“ಪ್ರವಾಸಿ ಮಿತ್ರರು’ ಸಂಕಷ್ಟದಲ್ಲಿ: ವರ್ಷದಲ್ಲಿ 6 ತಿಂಗಳಷ್ಟೇ ಕೆಲಸ; ಭರವಸೆಗಳು ಯೋಜನೆಗೆ ಸೀಮಿತ
Team Udayavani, Jan 8, 2023, 7:40 AM IST
ಹುಬ್ಬಳ್ಳಿ: ರಾಜ್ಯ ಪ್ರವಾಸೋದ್ಯಮ ಪ್ರಗತಿಗೆ ರೂಪಿತಗೊಂಡಿದ್ದ “ಪ್ರವಾಸಿ ಮಿತ್ರ’ ಯೋಜನೆ ದಾರಿ ತಪ್ಪಿದ್ದು, ಪ್ರವಾಸಿಗರ ಸುರಕ್ಷೆ, ಪ್ರವಾಸಿ ತಾಣದ ಸಂರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿದ್ದ ಪ್ರವಾಸಿ ಮಿತ್ರರು ಅಕ್ಷರಶಃ ಅತಂತ್ರರಾಗಿದ್ದಾರೆ. ಕಡಿಮೆ ಗೌರವಧನ ಒಂದೆಡೆಯಾದರೆ ಮೂರು ತಿಂಗಳು ಕೆಲಸ, ಮೂರು ತಿಂಗಳು ಕೂಲಿ ನಾಲಿ ಮಾಡುವಂತಾಗಿದ್ದು, ಯೋಜನೆ ಮೂಲ ಉದ್ದೇಶಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ.
2015ರಲ್ಲಿ ದೇಶದಲ್ಲೇ ಮೊದಲ ಬಾರಿಗೆ “ಪ್ರವಾಸಿ ಮಿತ್ರ’ ಯೋಜನೆ ಯಡಿ ಗೃಹ ರಕ್ಷಕದಳ ಸಿಬಂದಿಯನ್ನು ನಿಯೋಜಿಸಲಾಗಿತ್ತು. ಅರ್ಹರಿಗೆ ಒಂದು ತಿಂಗಳ ವಿಶೇಷ ತರಬೇತಿಯಲ್ಲಿ ಪ್ರವಾಸಿ ತಾಣ, ಕೆಲ ಪೊಲೀಸ್ ನಿಯ ಮಗಳು, ಕರ್ತವ್ಯ-ಹೊಣೆಗಾರಿಕೆ ವಿಷಯಗಳಲ್ಲಿ ಸಜ್ಜುಗೊಳಿಸಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಹಂಚಿಕೆ ಮಾಡಲಾಗಿತ್ತು. ಈಗ 930 ಪ್ರವಾಸಿ ಮಿತ್ರರು ತರಬೇತಿ ಪಡೆದಿದ್ದು, ತರಬೇತಿಗಾಗಿ ಒಬ್ಬರಿಗೆ ಸುಮಾರು 85-90 ಸಾವಿರ ರೂ. ಖರ್ಚು ಮಾಡಲಾಗಿದೆ. ಎರಡನೇ ಹಂತದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರವನ್ನೂ ನೀಡಿಲ್ಲ.
ವರ್ಷ ಪೂರ್ತಿ ಕೆಲಸ ಕೊಡಿ
ಪ್ರವಾಸಿಮಿತ್ರರು ವರ್ಷದಲ್ಲಿ ಆರು ತಿಂಗಳು ನಿರುದ್ಯೋಗಿಗಳಾಗಿರುತ್ತಾರೆ. ಗೃಹ ರಕ್ಷಕ ದಳದ ಸಿಬಂದಿಗೆ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಆರ್‌ಟಿಒ, ಅಬಕಾರಿ, ಧಾರ್ಮಿಕ ದತ್ತಿ ಇಲಾಖೆ ಮುಂತಾದ ಕಚೇರಿಗಳಲ್ಲಿ ನಿರಂ ತರವಾಗಿ ಕೆಲಸ ದೊರೆಯುತ್ತಿದೆ. ಆದರೆ ಪ್ರವಾಸಿ ಮಿತ್ರ ತರಬೇತಿ ಪಡೆದಿ ರುವವರನ್ನು ಪ್ರವಾಸಿ ತಾಣ ಹೊರತು ಪಡಿಸಿ ಇತರ ಕಾರ್ಯಕ್ಕೆ ಕಳುಹಿಸುತ್ತಿಲ್ಲ. ಹೀಗಾಗಿ ವರ್ಷಪೂರ್ತಿ ಕೆಲಸ ಸಿಗು ತ್ತಿಲ್ಲ. ನಮಗೆ ನಿರಂತರ ಕೆಲಸ ಕೊಡಿ ಎನ್ನುವುದು ಪ್ರವಾಸಿಮಿತ್ರರ ಅಗ್ರಹ.
ಲಿಖಿತ ಆಕ್ಷೇಪಕ್ಕೂ ಬೆಲೆಯಿಲ್ಲ
ಪ್ರವಾಸೋದ್ಯಮ ಇಲಾಖೆಯಿಂದ ಕೋಟ್ಯಂತರ ರೂ. ಖರ್ಚು ಮಾಡಿ ತರಬೇತಿ ನೀಡಲಾಗಿದೆ. ಹೀಗಾಗಿ ಈ ಸಿಬಂದಿ ಸೇವೆಯನ್ನು ಆಯಾ ತಾಣಗಳಲ್ಲೇ ಮುಂದುವರಿಸಬೇಕು ಹಾಗೂ ಇತರ ಕರ್ತವ್ಯಗಳಿಗೆ ನಿಯೋ ಜಿಸಬಾರದೆಂದು ಗೃಹರಕ್ಷಕ ಮತ್ತು ಪೌರರಕ್ಷಣ ಇಲಾಖೆಯ ಆರಕ್ಷಕ ಮಹಾ ನಿರ್ದೇಶಕರಿಗೆ ಪ್ರವಾಸೋ ದ್ಯಮ ಇಲಾಖೆ ನಿರ್ದೇಶಕರು ಲಿಖಿತವಾಗಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ.
ಸೌಲಭ್ಯಗಳು ಗೌಣ
ಪ್ರವಾಸಿ ಮಿತ್ರರು ನಿತ್ಯ 384 ರೂ. ಭತ್ತೆ ಪಡೆಯುತ್ತಿದ್ದು, ತಿಂಗಳಿಗೆ 11,400 ರೂ.ಆಗುತ್ತಿದೆ. ಇದು ಕನಿಷ್ಠ ವೇತನವನ್ನೂ ಮುಟ್ಟಿಲ್ಲ. ಇತರ ಗೃಹ ರಕ್ಷಕ ಸಿಬಂದಿ ಪೊಲೀಸ್ ಠಾಣೆ ಕರ್ತವ್ಯಕ್ಕೆ 750 ರೂ. ಇತರ ಇಲಾಖೆ ಯಲ್ಲಿ 600 ರೂ. ಭತ್ತೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಸಮವಸ್ತ್ರ ನೀಡಿದ್ದು ಬಿಟ್ಟರೆ ಮತ್ತೆ ವಿತರಿಸಿಲ್ಲ. ಸಂಚಾರಿ ಭತ್ತೆ ಅಥವಾ ಬಸ್ ಪಾಸ್ ನೀಡುವುದು ಸಹಿತ ಹಲವು ಭರವಸೆಗಳು ಈಡೇರಿಲ್ಲ. ರಾಜ್ಯದಲ್ಲಿ 1000 ಸಾವಿರಕ್ಕೂ ಪ್ರವಾಸಿ ತಾಣಗಳಿದ್ದು, ಒಂದಕ್ಕೆ ಇಬ್ಬರಂತೆ ನಿಯೋಜಿಸಿದರೆ 2000 ಸಿಬಂದಿ ಬೇಕು. ಆದರೆ ತರಬೇತಿ ಪಡೆದ 930ರಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಹೊರ ಹೋಗಿದ್ದಾರೆ ಎನ್ನುತ್ತಾರೆ ಪ್ರವಾಸಿ ಮಿತ್ರರು.
ಪ್ರವಾಸಿಮಿತ್ರರನ್ನು ಆರಂಭದಲ್ಲಿ ಖಾಯಂ ಮಾಡಿಕೊಳ್ಳುವುದು ಸಹಿತ ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಈಗ ನಿರಂತರ ಸೇವೆಗೂ ಅವಕಾಶ ನೀಡುತ್ತಿಲ್ಲ. ಸಮಸ್ಯೆಗಳ ಪರಿಹಾರಕ್ಕಾಗಿ ಪ್ರವಾಸಿ ಮಿತ್ರರು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಅಭಿಯಾನ
ಆರಂಭಿಸಿದ್ದೇವೆ.
– ಹನುಮಂತರೆಡ್ಡಿ,
ಅಧ್ಯಕ್ಷ, ಕರ್ನಾಟಕ ಪ್ರವಾಸಿ ಮಿತ್ರರ ಕ್ಷೇಮಾಭಿವೃದ್ಧಿ ಅಸೋಸಿಯೇಶನ್
– ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.