ಕೈಕೊಟ್ಟ ಮಳೆ; ಬೆಳೆ ರಕ್ಷಣೆಗೆ ಟ್ಯಾಂಕರ್ ನೀರಿಗೆ ಮೊರೆ
Team Udayavani, Jun 23, 2019, 8:54 AM IST
ನವಲಗುಂದ: ಮಳೆ ಕೈಕೊಟ್ಟಿದ್ದರಿಂದ ಹತ್ತಿ ಬೆಳೆಗೆ ಟ್ಯಾಂಕರ್ ಮೂಲಕ ನೀರನ್ನು ಹಾಯಿಸುತ್ತಿರುವುದು.
ನವಲಗುಂದ: ತಾಲೂಕಿನಲ್ಲಿ ನಾಲ್ಕೈದು ವರ್ಷಗಳಿಂದ ರೈತರನ್ನು ಬರಗಾಲ ಪೀಡಿಸುತ್ತಿದೆ. ಪ್ರಸಕ್ತ ಮುಂಗಾರು ವಿಳಂಬದಿಂದ ಬಿತ್ತಿದ ಹತ್ತಿ ಬೆಳೆ ಉಳಿಸಿಕೊಳ್ಳಲು ಕೆಲ ರೈತರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.
ಜಯಣ್ಣ ಜಿನಗಾ ಎಂಬುವರ ಜಮೀನು ಲಾವಣೆ ಮಾಡಿದ ರೈತ ಮಂಜುನಾಥ ಅಲಂಗದ ಬೆಳೆ ಉಳಿಸಿಕೊಳ್ಳಲು ಹತ್ತಿ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಹಾಯಿಸಿ ಬೆಳೆಗಳ ರಕ್ಷಣೆ ಮಾಡುತ್ತಿದ್ದಾರೆ.
ಪ್ರತಿ ಎಕರೆಗೆ 6500 ರೂ.ದಂತೆ 6 ಎಕರೆ ಜಮೀನು ಲಾವಣೆ ಮಾಡಿದ್ದು, 4 ಎಕರೆಯಲ್ಲಿ ಹೆಸರು ಹಾಗೂ 2 ಎಕರೆಯಲ್ಲಿ ಹತ್ತಿ ಬೀಜ ಬಿತ್ತನೆ ಮಾಡಿದ್ದಾನೆ. ಆದರೆ ಮಳೆ ಕಣ್ಮರೆಯಾಗಿದ್ದರಿಂದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಮುಂದೆಯೂ ಮಳೆ ಕೈಕೊಟ್ಟರೆ ಈಗಿನ ಪ್ರಯತ್ನ ವ್ಯರ್ಥವಾಗಲಿದ್ದು, ಖರ್ಚು ಮಾಡಿದ ಹಣವೂ ಮೈಮೇಲೆ ಬರಲಿದೆ.
ಇದು ಕೇವಲ ಒಬ್ಬ ರೈತನ ಕಷ್ಟವಲ್ಲ, ಮುಂಗಾರಿನಲ್ಲಿ ಬಿತ್ತನೆ ಮಾಡಿದ ಪ್ರತಿಯೊಬ್ಬ ರೈತನ ಪರಿಸ್ಥಿತಿಯಾಗಿದೆ. ಎಲ್ಲರಿಗೂ ಟ್ಯಾಂಕರ್ ಮೂಲಕ ನೀರನ್ನು ಹಾಯಿಸುವ ಶಕ್ತಿ ಇರುವುದಿಲ್ಲ. ಇದ್ದವರು ಈಗ ಕೊನೇ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.