ಕೌಶಲ ವೃದ್ಧಿಗೆ ಪ್ರತಿಭಾ ಕಾರಂಜಿ ಪೂರಕ
Team Udayavani, Jul 27, 2018, 4:19 PM IST
ಅಳ್ನಾವರ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಪರಿಪೂರ್ಣತೆಯತ್ತ ಸಾಗುವಂತೆ ಮಾಡಲು ಹಾಗೂ ಅವರ ವ್ಯಕ್ತಿತ್ವ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಿಂಗಪ್ಪ ಘಾಟಿನ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ನಡೆದ ಅಳ್ನಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಲು ಇದು ಸೂಕ್ತ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಮಕ್ಕಳ ಸಂವೇದನಶೀಲತೆ, ಆತ್ಮವಿಶ್ವಾಸ, ಬುದ್ಧಿಶಕ್ತಿ ಅನಾವರಣಗೊಳ್ಳುತ್ತದೆ. ಇದರಿಂದ ಸಮಾಜದ ಪರಿವರ್ತನೆ ಮಾಡಲು ಯುವ ಮನಸ್ಸುಗಳಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದರು.
ಅಳ್ನಾವರ, ಕಾಶೇನಟ್ಟಿ, ಬೆಣಚಿ, ಕಡಬಗಟ್ಟಿ, ಹುಲಿಕೇರಿ ಶಾಲೆಗಳ ಸುಮಾರು 300 ಸ್ಪರ್ಧಾಳುಗಳು ಭಾಗಿಯಾಗಿದ್ದರು. 30ಕ್ಕೂ ಹೆಚ್ಚು ಸ್ಪರ್ಧೆಗಳು ನಡೆದವು. ಎಕ್ಸೆಲ್ ಲೈಫ್ ಇನ್ಸುರೆನ್ಸ್ ಕಂಪನಿಯ ಧಾರವಾಡ ಶಾಖೆ ಮುಖ್ಯಸ್ಥ ಆನಂದಸಿಂಗ್ ರಜಪೂತ ಸ್ಪರ್ಧಾ ವಿಜೇತರ ಬಹುಮಾನಗಳ ಪ್ರಾಯೋಜಕತ್ವ ವಹಿಸಿದ್ದರು. ಪಪಂ ಅಧ್ಯಕ್ಷೆ ಭಾಗ್ಯವತಿ ಕುರುಬರ, ಉಪಾಧ್ಯಕ್ಷ ಕಿರಣ ಗಡಕರ, ಎಸ್ ಡಿಎಂಸಿ ಅಧ್ಯಕ್ಷ ಉಸ್ಮಾನ ಬಾತಖಂಡಿ, ರೊಜಾರಿಯೊ ಫರ್ನಾಂಡಿಸ್, ಮಂಜುಳಾ ಮೇದಾರ, ಅನಪೂರ್ಣಾ ಹಿರೇಮಠ, ಬಿಆರ್‌ಸಿ ಎಸ್.ಸಿ. ಅಂಗಡಿ, ಚಿನ್ನಮ್ಮ ಬಾಗಲಕೋಟಿ, ಆರ್.ವಿ. ಪಂಚಾಳ, ಎಚ್.ಎಸ್. ಬಡಿಗೇರ, ಎಂ.ಐ. ದಿವಟಗಿ, ಪುಂಡಲೀಕ ಪಾರದಿ, ದೀಪಾ ಲಾಡ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು
Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್ ಅಧ್ಯಕ್ಷ ಸಮ್ಮತಿ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.