ಜಿಲ್ಲಾಸ್ಪತ್ರೆ ಬಳಿಯೇ ಕೋವಿಡ್‌ ಆಸ್ಪತ್ರೆಗೆ ಸಿದ್ಧತೆ


Team Udayavani, Apr 25, 2021, 12:05 PM IST

Preparing for covid Hospital near District

ಧಾರವಾಡ: ಜಿಲ್ಲಾಸ್ಪತ್ರೆ ಬಳಿ ನಿರ್ಮಾಣದ ಅಂತಿಮಹಂತದಲ್ಲಿರುವ 100 ಹಾಸಿಗೆ ಸಾಮರ್ಥ್ಯದ ಮಹಿಳಾಮತ್ತು ಮಕ್ಕಳ ಆರೋಗ್ಯ ಘಟಕದ ಕಟ್ಟಡವನ್ನೇ ಇದೀಗಕೋವಿಡ್‌ ಆಸ್ಪತ್ರೆಯನ್ನಾಗಿ ರೂಪಿಸಲು ಸಿದ್ಧತೆ ಸಾಗಿದೆ.

ಡಿಮ್ಹಾನ್ಸ್‌ ಈ ಆಸ್ಪತ್ರೆ ನಿರ್ವಹಣೆಗೆ ಮುಂದಾಗಿದ್ದು,ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಸ್ಪತ್ರೆಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಆರೋಗ್ಯಕ್ಕಾಗಿಪ್ರತ್ಯೇಕ ಕಟ್ಟಡ ನಿರ್ಮಿಸಲಾಗಿದ್ದು, ಅಂತಿಮ ಹಂತದಕಾಮಗಾರಿ ಸಾಗಿರುವ ಕಾರಣ ಇನ್ನೂ ಉದ್ಘಾಟನೆಆಗಿಲ್ಲ. ಬಾಣಂತಿಯರು ಹಾಗೂ ಮಕ್ಕಳ ಆರೈಕೆಗಾಗಿಪ್ರತ್ಯೇಕ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಘಟಕ ರೂಪಿಸಿದೆ.

ಆದರೆ ಈ ಕಟ್ಟಡವನ್ನು ಇದೀಗ ಕೋವಿಡ್‌ಆಸ್ಪತ್ರೆಯನ್ನಾಗಿ ಪರಿವರ್ತಿಸಿಕೊಳ್ಳುವ ಚಿಂತನೆ ಸಾಗಿದ್ದು,ಯೋಜನೆ ರೂಪಿಸಲಾಗಿದೆ.ಡಿಮ್ಹಾನ್ಸ್‌ ಆಸಕ್ತಿ: ಈ ಆಸ್ಪತ್ರೆಯನ್ನು ಪೂರ್ಣವಾಗಿಡಿಮ್ಹಾನ್ಸ್‌ನ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಲುಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಮ್ಹಾನ್ಸ್‌ನಲ್ಲಿ 20ವೈದ್ಯರು, 44 ನರ್ಸ್‌ಗಳು ಹಾಗೂ 80ಕ್ಕೂ ಹೆಚ್ಚು ಡಿಗ್ರೂಫ್‌ ನೌಕಕರಿದ್ದಾರೆ. ಇದರಲ್ಲಿ ಎರಡು ತಂಡ ಮಾಡಿಒಂದು ತಂಡ ಡಿಮ್ಹಾನ್ಸ್‌ ನಿರ್ವಹಿಸಿದರೆ ಇನ್ನೊಂದುತಂಡ ಈ ಕೋವಿಡ್‌ ಆಸ್ಪತ್ರೆಯನ್ನು ನಿರ್ವಹಿಸಲುಯೋಜಿಸಲಾಗಿದೆ.

ಮಧ್ಯಮ ಹಂತದ ಅಂದರೆ ಆಕ್ಸಿಜನ್‌ ಸೇರಿದಂತೆಇತರೆ ಚಿಕಿತ್ಸೆ ನೀಡಿದರೆ ಸುಧಾರಿಸಿಕೊಳ್ಳುವಸೋಂಕಿತರನ್ನು ಈ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆನೀಡುವ ಯೋಜನೆ ಇದಾಗಿದೆ. ಒಂದು ವೇಳೆಏನಾದರೂ ಹೆಚ್ಚಿನ ಸಮಸ್ಯೆಯಾದರೆ ಪಕ್ಕದಲ್ಲಿಯೇಇರುವ ಜಿಲ್ಲಾಸ್ಪತ್ರೆಯ ವೈದ್ಯರ ನೆರವು ಸಿಗಲಿದ್ದು,ಆಸ್ಪತ್ರೆ ಕಾರ್ಯಾರಂಭಕ್ಕೆ ಜಿಲ್ಲಾಡಳಿತದ ಹಸಿರು ನಿಶಾನೆಬೇಕಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರೊಂದಿಗೆ ಡಿಮ್ಹಾನ್ಸ್‌ ನಿರ್ದೇಶಕರು ಚರ್ಚೆ ಮಾಡಿದ್ದಾರೆ.ಅನುಮತಿ ಸಿಕ್ಕರೆ ಕೋವಿಡ್‌ ಆಸ್ಪತ್ರೆ ಕಾರ್ಯಾರಂಭಮಾಡಲಿದೆ.ಕಟ್ಟಡದ ಹಿನ್ನೆಲೆ ಏನು?ಫೆಬ್ರವರಿ ತಿಂಗಳಲ್ಲಿ ಕಟ್ಟಡ ಕಾಮಗಾರಿ ವೀಕ್ಷಣೆಆಗಮಿಸಿದ್ದ ಡಿಸಿ ನಿತೇಶ ಪಾಟೀಲ ಅವರು,ಕಾಮಗಾರಿ ವಿಳಂಬ ಆಗಿರುವುದಕ್ಕೆ ಅಧಿಕಾರಿ ಹಾಗೂಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಒಪ್ಪಂದದ ಪ್ರಕಾರ ಈಗಾಗಲೇ ಕಾಮಗಾರಿಪೂರ್ಣಗೊಂಡು ಆಸ್ಪತ್ರೆ ಆರಂಭಿಸಬೇಕಿತ್ತು. ಆದರೆಗುತ್ತಿಗೆದಾರ ಇಲ್ಲದ ನೆಪ ಹೇಳಿ ಕಾಮಗಾರಿ ವಿಳಂಬಮಾಡುತ್ತಿದ್ದು, ಮಾರ್ಚ್‌ 31ರೊಳಗೆ ಕಾಮಗಾರಿಪುರ್ಣಗೊಳಿಸಿ ಬಳಕೆಗೆ ನೀಡದಿದ್ದರೆ, ಮೆ| ಎಸ್‌.ಆರ್‌.ಕನ್ಸ್‌ಟ್ರಕ್ಷನ್‌ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲುಮತ್ತು ಆರೋಗ್ಯ ಇಲಾಖೆ ಎಂಜಿನಿಯರ್‌ ಎಇಇ ಎಸ್‌.ಎನ್‌. ಸುರೇಶ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲುಶಿಫಾರಸು ಮಾಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದ್ದರು.

ಆದರೆ ಇದೀಗ ಮಾರ್ಚ್‌ ತಿಂಗಳುಮುಗಿದು ಏಪ್ರಿಲ್‌ ತಿಂಗಳು ಮುಗಿಯುತ್ತಾ ಬಂದಿದ್ದು,ಕಟ್ಟಡ ಕಾಮಗಾರಿ ಮಾತ್ರ ಈವರೆಗೂ ಪೂರ್ಣಗೊಂಡಿಲ್ಲ.ಬಹುತೇಕ ಈಗ ಅಂತಿಮ ಹಂತಕ್ಕೆ ಬಂದಿದ್ದು, ಕಟ್ಟಡಕ್ಕೆಬಣ್ಣ, ಆಸ್ಪತ್ರೆ ಆವರಣದಲ್ಲಿ ರಸ್ತೆ, ಕಟ್ಟಡದ ಒಳಗಿನಕಾಮಗಾರಿ ಭರದಿಂದ ಸಾಗಿದ್ದು, ಆದಷ್ಟು ಬೇಗ ಈ ಕಟ್ಟಡಉದ್ಘಾಟನೆಗೊಂಡರೆ ಬಹಳಷ್ಟು ಅನುಕೂಲ ಆಗಲಿದೆ.

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.