ಪಠ್ಯಪುಸ್ತಕ ರಗಳೆಗೆ ಪೂರ್ವಸಿದ್ಧತೆ ಮದ್ದು


Team Udayavani, May 21, 2018, 5:17 PM IST

21-may-23.jpg

ಹುಬ್ಬಳ್ಳಿ: ಸರಕಾರಿ ಶಾಲೆ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಪುಸ್ತಕ ವಿತರಣೆಯಲ್ಲಿ ಹಿಂದೆ ಆಗಿದ್ದ ಗೊಂದಲದಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಈ ಬಾರಿ ವ್ಯವಸ್ಥಿತವಾಗಿ ಪುಸ್ತಕ ವಿತರಣೆಗೆ ಸಜ್ಜುಗೊಂಡಿದ್ದು, ಶೇ. 80ರಷ್ಟು ಪಠ್ಯಪುಸ್ತಕ ಬಂದಿದ್ದು, ಸಮವಸ್ತ್ರ ಇನ್ನು ಬರಬೇಕಿದೆ.

ಕಳೆದ ವರ್ಷ ಶಾಲಾ ಮಕ್ಕಳು ಪಠ್ಯ ಪುಸ್ತಕವಿಲ್ಲದೇ ಸುಮಾರು 4-5 ತಿಂಗಳು ಕಳೆದಿದ್ದರು. ಈ ಬಾರಿ ಅಂತಹ ಸ್ಥಿತಿ ತಪ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಶಾಲೆ ಆರಂಭಕ್ಕೆ ಮುನ್ನವೇ ಬಹುತೇಕ ಪಠ್ಯಪುಸ್ತಕಗಳನ್ನು ರವಾನಿಸುವ ಕಾರ್ಯ ಮಾಡಿದೆ.

ಈಗಾಗಲೇ ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ವಿಭಾಗದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಹರ ವಿಭಾಗದಿಂದ ಪಠ್ಯಪುಸ್ತಕ ವಿತರಣೆ ಆರಂಭಗೊಂಡಿದ್ದು, ಗ್ರಾಮೀಣ ವಿಭಾಗದಲ್ಲಿ ಮೇ 21ರಿಂದ ಪಠ್ಯಪುಸ್ತಕ ವಿತರಣೆ ಶುರುವಾಗಲಿದೆ.

ಶಹರ ವಿಭಾಗ: ಒಟ್ಟು 12 ಕ್ಲಸ್ಟರ್‌ಗಳಲ್ಲಿ 29 ಪ್ರಾಥಮಿಕ ಶಾಲೆ, 98 ಸರಕಾರಿ ಪ್ರೌಢಶಾಲೆ, 47 ಅನುದಾನಿತ ಸರಕಾರಿ ಪ್ರೌಢಶಾಲೆ, 135 ಅನುದಾನ ರಹಿತ ಸೇರಿ ಒಟ್ಟು 309 ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಬೇಕಿದೆ. ಇದರಲ್ಲಿ ಸರಕಾರಿ, ಅನುದಾನಿತ ಶಾಲೆಗಳಿಗೆ ಉಚಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಮಾರಾಟ ಪ್ರಕ್ರಿಯೆ ನಡೆಯಲಿದೆ.

ಪ್ರಾಥಮಿಕ ಶಾಲೆಗೆ ಒಂದು ಚಾಕ್‌ ಬಾಕ್ಸ್‌ ಹಾಗೂ ಪ್ರೌಢಶಾಲೆಗೆ 2 ಚಾಕ್‌ ಬಾಕ್ಸ್‌ ಸೇರಿದಂತೆ ಎಲ್ಲ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಎಸ್‌ಎಟಿಎಸ್‌ (ಸ್ಟುಡೆಂಟ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌) ಮೂಲಕ ಆಯಾ ಶಾಲೆಗೆ ಬೇಕಾಗುವ ಪುಸ್ತಕದ ಮಾಹಿತಿ ಕಲೆ ಹಾಕಿದ್ದು ಅದರಂತೆ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಗುವುದು. ಎಲ್ಲ ವಿಷಯಗಳ ಸುಮಾರು 5,65,305 ಪಠ್ಯಪುಸ್ತಕಗಳ ಬೇಡಿಕೆ ಇದ್ದು, ಅದರಲ್ಲಿ ಸರಕಾರಿ ಶಾಲೆಗಳಿಗೆ ಉಚಿತವಾಗಿ ಪೂರೈಸಲು 3,00,448 ಹಾಗೂ ಮಾರಾಟಕ್ಕೆ 2,64,857 ಪಠ್ಯಪುಸ್ತಕಗಳ ಬೇಡಿಕೆ ಇದೆ. 

ಸದ್ಯ ಸರಕಾರಿ ಶಾಲೆಗಳಿಗೆ ಉಚಿತವಾಗಿ ಪೂರೈಸಲು 1,79,045 ಹಾಗೂ ಮಾರಾಟಕ್ಕೆ 1,88,578 ಪಠ್ಯಪುಸ್ತಕಗಳು ಸೇರಿ ಒಟ್ಟು 3,67,623 ಪಠ್ಯಪುಸ್ತಕಗಳು ಬಂದಿವೆ. ಉಚಿತ ವಿತರಣೆಗೆ 1,21,403 ಹಾಗೂ ಮಾರಾಟಕ್ಕೆ 76,279 ಸೇರಿ ಒಟ್ಟು 1,97,682 ಪಠ್ಯಪುಸ್ತಕಗಳು ಬರಬೇಕಾಗಿದೆ. ಇವು ಕೂಡಾ ಈ ತಿಂಗಳ ಕೊನೆಯವರೆಗೆ ಆಗಮಿಸಲಿದ್ದು, ಜೂನ್‌ ಮೊದಲ ವಾರದಲ್ಲಿ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪುಸ್ತಕ ವಿತರಣೆ
ಮಾಡಲಾಗುವುದು. ಸದ್ಯ ಶೇ.80 ರಷ್ಟು ಪಠ್ಯಪುಸ್ತಕಗಳು ಬಂದಿದ್ದು, ಇನ್ನುಳಿದ ಶೇ. 20 ಪಠ್ಯಪುಸ್ತಕ ಶೀಘ್ರವೇ ಬರಲಿವೆ. ಶಹರ ವಿಭಾಗದಿಂದ ಈಗಾಗಲೇ 4 ಕ್ಲಸ್ಟರ್‌ಗಳಿಗೆ ಪುಸ್ತಕ ವಿತರಣೆ ಮಾಡಲಾಗಿದ್ದು, 8 ಕ್ಲಸ್ಟರ್‌ ಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಬೇಕಿದೆ. ಇದರಲ್ಲಿ 3 ಕ್ಲಸ್ಟರ್‌ಗಳು ಉರ್ದು ಮಾಧ್ಯಮದ ಕ್ಲಸ್ಟರ್‌ಗಳಾಗಿವೆ.

ಗ್ರಾಮೀಣ ವಿಭಾಗ
12 ಕ್ಲಸ್ಟರ್‌ಗಳಲ್ಲಿ 115 ಸರಕಾರಿ ಪ್ರಾಥಮಿಕ ಶಾಲೆ, 22 ಉರ್ದು ಶಾಲೆ, 13+2 ಸರಕಾರಿ ಪ್ರೌಢಶಾಲೆ, 7 ಪ್ರಾಥಮಿಕ ಹಾಗೂ 15 ಅನುದಾನಿತ ಪ್ರೌಢಶಾಲೆ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಕನ್ನಡ ಮಾಧ್ಯಮ 36 ಹಾಗೂ ಆಂಗ್ಲ ಮಾಧ್ಯಮ 35 ಶಾಲೆಗಳಿವೆ. ಸದ್ಯ ಗ್ರಾಮೀಣ ವಿಭಾಗದ ಶಾಲೆಗಳಿಗೆ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ವಿತರಣೆಗೆ 1,81,566 ಹಾಗೂ ಮಾರಾಟ ಪ್ರತಿಗಳಿಗೆ 69,089 ಪ್ರತಿಗಳು ಬೇಡಿಕೆ ಇದೆ. ಉಚಿತ ವಿತರಣೆಗೆ 1,39,650 ಪಠ್ಯಪುಸ್ತಕಗಳು ಹಾಗೂ ಮಾರಾಟಕ್ಕೆ 55,867 ಪಠ್ಯಪುಸ್ತಕಗಳು ಬಂದಿವೆ. ಇನ್ನುಳಿದ ಪಠ್ಯಪುಸ್ತಕಗಳು ಶೀಘ್ರದಲ್ಲಿಯೇ ಬರಲಿದ್ದು ಈ ಬಾರಿ ಪಠ್ಯಪುಸ್ತಕದ ಸಮಸ್ಯೆ ಆಗಲಿಕ್ಕಿಲ್ಲ ಎಂಬ ನಿರೀಕ್ಷೆಯಿದೆ.

ಈಗಾಗಲೇ ಹುಬ್ಬಳ್ಳಿ ಶಹರ ವಿಭಾಗದ 12 ಕ್ಲಸ್ಟರ್‌ಗಳಿಗೆ ಪಠ್ಯಪುಸ್ತಕಗಳು ಆಗಮಿಸಿದ್ದು, ಅದರಲ್ಲಿ ಎಲ್ಲ ಕ್ಲಸ್ಟರ್‌ಗಳಿಗೆ ಅಂಕಿ-ಅಂಶಗಳ ಆಧಾರದ ಮೇಲೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಉರ್ದು, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಯ ಪಠ್ಯಪುಸ್ತಕಗಳು ಶೀಘ್ರದಲ್ಲಿಯೇ ಬರಲಿವೆ. ಈ ಬಾರಿ ಪಠ್ಯಪುಸ್ತಕದ ಯಾವುದೇ ಸಮಸ್ಯೆ ಇಲ್ಲ. ಶಾಲೆಯ ಆರಂಭಕ್ಕೂ ಮುನ್ನ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತದೆ.
ಪಿ.ಡಿ. ಬಸನಾಳ,
ಶಹರ ವಿಭಾಗದ ಶಿಕ್ಷಣ ಸಂಯೋಜಕ

ಕಳೆದ ಬಾರಿ ಸರಿಯಾದ ಸಮಯಕ್ಕೆ ಪಠ್ಯಪುಸ್ತಕಗಳು ವಿತರಣೆಯಾಗದೆ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರಿಗೂ ಆತಂಕವಾಗಿತ್ತು. ಈ ವರ್ಷ ಈಗಾಗಲೇ ಎಲ್ಲ ತರಗತಿಯ ಪಠ್ಯಪುಸ್ತಕಗಳು ಬಂದಿದ್ದು ಮೇ 21ರಿಂದ ಎಲ್ಲ ಗ್ರಾಮೀಣ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗುವುದು. ಉರ್ದು ಮಾಧ್ಯಮಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳು ಶೀಘ್ರ ಬರಲಿವೆ.
ಎಸ್‌.ಎನ್‌. ಬಶೆಟ್ಟಿಯವರ,
ಗ್ರಾಮೀಣ ಶಿಕ್ಷಣ ಸಂಯೋಜಕ 

ಬಸವರಾಜ ಹೂಗಾರ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.