ಫಲಿತಾಂಶಕ್ಕೂ ಮುನ್ನವೇ ಡಿಕೆಶಿ ಗೋವಾಕ್ಕೆ ಗೂಂಡಾಗಿರಿ ಮಾಡಲು ಹೋಗಿದ್ದರೆ?: ಜೋಶಿ ಪ್ರಶ್ನೆ
Team Udayavani, Mar 13, 2022, 12:09 PM IST
ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ವೀಕ್ಷಕರು ಫಲಿತಾಂಶಕ್ಕೂ ಮುನ್ನ ಗೋವಾಕ್ಕೆ ಹಾಗೂ ಉತ್ತರಾಖಂಡಕ್ಕೆ ಯಾಕೆ ಹೋಗಿದ್ದರು ಎನ್ನುವುದು ಇನ್ನೂ ಅರ್ಥವಾಗಿಲ್ಲ. ಅವರೇನು ತೋಳುಬಲ ತೋರಿಸಲು, ಗೂಂಡಾಗಿರಿ ಮಾಡಲು ಹೋಗಿದ್ದರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಗೋವಾಕ್ಕೆ ಹಾಗೂ ಉತ್ತರಾಖಂಡಕ್ಕೆ 13 ವೀಕ್ಷಕರು ಬಂದಿದ್ದರು. ಚುನಾವಣೆಯನ್ನು ಕಾಂಗ್ರೆಸ್ ಕುಸ್ತಿಯ ಕಣ, ಡಬ್ಲ್ಯುಡಬ್ಲ್ಯುಎಫ್ ಎಂದುಕೊಂಡಿದೆಯಾ? ಜನ ತೀರ್ಪು ಕೊಡುವ ಮುನ್ನವೇ ಇವರು ಅಲ್ಲಿಗೆ ತೆರಳಿದ್ದಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎಂಬಂತೆ ಕಾಂಗ್ರೆಸ್ ನಡೆಯಾಗಿದೆ. ಫಲಿತಾಂಶ ಬರುವ ಮುನ್ನವೇ ಅಲ್ಲಿಗೆ ಹೋಗಿ ಗೂಂಡಾಗಿರಿ ಮಾಡಲು ತಯಾರಿ ಮಾಡಿದ್ದರೆ. ಕಾಂಗ್ರೆಸ್ ನ ಈ ನಡೆ ಗೊತ್ತಾಗುತ್ತಿಲ್ಲ ಎಂದರು.
ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜಿಸಬೇಕೆಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಅದನ್ನು ರಾಹುಲ್ ಗಾಂಧಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಅದಕ್ಕೆ ಅವರಿಗೆ ಶುಭ ಕೋರುವೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಬಗ್ಗೆ ಜನ ನಂಬಿಕೆ ಇಟ್ಟಿದ್ದಾರೆ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ದೂರಿ ಗೆಲುವು ಸಾಧಿಸಿದೆ. ಜಗತ್ತಿನ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ. ಉತ್ತರಾಖಂಡಕ್ಕೆ ಪ್ರಧಾನಿ ನಾಲ್ಕು ದಿನ ಭೇಟಿ ಕೊಟ್ಟಿದ್ದು ಪಕ್ಷದ ಗೆಲುವಿಗೆ ಕಾರಣವಾಯಿತು. ಅದಕ್ಕೆ ನಾನೊಬ್ಬನೇ ಕಾರಣ ಅಂತ ಹೇಳುವುದಿಲ್ಲ. ಅಲ್ಲಿ 80 ಸಾವಿರ ಸಭೆಗಳನ್ನು ಮಾಡಿದ್ದು ಮೈಲುಗಲ್ಲಾಯಿತು. ಉತ್ತರಾಖಂಡ ರಾಜ್ಯ ಅಭಿವೃದ್ಧಿ ಕಂಡಿದ್ದೆ ಕಳೆದೈದು ವರ್ಷದಲ್ಲಿ. ಕಾಂಗ್ರೆಸ್ ಇನ್ನಾದರೂ ನೆಗೆಟಿವ್ ಪ್ರಚಾರ ಮಾಡುವುದನ್ನು ಬಿಡಬೇಕು ಎಂದರು.
ಇದನ್ನೂ ಓದಿ:ಮುಂದಿನ ಚುನಾವಣೆಗೆ ಈಗಿನಿಂದಲೇ ತಂತ್ರ; ದಾವಣಗೆರೆ ಉತ್ತರ ಕ್ಷೇತ್ರದತ್ತ ಬೊಮ್ಮಾಯಿ ಚಿತ್ತ?
ಪಂಜಾಬ್ ನಲ್ಲಿ ನಾವು ಅಕಾಲಿದಳದ ಜೊತೆಗೆ ಜ್ಯೂನಿಯರ್ ಪಾರ್ಟ್ನರ್ ಆಗಿದ್ದೇವು. ಹೀಗಾಗಿ ಅಲ್ಲಿ ನಮಗೆ ಹಿನ್ನಡೆಯಾಗಿದೆಯಷ್ಟೆ. ಮುಂದಿನ ಚುನಾವಣೆ ವೇಳೆಗೆ ಅಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ. ಬಿಜೆಪಿ ಗೆಲುವು ಸಾಧಿಸಿದ ನಾಲ್ಕು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ ಎಂದರು.
ಅಧಿವೇಶನ ನಂತರ ಸಂಪುಟ ವಿಸ್ತರಣೆ: ಅಧಿವೇಶನದ ನಂತರ ಮಂತ್ರಿ ಮಂಡಲ ವಿಸ್ತರಣೆ ಚರ್ಚೆ ಆಗಲಿದೆ. ಮುಖ್ಯಮಂತ್ರಿಗಳು ದೆಹಲಿಗೆ ಬಂದು ಪಕ್ಷದ ಹಿರಿಯ ಮುಖಂಡರ ಜೊತೆಗೆ ಚರ್ಚೆ ಮಾಡಲಿದ್ದಾರೆ. ಏಪ್ರಿಲ್ 8ರ ವರೆಗೆ ಅಧಿವೇಶನ ಇದೆ. ಅದರ ನಂತರ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬೆಳವಣಿಗೆ ಆಗಲಿದೆ. ಸದ್ಯ ಯಾವುದೇ ಪ್ರಕ್ರಿಯೆ ಆಗಲ್ಲ ಎಂದರು.
ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲೂ ಆ ದೇಶಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸಿ ದೇಶದ 22ಸಾವಿರ ಜನರನ್ನು ರಕ್ಷಿಸಿ, ದೇಶಕ್ಕೆ ಕರೆತಂದರು. ಇದು ಮೋದಿ ಅವರ ವ್ಯಕ್ತಿತ್ವದ ಗಟ್ಟಿತನ ತೋರಿಸುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.