ಶಾಂಭವಿ ನಗರ ತುಂಬಾ ಸಮಸ್ಯೆಗಳ ರಾಡಿ
ಪಾಲಿಕೆ ಷರತ್ತುಗಳೇ ಅಭಿವೃದ್ಧಿಗೆ ಅಡ್ಡಿ
Team Udayavani, Jun 20, 2020, 5:17 PM IST
ಧಾರವಾಡ: ಸುತ್ತಮುತ್ತ ಕಾಡಿನ ವಾತಾವರಣ.. ಹುತ್ತಗಳಿಂದ ವಿಷ ಜಂತುಗಳ ಭಯ.. ಸುಸಜ್ಜಿತ ರಸ್ತೆಗಳಿಲ್ಲದ ಕಾರಣ ಬಸ್ ಸೇವೆಯೇ ಇಲ್ಲ.. ಸ್ವಂತ ವಾಹನವಿಲ್ಲದಿದ್ದರೆ ಮನೆ ತಲುಪಲು 2-3 ಕಿಮೀ ನಡೆದೇ ಹೋಗಬೇಕು.. ಮಳೆಗಾಲದಲ್ಲಂತೂ ಸಂಚಾರವೇ ದುಸ್ತರ..
ನಗರದ ಕರ್ನಾಟಕ ವಿವಿಯ ಪತ್ರಿಕೋದ್ಯಮ ವಿಭಾಗದ ಸನಿಹದಲ್ಲಿಯೇ ವಾರ್ಡ್ ನಂ.17ರ ವ್ಯಾಪ್ತಿಯಲ್ಲಿರುವ ಪುಟ್ಟ ಶಾಂಭವಿ ನಗರದ ವ್ಯಥೆಯಿದು. ನಗರ ವ್ಯಾಪ್ತಿಯಲ್ಲಿಯೇ ಇದ್ದರೂ ಮೂಲಸೌಕರ್ಯಗಳಿಂದ ವಂಚಿತರಾಗಿ ಕುಗ್ರಾಮದಲ್ಲಿರುವಂತೆ ಭಾಸವಾಗುತ್ತಿದೆ. 40 ಕುಟುಂಬಗಳ ವ್ಯಥೆ: ಗುರುಕಲ್ ಹೌಸಿಂಗ್ ಸೊಸೈಟಿಯಡಿ ತಯಾರಿಸಿದ ಲೇಔಟ್‌ನಲ್ಲಿ 200 ಪ್ಲಾಟ್‌ಗಳಿದ್ದು, ಈ ಪೈಕಿ 40 ಪ್ಲಾಟ್ ಗಳಲ್ಲಿ ಮನೆಗಳು ನಿರ್ಮಾಣಗೊಂಡಿವೆ. ಇವುಗಳಿಗೆ ಜಲಮಂಡಳಿ ಹಾಗೂ ಹೆಸ್ಕಾಂ ಸೌಲಭ್ಯ ನೀಡಿದ್ದು ಬಿಟ್ಟರೆ ಉಳಿದ ಮೂಲಸೌಕರ್ಯಗಳೇ ಇಲ್ಲ. ಬೀದಿ ದೀಪಗಳು ಇದ್ದರೂ ರಾತ್ರಿ ಬೆಳಕು ನೀಡುವುದು ಕಡಿಮೆ. ಸುಸಜ್ಜಿತ ರಸ್ತೆಗಳಿಲ್ಲದ ಕಾರಣ ಸಾರಿಗೆ ಬಸ್‌ಗಳ ಸೇವೆ ಇಲ್ಲ. ಸುತ್ತಮುತ್ತ ಹುತ್ತಗಳು ತಲೆ ಎತ್ತಿದ್ದು, ವಿಷ ಜಂತುಗಳ ತಿರುಗಾಟ ಸಾಮಾನ್ಯ. ಇದರಿಂದ ದೇವರ ಮೇಲೆ ಭಾರ ಹಾಕಿ ಜೀವನ ಕಳೆಯುತ್ತಿದ್ದಾರೆ ಶಾಂಭವಿ ನಗರದ 40 ಕುಟುಂಬಗಳು.
ಸಂಚಾರವೇ ದುಸ್ತರ: ಪಾವಟೆ ನಗರ ಹಾಗೂ ಹೊಯ್ಸಳ ನಗರದ ಮಧ್ಯೆ ಬರುವ ಶಾಂಭವಿ ನಗರದ ನಿವಾಸಿಗಳು ಪಾವಟೆ ನಗರದ ಸ್ಕೂಲ್‌ನಲ್ಲಿಯೇ ಚುನಾವಣೆ ಸಮಯದಲ್ಲಿ ಮತದಾನ ಮಾಡುತ್ತಾರೆ. ಮತ ಕೇಳಲು ಬರುವ ಜನಪ್ರತಿನಿಧಿಗಳು ಆ ಬಳಿಕ ಇತ್ತ ಲಕ್ಷ್ಯವೇ ಹರಿಸುವುದಿಲ್ಲ. ಸಾರಿಗೆ ಬಸ್ ಇಲ್ಲದ ಕಾರಣ ಹೊಯ್ಸಳ ಹಾಗೂ ಪಾವಟೆ ನಗರಕ್ಕೆ ಬರುವ ಬಸ್‌ಗಳಲ್ಲಿಯೇ ಸಂಚರಿಸಬೇಕು. ಪಾವಟೆ ನಗರಕ್ಕೆ ಬಂದಿಳಿದು 3 ಕಿಮೀ ಹಾಗೂ ಹೊಯ್ಸಳನಗರಕ್ಕೆ ಬಂದಿಳಿದು 1.5 ಕಿಮೀ ನಡೆದಾಗ ಮಾತ್ರವೇ ಶಾಂಭವಿ ನಗರ ತಲುಪಲು ಸಾಧ್ಯ.
ಖಾಲಿ ಇರುವ ಪ್ಲಾಟ್‌ಗಳು: 1998ರಲ್ಲಿ ಒಂದು ಲಕ್ಷ ಕೊಟ್ಟು ಹಿಡಿದ ಈ ಪ್ಲಾಟ್ ಗಳ ಬೆಲೆ ಇದೀಗ 18-20 ಲಕ್ಷ. ಗುರುಕಲ್ ಹೌಸಿಂಗ್ ಸೊಸೈಟಿಯಡಿ ತಯಾರಿಸಿದ ಲೇಔಟ್‌ನಲ್ಲಿ 200 ಪ್ಲಾಟ್‌ಗಳಲ್ಲಿ ಈಗ ಬರೀ 40 ಮನೆಗಳು ಅಷ್ಟೇ ನಿರ್ಮಾಣಗೊಂಡಿವೆ. ಉಳಿದ ಪ್ಲಾಟ್‌ಗಳು ಖಾಲಿ ಇದ್ದು, ಮನೆಗಳು ನಿರ್ಮಾಣ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಮನೆ ಕಟ್ಟಿಕೊಂಡು ಜೀವನ ಸಾಗಿಸುವ 40 ಕುಟುಂಬಗಳಿಗೆ ಖಾಲಿ ಇರುವ ಪ್ಲಾಟ್‌ಗಳಿಂದಲೇ ತೊಂದರೆ ಅನುಭವಿಸುವಂತಾಗಿದೆ.
ಈ ಪ್ಲಾಟ್ ಮಾಲೀಕರು ಮನೆ ಕಟ್ಟುವ ಗೋಜಿಗೆ ಹೋಗದ ಕಾರಣ ಖಾಲಿ ಪ್ಲಾಟ್ ಗಳಲ್ಲಿ ಗಿಡ-ಗಂಟಿಗಳು ಬೆಳೆದು ಕಾಡಿನ ವಾತಾವರಣ ನಿರ್ಮಿಸಿವೆ. ಇದರಿಂದ ಅಸ್ವಚ್ಛತೆ ಕೊರತೆ ಹಾಗೂ ವಿಷಕಾರಿ ಜಂತುಗಳ ತಿರುಗಾಟ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
ಮುಳ್ಳಾಗಿರುವ ಪಾಲಿಕೆ ಷರತ್ತು : ಪ್ಲಾಟ್‌ಗಳಲ್ಲಿ ಮನೆ ಕಟ್ಟಲು ಅನುಮತಿ ಕೇಳುವಾಗಲೇ ಶೇ.80 ಮನೆಗಳ ನಿರ್ಮಾಣ ಆಗುವವರೆಗೂ ರಸ್ತೆ ಸೇರಿದಂತೆ ಮೂಲಸೌಕರ್ಯ ನೀಡಲಾಗದು ಎಂಬ ಷರತ್ತು ವಿಧಿಸಿಯೇ ಪಾಲಿಕೆ ಅನುಮತಿ ಕೊಟ್ಟಿದೆ. ಆದರೆ ಈಗ 40 ಮನೆಗಳ ಸಂಖ್ಯೆ ದಶಕ
ಕಳೆದರೂ ಏರಿಕೆ ಆಗುತ್ತಿಲ್ಲ. ಹೀಗಾಗಿ ಶೇ.80 ಮನೆಗಳ ನಿರ್ಮಾಣ ಆಗದ ಹೊರತು ಪಾಲಿಕೆ ಸೌಲಭ್ಯ ಮರೀಚಿಕೆಯಾದಂತಾಗಿದೆ. ಗುರುಕಲ್ ಹೌಸಿಂಗ್ ಸೊಸೈಟಿ ಹಸ್ತಾಂತರ ಮಾಡಿದ ಬಳಿಕ 2001ರಲ್ಲಿಯೇ ಪಾಲಿಕೆ ವ್ಯಾಪ್ತಿಯಲ್ಲಿ ಶಾಂಭವಿ ನಗರ ಬಂದಿದೆ. ಆದರೆ ಶೇ.80 ಮನೆ ಆಗುವವರೆಗೂ ರಸ್ತೆ ಮಾಡಲ್ಲ ಎಂಬ ಷರತ್ತು ಇದೆ. ಆಗಲೇ ಆಕ್ಷೇಪ ಮಾಡಿದ್ದರೆ ಮನೆ ಕಟ್ಟಲು ಅನುಮತಿ ಸಹ ನೀಡಲ್ಲ. ಇದರಿಂದ ಹೆಸ್ಕಾಂ, ಜಲಮಂಡಳಿ ಸಹ ಸೌಲಭ್ಯ ನೀಡದು. ಹೀಗಾಗಿ ಪಾಲಿಕೆ ಹಾಕುವ ಷರತ್ತು ಒಪ್ಪಿಕೊಂಡು ಮನೆ ಕಟ್ಟಿಕೊಂಡಿರುವ ಈ 40 ಕುಟುಂಬಗಳು ಈಗ ದುಸ್ಥಿತಿ ಅನುಭವಿಸುವಂತಾಗಿದೆ.
ಸುಪರ್ದಿಗೆ ಪಡೆದುಕೊಳ್ಳಿ : ಖಾಲಿ ಬಿದ್ದಿರುವ ಪ್ಲಾಟ್‌ಗಳಲ್ಲಿ ಮಾಲೀಕರು ಮನೆ ಕಟ್ಟುವ ಉದ್ದೇಶವೂ ಕಾಣುತ್ತಿಲ್ಲ. ಈ ಮನೆಗಳು ಆಗುವವರೆಗೂ ಈಗ ಮನೆ ಕಟ್ಟಿಕೊಂಡವರಿಗೆ ಪಾಲಿಕೆಯಿಂದ ಸೂಕ್ತ ಸೌಲಭ್ಯ ಸಿಗದಂತಾಗಿದೆ. ಹೀಗಾಗಿ ಮನೆ ಕಟ್ಟಿಕೊಳ್ಳದ ಮಾಲೀಕರಿಂದ ಜಾಗವನ್ನು ಸರಕಾರ ಸುಪರ್ದಿಗೆ ತೆಗೆದುಕೊಂಡು ಮನೆ ಕಟ್ಟುವ ಆಸಕ್ತಿ ಇರುವವರಿಗೆ ನೀಡಬೇಕು. ಇಲ್ಲವೇ ಮನೆ ಕಟ್ಟಿಕೊಳ್ಳದ ಮಾಲೀಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನಾದರೂ ಮಾಡಬೇಕು. ಷರತ್ತು ಸಡಿಲಿಕೆ ಮಾಡಿ ಶಾಂಭವಿ ನಗರಕ್ಕೆ ಮೂಲಸೌಲಭ್ಯ ನೀಡಲು ಪಾಲಿಕೆ ಮುಂದಾಗಬೇಕೆಂಬುದು ನಿವಾಸಿಗಳ ಒತ್ತಾಸೆ.
1998ರಲ್ಲಿ 1 ಲಕ್ಷ ರೂ. ಕೊಟ್ಟು ಪ್ಲಾಟ್ ತೆಗೆದುಕೊಂಡೆ. 2003ರಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಆದರೆ ಈಗ ಪ್ಲಾಟ್ ತೆಗೆದುಕೊಂಡವರು ಮನೆ ಕಟ್ಟದೇ ಇರುವ ಕಾರಣ ನಾವು ತೊಂದರೆ ಅನುಭವಿಸುತ್ತಿದ್ದು, ನಗರದಲ್ಲಿ ಇದ್ದರೂ ಸಹ ಕಾಡಿನಲ್ಲಿ ವಾಸ ಮಾಡುವಂತಾಗಿದೆ. ಪಾಲಿಕೆಯು ನಗರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. -ಯಲ್ಲಪ್ಪ ಸಮಗಾರ, ಶಾಂಭವಿ ನಗರ ನಿವಾಸಿ
ಶಾಂಭವಿ ನಗರಕ್ಕೆ ಬೇಕಾದ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. – ಸುರೇಶ ಇಟ್ನಾಳ, ಆಯುಕ್ತ, ಹು-ಧಾ ಪಾಲಿಕೆ
-ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.