ಮಳೆಗಾಗಿ ಸರ್ವಧರ್ಮ ಪ್ರಾರ್ಥನೆ
Team Udayavani, May 22, 2017, 4:27 PM IST
ಧಾರವಾಡ: ಬರಗಾಲದಿಂದ ತತ್ತರಿಸಿರುವ ಜೀವ ಸಂಕುಲದ ಉದ್ಧಾರಕ್ಕಾಗಿ ಮಳೆಗಾಗಿ (ವರುಣನ ಕೃಪೆಗಾಗಿ) ನಗರದ ಅಂಜುಮನ್ ಇಸ್ಲಾಂ ಸಂಸ್ಥೆ ಆವರಣದಲ್ಲಿ ರವಿವಾರ ಸರ್ವ ಧರ್ಮ ಪ್ರಾರ್ಥನೆ ನಡೆಯಿತು.
ಮೌಲಾನಾ ಮುಜೀಬ್ ಆಶ್ರಫ್, ಓಪನ್ ಆಮ್ಸ್ ಚರ್ಚ್‌ನ ರೆವರಂಡ್ ಫಾದರ್ ಪ್ರಡಿಕ್ ಜಾರೋಬ್ ಹಾಗೂ ಮನಸೂರಿನ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರ ಸಮ್ಮುಖದಲ್ಲಿ ಮುಸ್ಲಿಂ ಬಾಂಧವರು ಮಳೆಗಾಗಿ ಕೆಲ ಹೊತ್ತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಮಾತನಾಡಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಅದಮ್ಯ ಶಕ್ತಿಯಿದೆ. ಇದರಿಂದ ದೇವರ ಕೃಪಾಶೀರ್ವಾದವಾಗಿ ಒಳ್ಳೆಯ ಮಳೆ ಬಂದು ಎಲ್ಲರೂ ಸಂತೋಷದಿಂದ ಜೀವನ ನಡೆಸಲು ಅನುಕೂಲವಾಗಲಿದೆ ಎಂದು ಪ್ರಾರ್ಥಿಸಿದಿರು.
ಬಸವರಾಜ ದೇವರು ಮಾತನಾಡಿ, ಸಕಲ ಜೀವ ರಾಶಿಗಳಿಗೆ ನೀರು ಅವಶ್ಯವಿದೆ. ಜಿಲ್ಲೆ ಮತ್ತು ರಾಜ್ಯದಲ್ಲಿ ನೀರಿನ ಸಮಸ್ಯೆ ಉದ್ಭವಿಸದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಓಪನ್ ಆಮ್ಸ್ì ಚರ್ಚ್‌ನ ರೆವರಂಡ್ ಫಾದರ್ ಪ್ರಡಿಕ್ ಜಾರೋಬ್ ಮಾತನಾಡಿದರು.
ಸತತ ಮೂರನೇ ವರ್ಷವೂ ಬರಗಾಲ ಇದಾಗಿದ್ದು, ಪ್ರಾರ್ಥನೆಯಿಂದ ಎಲ್ಲ ಕೆರೆ ಬಾವಿಗಳು ಉಕ್ಕಿ ಹರಿದು ಜನರಿಗೆ ಹಾಗೂ ಪ್ರಾಣಿಗಳಿಗೆ ಅನುಕೂಲ ಆಗಲಿ ಎಂದರು. ಮೌಲಾನಾ ಮುಜೀಬ್ ಆಶ್ರಫ್ ಪ್ರಾರ್ಥನಾ ಸಭೆ ನೇತೃತ್ವ ವಹಿಸಿದ್ದರು.
ಸಂಸ್ಥೆ ಉಪಾಧ್ಯಕ್ಷ ಅಬ್ದುಲ್ ಅಜೀಜ್ ದಾಸನಕೊಪ್ಪ, ಕಾರ್ಯದರ್ಶಿ ನಜೀರಹುಸೇನ ಮನಿಯಾರ, ಸಹ ಕಾರ್ಯದರ್ಶಿ ರμàಕ ಅಹಮ್ಮದ ಶಿರಹಟ್ಟಿ, ಎ.ಎಂ. ಜಮಾದಾರ, ಡಾ| ಎಸ್.ಎ. ಸರ್ಗಿರೊ, ಎಸ್.ಎಸ್. ಸೌದಾಗರ, ಮಹ್ಮದ ಶμà ಕಳ್ಳಿಮನಿ, ಪಾಲಿಕೆ ಸದಸ್ಯ ಸುಭಾಸ ಶಿಂಧೆ, ರಾಜು ಅಂಬೋರೆ, ಪ್ರಕಾಶ ಘಾಟಗೆ, ಮಾಜಿ ಸಂಸದ ಐ.ಜಿ.ಸನದಿ, ನ್ಯಾಯಾವಾದಿ ವಿ.ಡಿ.ಕಾಮರೆಡ್ಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.