ಕಸವಿಸಿಗೆ ಬಯೋಗ್ಯಾಸ್ ಜಾಗೃತಿ
Team Udayavani, Sep 20, 2018, 5:20 PM IST
ಹುಬ್ಬಳ್ಳಿ: ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಪೋರ್ಟೆಬಲ್ ಜೈವಿಕ ಅನಿಲ (ಬಯೋ ಗ್ಯಾಸ್) ಉತ್ಪಾದನಾ ಘಟಕ ಅಳವಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಈ ದಿಸೆಯಲ್ಲಿ ಮಹಾನಗರ ಪಾಲಿಕೆ ಚಿಟಗುಪ್ಪಿ ಉದ್ಯಾನದಲ್ಲಿ ಘಟಕವನ್ನಿಟ್ಟು ಕಾರ್ಯದ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.
ಬೆಂಗಳೂರಿನ ಜೆಎಂಎಸ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಉತ್ಪಾದಿಸಿದ ಬಯೋ ಗ್ಯಾಸ್ ಘಟಕವನ್ನಿಟ್ಟು ಅದರಲ್ಲಿ ಹಸಿ ಆಹಾರ ತ್ಯಾಜ್ಯವನ್ನು ಹಾಕಿ ಅನಿಲ ಉತ್ಪಾದನೆಯ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಹೋಟೆಲ್, ರೆಸಾರ್ಟ್, ಹಾಸ್ಟೆಲ್‌ಗಳು, ದೊಡ್ಡ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡುವ ಅಡುಗೆ ಘಟಕಗಳಲ್ಲಿ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಪ್ರತಿ ದಿನ ಆಹಾರ ತ್ಯಾಜ್ಯವನ್ನು ಹಾಕಿದರೆ ಇದರಿಂದ ಅಡುಗೆ ಅನಿಲ ಪಡೆದುಕೊಳ್ಳಬಹುದಾಗಿದೆ.
ಸಾಮಾನ್ಯವಾಗಿ ಜೈವಿಕ ಅನಿಲ ಉತ್ಪಾದನೆ ಘಟಕವನ್ನು ಕಾಂಕ್ರಿಟ್‌ನಿಂದ ಮಾಡಲಾಗುತ್ತಿದೆ. ಆದರೆ ಇದು ಪೋರ್ಟೆಬಲ್ ಆಗಿದ್ದರಿಂದ ಇದನ್ನು ಎಲ್ಲಿ ಬೇಕಾದಲ್ಲಿ ಸ್ಥಳಾಂತರಿಸಬಹುದು. ಬೆಂಗಳೂರಿನ ಜೆಎಂಎಸ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್ ವಿನ್ಯಾಸಗೊಳಿಸಿದೆ. ಘಟಕ 160 ಸೆಂಮೀ ಉದ್ದ, 130 ಸೆಂಮೀ ಅಗಲ ಹಾಗೂ 180 ಸೆಂಮೀ ಎತ್ತರ ಹೊಂದಿದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಪಾಲಿ ಕಾರ್ಬೋನೇಟ್ ಶೀಟ್‌ನಿಂದ ಹೊರಕವಚ ಮಾಡಲಾಗಿದೆ. ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಜೈವಿಕ ಅನಿಲ ಬಳಕೆ ಮಾಡಬಹುದು. ಇದರಲ್ಲಿನ ಡೈಜೆಸ್ಟರ್‌ನಲ್ಲಿ ಅನಿಲ ಉತ್ಪಾದನೆಯಾಗುತ್ತದೆ. ಉಳಿದ ತ್ಯಾಜ್ಯ ಸ್ಲರಿ ರೂಪದಲ್ಲಿ ಸಿಗುತ್ತದೆ. ಇದನ್ನು ಉದ್ಯಾನಗಳು, ಕೈತೋಟಗಳಿಗೆ ಗೊಬ್ಬರವಾಗಿ ಬಳಕೆ ಮಾಡಬಹುದು. ಘಟಕಕ್ಕೆ 1,15,000 ರೂ. ಬೆಲೆ ನಿಗದಿಪಡಿಸಲಾಗಿದೆ.
ಪ್ರಸ್ತುತ ಹೋಟೆಲ್‌ಗಳಲ್ಲಿ ಆಹಾರ ತ್ಯಾಜ್ಯವನ್ನು ಕಸಕ್ಕೆ ಹಾಕಲಾಗುತ್ತದೆ, ಇಲ್ಲವೇ ದನಗಳಿಗೆ ಹಾಕಲಾಗುತ್ತದೆ. ಆದರೆ ಆಹಾರ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಇದ್ದರೆ ಇದರಿಂದ ದನ ಕರುಗಳ ದೇಹಕ್ಕೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಚರಂಡಿಗೆ ಇದನ್ನು ಸುರಿಯುವುದರಿಂದ ಅಲ್ಲಿ ಹಂದಿ ಹಾಗೂ ನಾಯಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆಹಾರ ತ್ಯಾಜ್ಯ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಪೋರ್ಟೆಬಲ್ ಬಯೋಗ್ಯಾಸ್ ಉತ್ಪಾದನಾ ಘಟಕ ನೆರವಾಗಲಿದೆ. ಅಲ್ಲದೇ ಇದರಿಂದ ಅನಿಲವನ್ನು ಕೂಡ ಉತ್ಪಾದನೆ ಮಾಡಿಕೊಳ್ಳಬಹುದಾಗಿದೆ
ರೋಗಿಗಳಿಗೆ ಅನುಕೂಲ
ಚಿಟಗುಪ್ಪಿ ಆಸ್ಪತ್ರೆಯ ರೋಗಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಸ್ಪತ್ರೆ ಸಮೀಪ ಸ್ಥಾಪಿಸಲಾಗಿದೆ. ಅನಿಲ ಒಲೆ ಜೋಡಿಸಿ ಅಲ್ಲಿ ನೀರು ಕಾಯಿಸಲಾಗುತ್ತದೆ. ಅಲ್ಲಿ ಪ್ರತಿದಿನ ಸುಮಾರು 30 ಬಾಣಂತಿಯರಿಗೆ ಸ್ನಾನಕ್ಕಾಗಿ ಹಾಗೂ ಕುಡಿಯಲು ಬಿಸಿ ನೀರು ಒದಗಿಸುವುದು ಉದ್ದೇಶವಾಗಿದೆ. ಘಟಕ ನಿರಂತರವಾಗಿ ಅಲ್ಲಿ ಕಾರ್ಯನಿರ್ವಹಿಸಲಿದೆ.
30 ದಿನಗಳಲ್ಲಿ ಎರಡು ಸಿಲಿಂಡರ್ ಗ್ಯಾಸ್!
ಸದ್ಯ ಪ್ರದರ್ಶಿಸಲಾಗುತ್ತಿರುವ ಘಟಕ 3 ಕ್ಯುಬಿಕ್ ಮೀಟರ್ ಸಾಮರ್ಥ್ಯ ಹೊಂದಿದ್ದು, ಇದರಿಂದ 30 ದಿನಗಳಲ್ಲಿ 1ರಿಂದ 2 ಸಿಲಿಂಡರ್ (ಗೃಹ ಬಳಕೆ ಸಾಮರ್ಥ್ಯದ) ಅನಿಲ ಪಡೆಯಬಹುದು. ಪ್ರತಿದಿನ 25 ಕೆಜಿ ಆಹಾರ ತ್ಯಾಜ್ಯವನ್ನು ಸುರಿಯಬೇಕು. ಘಟಕ ಆರಂಭಗೊಂಡ ತಕ್ಷಣ ಸೆಗಣಿ ಗೊಬ್ಬರವನ್ನು ಹಾಕಿ 18 ದಿನಗಳ ಕಾಲ ಬಿಡಬೇಕು. ನಂತರ ಘಟಕ ಕಾರ್ಯಾರಂಭವಾಗುತ್ತದೆ. ಇದರ ಹತ್ತಿರ ನಿಂತರೂ ಕೆಟ್ಟ ವಾಸನೆ ಬರುವುದಿಲ್ಲ. ಇದನ್ನು ಡೇರಿ ಘಟಕ, ಪೌಲಿó, ತರಕಾರಿ ವ್ಯಾಪಾರ ಘಟಕಗಳಲ್ಲಿಯೂ ಬಳಕೆ ಮಾಡಿಕೊಳ್ಳಬಹುದು. ಘಟಕದಿಂದ ಉತ್ಪಾದನೆಯಾಗುವ ಅನಿಲದಿಂದ ಜನರೇಟರ್ ಕೂಡ ನಡೆಸಬಹುದಾಗಿದೆ.
ನಿಮ್ಮ ತ್ಯಾಜ್ಯವನ್ನು ನೀವೇ ನಿರ್ವಹಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಅದರಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಘಟಕ ಸ್ಥಾಪಿಸಲಾಗಿದೆ. ಡೆಮೊ ಆರಂಭಗೊಂಡು 5 ದಿನಗಳಾಗಿವೆ. ಸದ್ಯಕ್ಕೆ ಘಟಕದಲ್ಲಿ ಸೆಗಣಿಯನ್ನು ಹಾಕಲಾಗಿದ್ದು, 15 ದಿನಗಳ ನಂತರ ಅನಿಲ ಉತ್ಪಾದನೆ ಆರಂಭಗೊಳ್ಳಲಿದೆ. ನಂತರ ಪ್ರತಿದಿನ ಆಹಾರ ತ್ಯಾಜ್ಯವನ್ನು ಹಾಕಿದ 2 ಗಂಟೆಗಳಲ್ಲಿ ಅನಿಲ ಉತ್ಪಾದನೆಗೊಳ್ಳಲಿದೆ. ಹೋಟೆಲ್, ಪಿಜಿ, ಹಾಸ್ಟೆಲ್‌ನವರು ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ಅನಿಲ ಉತ್ಪಾದಿಸಿಕೊಳ್ಳಬಹುದಾಗಿದೆ.
. ನಯನಾ, ಮಹಾನಗರ ಪಾಲಿಕೆ ಅಭಿಯಂತರರು
ಈಗಾಗಲೇ ರಾಜ್ಯದ ವಿವಿಧೆಡೆ ಬಯೋ ಗ್ಯಾಸ್ ಘಟಕಗಳನ್ನು ಅಳವಡಿಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕಡಿಮೆ ಜಾಗದಲ್ಲಿ ಘಟಕ ಅಳವಡಿಸಬಹುದಾಗಿದೆ. ಇದರಿಂದ ಆಹಾರ ತ್ಯಾಜ್ಯ ನಿರ್ವಹಣೆ ಸುಲಭವಾಗಲಿದೆ. ಉದ್ಯಾನಕ್ಕೆ ಬಂದ ಅನೇಕ ಜನರು ಘಟಕದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
. ನವೀನ್ ದೊಡ್ಡಮನಿ,
ಪ್ರಾಜೆಕ್ಟ್ ಮ್ಯಾನೇಜರ್, ಜೆಎಂಎಸ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್
ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.