ಪ್ರಹ್ಲಾದ ಜೋಶಿ ಬೃಹತ್ ರೋಡ್ ಶೋ
Team Udayavani, Apr 22, 2019, 11:17 AM IST
ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರವಾಗಿ ದುರ್ಗದ ಬಯಲಿನಿಂದ ರವಿವಾರ ಬೃಹತ್ ರೋಡ್ ಶೋ ನಡೆಸಿ ಮತಯಾಚನೆ ಮಾಡಲಾಯಿತು.
ಸಾವಿರಾರು ಕಾರ್ಯಕರ್ತರೊಂದಿಗೆ ವಿವಿಧ ವಾದ್ಯ ಮೇಳದೊಂದಿಗೆ ಆರಂಭಗೊಂಡ ಮೆರವಣಿಗೆಯಲ್ಲಿ ಮೋದಿ ಪರ, ಸಂಸದ ಪ್ರಹ್ಲಾದ ಜೋಶಿ ಪರ ಘೋಷಣೆಗಳನ್ನು ಹಾಕುತ್ತಾ ಮತಯಾಚನೆ ಮಾಡಲಾಯಿತು. ದುರ್ಗದ ಬಯಲಿನಿಂದ ಆರಂಭಗೊಂಡ ಮೆರವಣಿಗೆ ಬ್ರಾಡ್‌ವೇ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜೀಬಾನ ಪೇಟೆ ಮೂಲಕ ಮೂರುಸಾವಿರ ಮಠದ ಮುಂಭಾಗದಲ್ಲಿ ಅಂತ್ಯಗೊಂಡಿತು.
ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ವಿ. ಸೋಮಣ್ಣ, ಕಳೆದ ಮೂರು ಚುನಾವಣೆಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಸಂಸದ ಪ್ರಹ್ಲಾದ ಜೋಶಿ ಅವರು ಈ ಬಾರಿ ಇನ್ನೂ ಹೆಚ್ಚು ಮತಗಳಿಂದ ಜಯ ಗಳಿಸಬೇಕು. ಇಡೀ ನಾಡಿಗೆ ಗೊತ್ತಾಗುವ ರೀತಿಯಲ್ಲಿ ಬಹುಮತ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಕೇಂದ್ರ ಸರಕಾರದ ವಿವಿಧ ಯೋಜನೆಗಳು, ನರೇಂದ್ರ ಮೋದಿ ಅವರ ಜನಪರ ಕಾರ್ಯಗಳು, ದೇಶಕ್ಕಾಗಿ ಅವರು ನೀಡಿರುವ ಕೊಡುಗೆಗಳು, ವಿಶೇಷವಾಗಿ ಮಹಿಳಾ ಯೋಜನೆಗಳ ಕುರಿತು ಮಾಹಿತಿ ನೀಡಿ ಮತಯಾಚನೆ ಮಾಡಿದರು.
ಅಭ್ಯರ್ಥಿ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ವಿಧಾನ ಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ, ಮಾ. ನಾಗರಾಜ, ಶಿವು ಮೆಣಸಿನಕಾಯಿ, ಅಶೋಕ ಕಾಟವೆ, ಶಿವಾನಂದ ಮುತ್ತಣ್ಣವರ, ನಾಗೇಶ ಕಲ್ಬುರ್ಗಿ, ಮೇನಕಾ ಹುರಳಿ ಇನ್ನಿತರರು ಇದ್ದರು.
ಕಲಬುರಗಿಯಲ್ಲಿ ಮತ ಯಂತ್ರ ಬದಲಿಸುವ ಸಾಧ್ಯತೆ
ಹುಬ್ಬಳ್ಳಿ: ಕಲಬುರಗಿಯಲ್ಲಿ ಮತದಾನ ನಂತರ ಮತಯಂತ್ರಗಳನ್ನು ಬದಲಿಸುವ ಸಾಧ್ಯತೆಗಳಿವೆ. ಇಡೀ ಜಿಲ್ಲಾ ಚುನಾವಣಾ ವ್ಯವಸ್ಥೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೀಗಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಬದಲಿಸುವಂತೆ ಚುನಾವಣಾ ಆಯೋಗಕ್ಕೆ ಮತ್ತೂಮ್ಮೆ ದೂರು ನೀಡಲಾಗುವುದು. ಇಡೀ ಚುನಾವಣಾ ವ್ಯವಸ್ಥೆ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಕೆಲಸ ಮಾಡುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರನ್ನು ವರ್ಗಾಯಿಸುವಂತೆ ಆಯೋಗಕ್ಕೆ ಬಿಜೆಪಿ ಕಾನೂನು ಮೋರ್ಚಾದಿಂದ ದೂರು ನೀಡಲಾಗಿತ್ತು. ಆದರೆ ಚುನಾವಣೆ ಆಯೋಗ ಈ ದೂರು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೀಗಾಗಿ ಚುನಾವಣೆ ನಂತರವಾದರೂ ಅವರನ್ನು ವರ್ಗಾಯಿಸುವಂತೆ ಮತ್ತೂಮ್ಮೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆಯವರು ಸೋಲುವ ಭಯದಿಂದ ಕ್ಷೇತ್ರ ಬಿಟ್ಟು ಬರಲಿಲ್ಲ. ಚುನಾವಣೆ ನಂತರವೂ ಕ್ಷೇತ್ರ ಬಿಟ್ಟು ಬರಲ್ಲ. ಈಗಾಗಲೇ ಅವರ ಪರ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೂಲಕ ಮತಯಂತ್ರಗಳನ್ನು ಬದಲಿಸುವ ಕೆಲಸಕ್ಕಾಗಿ ಅವರು ಹೊರ ಬರಲ್ಲ. ಆ ಕ್ಷೇತ್ರದ ನಮ್ಮ ಕಾರ್ಯಕರ್ತರು ಮಾಹಿತಿ ಸಂಗ್ರಹಿಸಿದ್ದು, ಅಲ್ಲಿ ಮತ ಯಂತ್ರಗಳನ್ನು ಬದಲಿಸುವ ಸಾಧ್ಯತೆಗಳಿವೆ ಎಂದು ಗಂಭೀರ ಆರೋಪ ಮಾಡಿದರು.
ದೇಶದ ರಕ್ಷಣೆಯಲ್ಲಿ ಮೋದಿ ಸರಕಾರ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ದೇಶದಲ್ಲಾದ ಅಭಿವೃದ್ಧಿ ಪರ ಯೋಜನೆಗಳು, ರಾಜ್ಯ ಸರಕಾರ ವೈಫಲ್ಯಗಳು ಹಾಗೂ ಬಿಜೆಪಿಯ ಶಕ್ತಿಯ ಮೇಲೆ ಈ ಚುನಾವಣೆ ಎದುರಿಸುತ್ತೇವೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಹರಿದು ಬಂದ ಸಾವಿರಾರು ಕೋಟಿ ರೂ. ಅನುದಾನ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಹಿರಂಗವಾಗಿ ಹೇಳಬೇಕು. ಇಲ್ಲದಿದ್ದರೆ ಕರಾಳ ಪತ್ರ ಹೊರಡಿಸಲಾಗುವುದು ಎಂದರು.
ಪೂಜೆ ಮಾಡಿಸಲು ಹೇಳಿದ್ದೇನೆ
ನನ್ನ ವಿರೋಧಿಗಳು ಸ್ವರ್ಗದಲ್ಲಿದ್ದಾರೆಂದು ಎಚ್.ಡಿ.ದೇವೇಗೌಡರು ಹೇಳಿಕೆ ನೀಡಿದ್ದು, ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಅವರಿಗೆ ತೊಂದರೆಯಾಗುವ ಸಾಧ್ಯಗಳಿವೆ ಎನ್ನುವ ಮುನ್ಸೂಚನೆಯಾಗಿದೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಒತ್ತಾಯಿಸುತ್ತೇನೆ. ಯಾವುದಾದರೂ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವಂತೆ ಹಾಸನ ಕ್ಷೇತ್ರದ ನಮ್ಮ ಅಭ್ಯರ್ಥಿ ಎ. ಮಂಜು ಅವರಿಗೂ ಹೇಳಿದ್ದೇನೆ. ರೇವಣ್ಣ ಅವರ ಕೈಯಲ್ಲಿರುವ ನಿಂಬೆಹಣ್ಣಿನಿಂದ ಯಾವುದೇ ತೊಂದರೆಯಾಗಬಾರದೆಂಬುದು ನಮ್ಮ ಉದ್ದೇಶ ಎಂದು ವ್ಯಂಗ್ಯವಾಡಿದರು.
ಕ್ಷೇತ್ರಕ್ಕೆ ಪ್ರಹ್ಲಾದ ಜೋಶಿ ಕೊಡುಗೆ ಏನೆಂದು ಕೇಳುತ್ತಿರುವ ವಿನಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ. ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣ ಆರೋಪಿ, ಕಿಮ್ಸ್ ವೈದ್ಯರ ಮೇಲೆ ಹಲ್ಲೆ ಮಾಡಿದ ವಿನಯ ಕುಲಕರ್ಣಿಗೆ ವಿಧಿಯಿಲ್ಲದೇ ಟಿಕೆಟ್ ನೀಡಲಾಗಿದೆಯೋ, ಒತ್ತಡ ಹೇರಿ ಟಿಕೆಟ್ ಪಡೆದಿದ್ದಾರೋ ಸ್ಪಷ್ಟವಾಗಬೇಕು ಎಂದರು.
ರಾಜ್ಯದಲ್ಲಿ ಮೊದಲ ಹಂತದಲ್ಲಿ ಬಿಜೆಪಿ 9, ದ್ವಿತೀಯ ಹಂತದಲ್ಲಿ 13 ಸ್ಥಾನ ಗಳಿಸುವುದು ನಿಶ್ಚಿತ. ತೇಜಸ್ವಿನಿ ಅನಂತಕುಮಾರ ಅನ್ಯಾಯ ಈಗ ಮುಗಿದ ಅಧ್ಯಾಯ. ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಿ ಸೂಕ್ತ ಸ್ಥಾನ-ಮಾನ ಕೊಡುವ ಭರವಸೆ ನೀಡಿದ್ದಾರೆಂದು ಹೇಳಿದರು.
ಕೈ ನಾಯಕರಿಂದ ದಾರಿ ತಪ್ಪಿಸುವ ಕೆಲಸ: ಮುನೇನಕೊಪ್ಪ
ನವಲಗುಂದ: ಪ್ರಹ್ಲಾದ ಜೋಶಿ ಪರವಾಗಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಪಟ್ಟಣದ ಬಸವೇಶ್ವರ ನಗರ ವಾರ್ಡ್ ಮತ್ತು ತಾಲೂಕಿನ ಹೆಬ್ಟಾಳ ಹಾಗೂ ಕರ್ಲವಾಡ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ತಮ್ಮ ನಿಲುವನ್ನು ಬಹಿರಂಗ ಪಡಿಸಬೇಕು. ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರು ಮಹದಾಯಿ ವಿಚಾರ ಬಳಸಿಕೊಂಡು ಜನರ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಸೇರಿ ಅನೇಕ ಕಾಂಗ್ರೆಸ್ ಮುಖಂಡರು ಮತ್ತೆ ಕಳಸಾ ಬಂಡೂರಿ ವಿಷಯ ಪ್ರಸ್ತಾಪಿಸುತ್ತಿದ್ದು ನೆಲ, ಜಲ ಹಾಗೂ ಭಾಷೆ ವಿಷಯದಲ್ಲಿ ರಾಜಕೀಯ ಮಾಡಿದವರಿಗೆಲ್ಲ ಏನು ಗತಿಯಾಗಿದೆ ಎಂಬುದು ಗೊತ್ತಿರುವ ವಿಚಾರವೆಂದು ಹರಿಹಾಯ್ದರು. ಸಿದ್ದನಗೌಡ ಪಾಟೀಲ, ಎನ್.ಪಿ. ಕುಲಕರ್ಣಿ, ಮಹಾಂತೇಶ ಕಲಾಲ, ರಾಜು ಜಾಲಿಹಾಳ, ಪರಶುರಾಮ ಕಲಾಲ, ಬಸವರಾಜ ಹೊಸಅಂಗಡಿ, ಮಂಜು ಸುಣಗಾರ, ರಾಜು ಕುಳಗೇರಿ, ವಿಜಯ ಕಟ್ಲಾಸ್ಕರ, ಮಂಜುನಾಥ ಅಕ್ಕಿ, ಶ್ರೀಕಾಂತ ಪಾಟೀಲ, ವೆಂಕಣ್ಣ ಗಾಯಕವಾಡ, ಹುಲಿಗೆಪ್ಪ ವಡ್ಡರ, ಫಕ್ಕಿರೇಶ ಹೂಗಾರ, ರುದ್ರಪ್ಪ ದನಮಾರು, ಸಿದ್ದು ಪೂಜಾರ, ಮತ್ತಿತರರಿದ್ದರು.
ಅಣ್ಣಿಗೇರಿಯಲ್ಲಿ ಪ್ರಚಾರ: ಪಟ್ಟಣದಲ್ಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಪ್ರಹ್ಲಾದ ಜೋಶಿ ಪರ ಪ್ರಚಾರ ಮಾಡಿದರು. ವಿದ್ಯಾನಗರ, ಗಾಂಧಿ ನಗರ, ಅಂಬೇಡ್ಕರ್ ನಗರ, ಹುಡೇದ ಬಯಲು, ಪೇಟೆ, ಜಾಡಗೇರಿ ಓಣಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಮತ ಯಾಚಿಸಿದರು. ಷಣ್ಮುಖಪ್ಪ ಗುರಿಕಾರ, ಸಿದ್ದನಗೌಡ ಪಾಟೀಲ, ನಿಜಲಿಂಗಪ್ಪ ಅಕ್ಕಿ, ಶಿವಯೋಗೆಪ್ಪ ಸುರಕೋಡ, ಪ್ರವೀಣ ಹಾಳದೋಟರ, ಚೆಂಬಣ್ಣ ಆಲೂರ, ಮಂಜುನಾಥ ಅಕ್ಕಿ, ಮಂಜುನಾಥ ದಿಡ್ಡಿ ಇನ್ನಿತರರಿದ್ದರು.
ಮೋದಿ ವಿರೋಧಿಗಳ ಒಗ್ಗಟ್ಟು ಹಾಸ್ಯಾಸ್ಪದ
ಅಳ್ನಾವರ: ಯಾವ ನಾಡಿನಲ್ಲಿ ದೊರೆ ಪ್ರಾಮಾಣಿಕವಾಗಿರುತ್ತಾನೋ ಅಂತಹ ನಾಡಿನಲ್ಲಿ ಕಳ್ಳರೆಲ್ಲ ಒಂದಾಗುತ್ತಾರೆ ಎನ್ನುವ ನೀತಿಯಂತೆ ಇಂದು ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಸೊಲಿಸಲು ವಿರೋಧಿಗಳೆಲ್ಲ ಒಂದಾಗಿರುವದು ಹಾಸ್ಯಾಸ್ಪದ ಎಂದು ಬೆಳಗಾವಿ ಮಾಜಿ ಶಾಸಕ, ಬಿಜೆಪಿ ಮುಖಂಡ ಸಂಜಯ ಪಾಟೀಲ ಹೇಳಿದರು. ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ಕಳೆದ ಐದು ವರ್ಷದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕಿದೆ. ಈಗಿನ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಚುನಾವಣೆಯಲ್ಲ. ದೇಶದ ಹಿತದೃಷ್ಟಿಯಿಂದ ನಡೆಯುತ್ತಿರುವ ಚುನಾವಣೆಯಾಗಿದೆ ಎಂದರು. ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ ಸಂಜಯ ಯುವಕರನ್ನು ಸೆಳೆಯಲು ಯಶಸ್ವಿಯಾದರು.
ಚನ್ನಬಸವೇಶ್ವರ ನಗರ ಹಾಗೂ ವಿಜಯಾನಂದ ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಸಹ ಅತೀ ಹೆಚ್ಚು ಸಂಸದರನ್ನು ನೀಡಿದರೆ ಮೋದಿ ಮತ್ತೂಮ್ಮೆ ಪ್ರಧಾನಿಯಾಗುವರು. ಇದರಿಂದ ದೇಶ ಮತ್ತಷ್ಟು ಬಲಿಷ್ಠವಾಗಲಿದೆ ಎಂದರು.
ರಾಜ್ಯದಲ್ಲಿ 24 ಸೀಟ್‌ಗಳನ್ನು ಗೆಲ್ಲುವ ಭರವಸೆ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಇದೆ. ಆದರೆ ತಮ್ಮ ಪ್ರಕಾರ ಮಂಡ್ಯ ಸೇರಿದಂತೆ ಒಟ್ಟು 26 ಸೀಟ್‌ಗಳು ಬರಲಿವೆ. ರಾಜ್ಯದಲ್ಲಿ ಬಿಜೆಪಿಯಿಂದ ಬೃಹತ್ ಶಕ್ತಿ ಪ್ರದರ್ಶನವಾಗುವುದು ನಿಶ್ಚಿತ ಎಂದು ಹೇಳಿದರು.
ಮೋದಿ ಅವರ ಕೈ ಬಲಪಡಿಸಲು ಜೋಶಿ ಅವರನ್ನು ಮತ್ತೂಮ್ಮೆ ಆಯ್ಕೆ ಮಾಡಬೇಕು. ಪ್ರತಿಯೊಬ್ಬರು ಐತಿಹಾಸಿಕ ಚುನಾವಣೆಯಲ್ಲಿ ಮತ ಚಲಾಯಿ ಸಬೇಕು. ಜೋಶಿ ಅವರನ್ನು ಮತ್ತೂಮ್ಮೆ ಆಯ್ಕೆ ಮಾಡಬೇಕು ಎಂದರು.
ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿದರು. ಮಾಜಿ ಮೇಯರ್ ಶಿವು ಹಿರೇಮಠ, ವಿಶ್ರಾಂತ ಕುಲಪತಿ ಡಾ|ಎಂ.ಐ. ಸವದತ್ತಿ, ಪೊ|ವಿ.ಸಿ. ಸವಡಿ, ಪ್ರೊ| ಮೋಹನ ಸಿದ್ದಾಂತಿ, ಅಮೃತ ನರೇಂದ್ರ, ಗಂಗಾಧರ ಬಳ್ಳಾರಿ, ಚಂಬೈಯ್ಯ ಅಂಗಡಿ, ವಿಜಯಾನಂದ ಶೆಟ್ಟಿ, ಬಲರಾಮ ಕುಸುಗಲ್ಲ, ಟಿ.ವಿ. ಪಾಟೀಲ, ಸಿದ್ದು ಸವಡಿ, ವೀರೇಶ ಸಂಗಳದ, ಮೋಹನ ರಾಮದುರ್ಗ, ಮೋಹನ ರಾಮದುರ್ಗ, ಶಿವು ಸೋಭಾನ ಇದ್ದರು.
ಜಿಲ್ಲೆಯ ರೈತರ ಬೆಳೆ ವಿಮೆ ಪರಿಹಾರ ಸಮಸ್ಯೆಯಾದಾಗ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ರೈತರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಕೇಂದ್ರ ಸರಕಾರದ ಫಸಲ್ ಭಿಮಾ ಯೋಜನೆ ರೈತರ ಬೆಳೆ ನಷ್ಟವಾದರೂ ಜೀವನಕ್ಕೆ ಆಧಾರವಾಗಿದೆ. ಇಂತಹ ಹಲವು ಯೋಜನೆಗಳು ಕೇಂದ್ರ ಸರಕಾರದಿಂದ ರೈತರಿಗೆ ನೀಡಲಾಗಿದೆ. ಹೀಗಾಗಿ ನರೇಂದ್ರ ಮೋದಿ ಪ್ರಧಾನಿಯಾಗಿ, ಪ್ರಹ್ಲಾದ ಜೋಶಿ ಸಂಸದರಾಗಿ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾರುತಿ ಕಲಘಟಗಿ, ಮುತ್ತು ಚಕಾರಿ, ಯಲ್ಲಪ್ಪ ಶಿಗ್ಗಾಂವ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.