ಸಾಲು ಸಾಲು ಸಮಸ್ಯೆ-ಯೋಜನೆಗಳಿಗೆ ಅಮಾವಾಸ್ಯೆ!


Team Udayavani, Jan 21, 2020, 10:30 AM IST

huballi-tdy-3

ನವಲಗುಂದ: ಪಟ್ಟಣ ಬೆಳೆಯುತ್ತಿದೆ, ಅದಕ್ಕೆ ತಕ್ಕಂತೆ ಜನಸಂಖ್ಯೆ ಬೆಳೆಯುತ್ತಿದೆ. ಆದರೆ ಜನಸಂಖ್ಯೆ ಅವಶ್ಯಕತೆ ಇರುವಂತಹ ಮೂಲಸೌಕರ್ಯಗಳ ಕೊರತೆ ಮಾತ್ರ ದಿನದಿಂದ ದಿನಕ್ಕೆ ಸಾರ್ವಜನಿಕರನ್ನು ಕಾಡುತ್ತಿದೆ.

ಪಟ್ಟಣಕ್ಕೆ ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಮೂಲ ಸೌಕರ್ಯ ಯೋಜನೆಗಳನ್ನು ಹಂತ ಹಂತವಾಗಿ ತಾಲೂಕಾಡಳಿತ ಹಾಗೂ ಪುರಸಭೆ ಅನುಷ್ಠಾನ ಮಾಡಬೇಕಿದೆ. ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಕಾಂಕ್ರೀಟ್‌ ರಸ್ತೆಗಳಾಗಿವೆ. ಆದರೆ ಕಾಮಗಾರಿ ಮಾಡಿ ಒಂದು ವರ್ಷದೊಳಗೆ ಕೆಲ ರಸ್ತೆಗಳು ಕಿತ್ತುಹೋಗಿವೆ. ಮೊದಲು ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡಿದ ನಂತರ ಇನ್ನುಳಿದ ಕಾಮಗಾರಿಗಳನ್ನು ಹಾಕಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಚಿಂತನೆ ಮಾಡಬೇಕಾಗಿದೆ.

ಸಮಸ್ಯೆ ಒಂದೆರಡಲ್ಲ: 8-9 ದಿನಕ್ಕೊಮ್ಮೆ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತದೆ. 24ಹಿ7 ಕುಡಿಯುವ ನೀರು ಪೂರೈಕೆ ಯೋಜನೆಗೆ ಕೋಟಿಗಟ್ಟಲೇ ಹಣ ವೆಚ್ಚ ಮಾಡಿದರೂ ಪ್ರಯೋಜನವಾಗಿಲ್ಲ. ಹಾಕಿರುವಂತಹ ನಲ್ಲಿಗಳು ತುಕ್ಕು ಹಿಡಿದು ಹಾಳಾಗಿವೆ. ಎಲ್ಲ ಯೋಜನೆಗಳು ಅರ್ಧಂಬರ್ಧ ಆಗಿದ್ದು, ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಸ್ಥಳೀಯರಿಗಾಗಿ ಒಂದು ಉದ್ಯಾನವನ ಇಲ್ಲ. ಕ್ರೀಡಾಂಗಣ ಇಲ್ಲ. ಇದ್ದ ಒಂದು ಶ್ರೀಕಂಠಶಾಸ್ತ್ರೀ ಕಲಾಭವನ ಸ್ಥಿತಿ ಚಿಂತಾಜನಕವಾಗಿದೆ. ಬಸವೇಶ್ವರ ನಗರದಲ್ಲಿ ಅವೈಜ್ಞಾನಿಕವಾಗಿ ಚರಂಡಿಗಳನ್ನು ಮಾಡಿದ್ದರಿಂದ ನೀರು ಹೋಗಲು ಜಾಗೆ ಇಲ್ಲದಂತಾಗಿದೆ.

ಆಶ್ರಯ ಮರೀಚಿಕೆ: 25-30 ವರ್ಷಗಳಿಂದ ಸರಕಾರದಿಂದ ಆಶ್ರಯ ಪ್ಲಾಟ್‌ ಕಂಡಿಲ್ಲ. ಆಶ್ರಯ ಮನೆಗಳು ನಮಗೆ ಸಿಗುತ್ತವೆಂಬ ಆಶಾಭಾವನೆ ಇಟ್ಟುಕೊಂಡ ಬಡಕುಟುಂಬಗಳು ಇವತ್ತಲ್ಲ ನಾಳೆ ನಮಗೆ ಪ್ಲಾಟ್‌ಗಳು ಸಿಗುತ್ತವೆಂದು ಕಾಯುತ್ತಾ ಪುರಸಭೆ, ಶಾಸಕರಕಾರ್ಯಾಲಯಕ್ಕೆ ಅಲೆದಾಡುತ್ತಿದ್ದಾರೆ.

ಹಿಂದೆ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿಯವರ ಅವಧಿಯಲ್ಲಿ ಪುರಸಭೆ ಅನುದಾನದಲ್ಲಿ ಆಶ್ರಯ ಪ್ಲಾಟ್‌ಗೆ ಅವಶ್ಯವಿರುವ 40 ಎಕರೆ ಜಮೀನು ಮೀಸಲಿಡಲಾಗಿತ್ತು. ಆದರೆ ಫಲಾನುಭವಿಗಳ ಆಯ್ಕೆ ಗೊಂದಲದಿಂದ ನನೆಗುದಿಗೆ ಬಿದ್ದಿದೆ. ಆಶ್ರಯ ಪ್ಲಾಟ್‌ಗೆ ಸುಮಾರು 2700 ಅರ್ಜಿಗಳು ಬಂದಿದ್ದು, ಯೋಗ್ಯ ಫಲಾನುಭವಿಗಳನ್ನು ಆಯ್ಕೆ ಮಾಡಿ ಬಡಕುಟುಂಬಗಳಿಗೆ ಆಸರೆಯಾಗಬೇಕಾಗಿದೆ. ಸರಕಾರ ಬಡವರಿಗಾಗಿ ಖುಲ್ಲಾ ಜಾಗೆಯಲ್ಲಿ ಮನೆ ಕಟ್ಟಿಕೊಳ್ಳಲು ವಾಜಪೇಯಿ ಆವಾಸ್‌ ಯೋಜನೆಯಲ್ಲಿ 2.70 ಲಕ್ಷ ಅನುದಾನ ನೀಡುತ್ತದೆ. 2018-19ರಲ್ಲಿ ಆಯ್ಕೆಯಾದ 150 ಫಲಾನುಭವಿಗಳ ಯಾದಿ ಜಿಲ್ಲಾಧಿಕಾರಿಗಳ ಪರವಾನಗಿಗೆ ಹೋಗಿದೆ. ಆದರೆ ಮನೆ ಕಟ್ಟಲು ಪರವಾನಗಿ ಸಿಗದೇ ಸಂಬಂಧಪಟ್ಟವರಲ್ಲಿ ಅಲೆದಾಡುತ್ತಿದ್ದಾರೆ.

ಪುರಸಭೆ ಪರದಾಟ: ದಾಖಲಾತಿಗಳಿಗಾಗಿ ಪುರಸಭೆಗೆ ಜನರ ಅಲೆದಾಟ ತಪ್ಪಿಲ್ಲ. ಮನೆಯ ಉತಾರಕ್ಕೆ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಇನ್ನೂವರೆಗೆ ಸಿಕ್ಕಿಲ್ಲ. ಪುರಸಭೆ ಕಾರ್ಯಾಲಯದಲ್ಲಿ ಹೇಳುವವರು ಕೇಳುವವರು ಇಲ್ಲವೇ ಇಲ್ಲ. ಪುರಸಭೆಗೆ ಹೋದಾಗೊಮ್ಮೆ ಕರ ವಸೂಲಿ, ನಳದ ವಸೂಲಿ, ಇತರೆ ಕೆಲಸಗಳಿಗೆ ಹೋಗಿದ್ದಾರೆಂದು ಇದ್ದ ಸಿಬ್ಬಂದಿ ಉತ್ತರ ಬರುತ್ತದೆ ಬರುತ್ತದೆ ಎಂಬುದು ಎಂಬುದು ಸಾರ್ವಜನಿಕರೊಬ್ಬರ ದೂರು. ಸಾರ್ವಜನಿಕರ ಅಹವಾಲು, ಮನೆಯ ಉತಾರ, ಜನನ-ಮರಣ ಪ್ರಮಾಣ ಪತ್ರ, ಇತರೆ ಕೆಲಸಗಳಿಗೆ ತಿಂಗಳುಗಟ್ಟಲೆ ಅಲೆದಾಡಬೇಕು. ಇನ್ನು ಚರಂಡಿ ಸ್ವಚ್ಛತೆ, ಕ್ರಿಮಿನಾಶಕ ಸಿಂಪಡಿಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳತ್ತ ದಿವ್ಯ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಪುರಸಭೆ ಚುನಾವಣೆ ನಡೆದು ಎಂಟು ತಿಂಗಳು ಕಳೆದರೂ ಇನ್ನುವರೆಗೂ ಆಡಳಿತವಿಲ್ಲದೇ ಸಾರ್ವಜನಿಕರ ಕೆಲಸಗಳು ನಿಂತ ನೀರಾಗಿವೆ.

ಆಶ್ರಯ ಸಮಿತಿ ಇಲ್ಲದ್ದರಿಂದ ಪಟ್ಟಣದ ಆಶ್ರಯ ಪ್ಲಾಟ್‌ ಗಳ ಕಾರ್ಯ ಸ್ಥಗಿತವಾಗಿತ್ತು. ನವಲಗುಂದ-ಅಣ್ಣಿಗೇರಿ ಆಶ್ರಯ ಸಮಿತಿ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಶೀಘ್ರವೇ ಆಶ್ರಯ ಪ್ಲಾಟ್‌ನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಯೋಗ್ಯ ಫಲಾನುಭವಿಗಳಿಗೆ ಸೂರು ನೀಡಲಾಗುವುದು. -ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ

 

-ಪುಂಡಲೀಕ ಮುಧೋಳೆ

ಟಾಪ್ ನ್ಯೂಸ್

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

byndoor

Siddapura: ಲಾರಿ ಚಾಲನೆಯಲ್ಲಿಯೇ ಹೃದಯಾಘಾತ; ಚಾಲಕ ಸಾವು

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

byndoor

Udupi: ಬೈಕ್‌ ಢಿಕ್ಕಿ; ಸೈಕಲ್‌ ಸವಾರ ಗಾಯ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.