ನಿರಾಶ್ರಿತರಿಗೆ ಶೀಘ್ರ ಪರಿಹಾರ
Team Udayavani, Aug 5, 2018, 4:41 PM IST
ಮುಂಡರಗಿ: ಶಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಕಾಲುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ದೊರಕಲಿದೆ ಎಂದು ಜಿಲ್ಲಾಧಿಕಾರಿ ಮನೋಜ ಜೈನ್ ತಿಳಿಸಿದರು. ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ, ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಈಗಾಗಲೇ ಏತ ನೀರಾವರಿಗಾಗಿ ಭೂಮಿ ಕಳೆದುಕೊಂಡಿರುವ ಎಲ್ಲ ರೈತರ ಪರಿಹಾರ ವಿತರಣೆಯನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಲಾಗುತ್ತದೆ. ಕಳೆದ ಎಂಟು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ಪ್ರಸ್ತಾವನೆ ಪೂರ್ಣಗೊಳಿಸಿದ್ದು, ಸರಕಾರದಿಂದ ಪರಿಹಾರದ ಹಣವು ಬಿಡುಗಡೆಯಾಗಬೇಕಿದೆ. ರಾಜ್ಯ ಸರಕಾರದ ಕಾರ್ಯದಶಿಯವರೆಗೂ ಪತ್ರ ಬರೆಯಲಾಗಿದೆ. ಬೆಳೆ ಹಾನಿ ಪರಿಹಾರದ ಸಂದರ್ಭದಲ್ಲಿ ಬೆಳೆ ಕಟಾವು ಮಾಡದೇ ಮುಂದೂಡಬೇಕು. ಆನಂತರ ಬೆಳೆ ಕಟಾವಿಗೆ ಮುಂದಾಗಬೇಕು. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಬಳಕೆದಾರರ ಸಂಘ ರಚನೆ ಮಾಡಬೇಕು. ನಗರ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸರಕಾರದ ಜಮೀನುಗಳ ದಾಖಲೀಕರಣ ಮಾಡಬೇಕು. ಯಾರಾದರೂ ಸರಕಾರಿ ಜಮೀನು ಆಕ್ರಮಿಸಿಕೊಂಡಿದ್ದರೆ ಸರ್ವೇ ಮಾಡಿ ಮರಳಿ ಪಡೆಯಬೇಕು. ಜಮೀನು ಭೂಸ್ವಾಧೀನಗೊಂಡಾಗ ಕಾಲಂ ನಂ-11 ಪರಿಗಣಿಸಬೇಕು. ರೈತರ ಬೆಳೆ ವಿಮೆಯ ತಾರತಮ್ಯಕ್ಕೆ ಸಂಬಂಧಿಸಿ ಸರಿಪಡಿಸಲಾಗುವುದು. ತಹಶೀಲ್ದಾರ್ ಮತ್ತು ತಾಪಂ ಇಒ ಮುಂಡವಾಡ, ತಾಮ್ರಗುಂಡಿ ಗ್ರಾಮಗಳಿಗೆ ತೆರಳಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನೋಜ್ ಜೈನ್ ತಿಳಿಸಿದರು. ವಿಶೇಷ ಚೇತನ ಆನಂದ ಹೊಸಳ್ಳಿಗೆ ತಕ್ಷಣವೇ ಮಾಸಿಕ ವೇತನ ಮಂಜೂರು ಮಾಡಲು ಕಂದಾಯ ಅಧಿಕಾರಿಗೆ ಸೂಚಿಸಿದರು.
ಸಾರ್ವಜಿನಿಕರಾದ ವೈ.ಎನ್. ಗೌಡರ, ಯಲ್ಲಪ್ಪ ಹೂಲಗೇರಿ, ಬಸವರಾಜ ನವಲಗುಂದ, ಸುರೇಶ ಹಲವಾಗಲಿ, ಶಂಕರಪ್ಪ ದೇಸಾಯಿ, ವಿಠ್ಠಲ ಗಣಾಚಾರಿ, ಸುರೇಶ ಕಾತರಕಿ, ಸೋಮನಗೌಡ ಗೌಡರ, ರುದ್ರಪ್ಪ ಬಳಿಗೇರ, ಮಲ್ಲಪ್ಪ ಗೌರಿಪುರ, ಬಸಪ್ಪ ಬಂಡಿವಡ್ಡರ್, ಶಿವನಗೌಡ ಗೌಡರ ಸೇರಿದಂತೆ 49ಕ್ಕೂ ಹೆಚ್ಚು ಜನರು ಅಹವಾಲು ಸಲ್ಲಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಬಿ.ಎಸ್. ಮಂಜುನಾಥ, ಎ.ಎ. ಕಂಬಾಳಿಮಠ, ರವಿಕುಮಾರ ಎಸ್.ಸಿ. ಮಹೇಶ, ರುದ್ರೇಶ, ಜೆ.ಸಿ. ಬಾಲರೆಡ್ಡಿ, ಡಾ| ಎಸ್.ವಿ.ತಿಗರಿಮಠ, ಬಸವರಾಜ ಬಳ್ಳಾರಿ, ಬಿ.ಎನ್. ರಾಟಿ, ಎಸ್.ಎ. ಜಲರೆಡ್ಡಿ, ಎಸ್.ಬಿ.ನೆಗಳೂರು, ಎಸ್.ಬಿ. ಹೊಸಳ್ಳಿ, ಕೆ.ಎಂ.ಕೆ ಶರ್ಮಾ, ಎಸ್.ಎನ್. ಹಳ್ಳಿಗುಡಿ, ವೀರೇಶ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಇದ್ದರು. ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.