಚ್ಚಿದ ಪ್ರಕರಣಗಳು ಆಗಾಗ ವರದಿಯಾಗುತ್ತವೆ. ಅದೆಷ್ಟೋ ಸಣ್ಣ-ಪುಟ್ಟ ಪ್ರಕರಣಗಳು ವರದಿಯಾಗುತ್ತಿಲ್ಲ. ನಾಯಿ ಕಡಿತದ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಆದಾಗ, ಪುಟ್ಟ ಮಕ್ಕಳ ಮೇಲೆ ದಾಳಿ ನಡೆದಾಗ ಒಂದೆರೆಡು ದಿನ ಪಾಲಿಕೆ ಎಚ್ಚೆತ್ತಂತೆ ಮಾಡುತ್ತದೆ. ನಂತರ ಮರೆತೇ ಹೋಗುತ್ತದೆ. ಶುಕ್ರವಾರವಷ್ಟೇ ಹಳೇ ಹುಬ್ಬಳ್ಳಿಯ ಅಲ್ತಾಫ್ ನಗರದಲ್ಲಿ ಬೀದಿ ನಾಯಿ ಐದು ಮಕ್ಕಳಿಗೆ ಕಡಿದಿದೆ. ಮಹಾನಗರದ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಅಂದರೆ ಸುಮಾರು 15-20 ಸಾವಿರಕ್ಕೂ ಅಧಿಕ ನಾಯಿಗಳಿವೆ ಎಂದು ಹೇಳಲಾಗುತ್ತಿದೆ. ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಪಾಲಿಕೆ ಕೈಗೊಳ್ಳುತ್ತಿದ್ದರೂ, ಸಂತತಿ ನಿಯಂತ್ರಣ ಫಲಪ್ರದವಾಗಿಲ್ಲ. ಕೆಲವೊಂದು ನಾಯಿಗಳು ಶಸ್ತ್ರಚಿಕಿತ್ಸೆಯಿಂದ ಹೊರಗುಳಿಯುತ್ತವೆ. ಅವುಗಳಿಂದ ಸಂತಾನ ಮುಂದುವರಿಯುತ್ತಿದೆ. ಒಟ್ಟಿನಲ್ಲಿ ಪಾಲಿಕೆಗೆ ಹಂದಿ ಹಾಗೂ ಬೀದಿ ನಾಯಿ ಸವಾಲು ರೂಪದಲ್ಲಿ ಕಾಡತೊಡಗಿದೆ.
ಅವಳಿನಗರದಲ್ಲಿ ಮಾರಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿತ್ಯ 30-40 ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಎರಡು ವರ್ಷದಲ್ಲಿ ಎರಡು ಜೋಡಿ ನಾಯಿಗಳು ಕನಿಷ್ಠ 30 ಮರಿಗಳನ್ನು ಹಾಕುತ್ತಿರುವುದೇ ನಾಯಿಗಳ ಸಂತತಿ ಹೆಚ್ಚಲು ಕಾರಣವಾಗಿದೆ. ಹಂದಿಗಳ ಸಾಗಣೆಗೆ ಪೊಲೀಸ್ ರಕ್ಷಣೆ ಕಾಯಂ ಆಗಿ ದೊರೆಯುವ ಅವಶ್ಯಕತೆ ಇದೆ. ಇಲ್ಲವಾದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. –ಡಾ| ಪ್ರಭು ಬಿರಾದಾರ, ವೈದ್ಯಾಧಿಕಾರಿ ಮಹಾನಗರ ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.