ಜನರ ಜೀವನ ಮಟ್ಟ ಸುಧಾರಿಸಲು ಆದ್ಯತೆ ಕೊಡಿ


Team Udayavani, Jul 10, 2017, 12:17 PM IST

hub3.jpg

ಧಾರವಾಡ: ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು ಹಾಗೂ ಸದಸ್ಯರು ಜನರ ಜೀವನ ಮಟ್ಟ ಸುಧಾರಿಸಲು ಮೊದಲ ಆದ್ಯತೆ ನೀಡಬೇಕು ಎಂದು ಲಯನ್ಸ್‌ ಕ್ಲಬ್‌ ಮಾಜಿ ಗರ್ವನರ್‌ ಡಾ|ರವಿ ನಾಡಗೇರ ಹೇಳಿದರು. ನಗರದ ಐಎಂಎ ಸಭಾಂಗಣದಲ್ಲಿ ಲಯನ್ಸ್‌ ಕ್ಲಬ್‌ ಧಾರವಾಡ ಜಿಲ್ಲಾ 317-ಬಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಲಯನ್ಸ್‌ ಕ್ಲಬ್‌ಗ 200 ವರ್ಷಗಳ ಇತಿಹಾಸವಿದ್ದು, ಜಿಲ್ಲಾ ಲಯನ್ಸ್‌ ಕ್ಲಬ್‌ ಕಳೆದ 52 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿದೆ ಎಂದರು. ಮುಂಬರುವ ದಿನಗಳಲ್ಲಿ ಈವರೆಗೆ ಲಯನ್ಸ್‌ ಕ್ಲಬ್‌ 50 ಮಿಲಿಯನ್‌ ಜನರಿಗೆ ತಲುಪಿದ್ದು, ಮುಂದಿನ ಒಂದು ವರ್ಷದಲ್ಲಿ 100 ಮಿಲಿಯನ್‌ ಜನರಿಗೆ ತಲುಪಲು ಗುರಿ ಇಟ್ಟುಕೊಳ್ಳಲಾಗಿದೆ. 

ಶಿಕ್ಷಣ, ಪರಿಸರ, ಹಸಿವು ಮುಕ್ತ ಭಾರತ ಹಾಗೂ ಮಕ್ಕಳ ಬಾಲ್ಯವನ್ನು ಕಾಪಾಡಲು ಈ ಬಾರಿ ಆದ್ಯತೆ ನೀಡಲಾಗುತ್ತಿದೆ ಎಂದರು.  ಕೇವಲ ದಿನ ಆಚರಿಸುವುದರ ಬದಲಿಗೆ ಅವುಗಳನ್ನು ಅರ್ಥಪೂರ್ಣಗೊಳಿಸಲು ಶ್ರಮಿಸಬೇಕಿದೆ ಎಂದರು. ಲಯನ್ಸ್‌ ಕ್ಲಬ್‌ ಜಿಲ್ಲಾ 317-ಬಿ ಅಧ್ಯಕ್ಷ ಡಾ|ನವಿನ್‌ ಮಂಕಣಿ ಮಾತನಾಡಿ, ಲಯನ್ಸ್‌ ಕ್ಲಬ್‌ನ 52ನೇ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸದ ತಂದಿದೆ.

ಜವಾಬ್ದಾರಿಯಿಂದ ಕೆಲಸ ಮಾಡುವ ಮೂಲಕ ಸಮಾಜದ ಋಣ ತೀರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಬರುವ ದಿನಗಳಲ್ಲಿ ಬಿಆರ್‌ಟಿಎಸ್‌ ರಸ್ತೆ ಪಕ್ಕದಲ್ಲಿ ಕನಿಷ್ಟ ಒಂದು ಸಾವಿರ ಸಸಿ ನೆಡುವ ಕಾರ್ಯಕ್ರಮ, ರಸ್ತೆಗಳ ಅಕ್ಕಪಕ್ಕದಲ್ಲಿ ಕುಡಿದು ವಾಹನ ಚಲಿಸದಂತೆ ನಾಮಫಲಕ, ಲಯನ್ಸ್‌ ಕ್ಲಬ್‌ ಶಾಲೆಗೆ ಬೆಂಚ್‌ ದೇಣಿಗೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗುವುದು ಎಂದರು. 

ಇದಕ್ಕೂ ಮುನ್ನ ಲಯನ್ಸ್‌ ಕ್ಲಬ್‌ ಧಾರವಾಡ ಜಿಲ್ಲಾ 317-ಬಿ ಅಧ್ಯಕ್ಷರಾಗಿ ಆಯ್ಕೆಯಾದ ಡಾ|ನವಿನ್‌ ಮಂಕಣಿ, ಕಾರ್ಯದರ್ಶಿಯಾಗಿ ಡಾ|ಗಿರೀಶ ನಾಡಗೇರ, ಸಹ ಕಾರ್ಯದರ್ಶಿಯಾಗಿ ಎಂ.ಎ. ಮುಮ್ಮಿಗಟ್ಟಿ, ಖಜಾಂಚಿಯಾಗಿ ವಿದ್ಯಾಧರ ಅಂಗಡಿ, ಸಹ ಖಜಾಂಚಿಯಾಗಿ ದಿನೇಶ ಮೆಹ್ತಾ, ಸದಸ್ಯರಾಗಿ ದಿನೇಶ ಕುಲಕರ್ಣಿ, ಭುಜಂಗ ಶೆಟ್ಟಿ, ಡಾ|ವಿಜಯ ಜ್ಯೋತಿ, ಶೈಲಾ ಕರಗುದರಿ, ಅನಿಲ ಘಾಸ್ತೆ, ಧೃವರಾಜ ಮೇಲಗಿರಿ, ಜಯರಾಮ ಗುಮಾಸ್ತೆ, 

-ರಾಮನಾಥ ಹೆಗಡೆ, ವಿಜಯ ಮುಧೋಳಕರ, ಹರ್ಷ ಡಂಬಳ ಅ ಧಿಕಾರ ಸೀಕರಿಸಿದರು.ಹರ್ಷ ದೇಸಾಯಿ, ಡಾ|ಸರಾಯು ತಾವರಗೇರಿ, ಡಾ|ಕೆ.ವಿ.ಅಚ್ಯುತ್‌, ಭುಜಂಗ ಎಂ.ಶೆಟ್ಟಿ, ನಳನಿ ಬಡಗಿ, ಡಾ|ಸುಧಾ ಗೋಕಲೆ ಇದ್ದರು. ಅನುಪಮ ನಾಡಗೇರ ಪ್ರಾರ್ಥಿಸಿದರು. ಡಾ|ಕೃಷ್ಣ ತಾವರಗೇರಿ ಸ್ವಾಗತಿಸಿದರು. ಗಿರಿಧರ ದೇಸಾಯಿ, ಜಯಶ್ರೀ ಪಾಟೀಲ ವರದಿ ವಾಚಿಸಿದರು. ಕವಿತಾ ಅಂಗಡಿ, ಸವಿತಾ ಕುಸಗಲ್‌ ನಿರೂಪಿಸಿದರು. ಡಾ|ಗಿರೀಶ ನಾಡಗೇರ ವಂದಿಸಿದರು. 

ಟಾಪ್ ನ್ಯೂಸ್

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

voter

RSS ಕಚೇರಿ ಟೆಕ್ಕಿಗಳ ಬಳಸಿ ಇವಿಎಂ ಹ್ಯಾಕ್‌: ವಸಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.