Ram Mandir; ಧಾರವಾಡದಲ್ಲಿ ರಾಮ ದರ್ಬಾರ್ ವರಹ ಪೂಜೆ
Team Udayavani, Jan 20, 2024, 3:33 PM IST
ಧಾರವಾಡ: ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀರಾಮದೇವರ ದರ್ಬಾರಿನ ಟಂಕೆಯುಳ್ಳ ವರಹಗಳನ್ನು ಹೊಂದಿದವರು ಅದಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿದ್ದು, ಇಂತಹ ಅಪರೂಪದ ನಾಣ್ಯ ನಗರದಲ್ಲಿ ಗಮನ ಸೆಳೆದಿದೆ.
ಡಾ.ಗುರುರಾಜ ಕಳ್ಳೀಹಾಳ ಅವರ ಮನೆಯಲ್ಲಿ ಇಂತಹ ಒಂದು ಅಪರೂಪದ ರಾಮಟಂಕಾ ವರಹವನ್ನು ಕಾಣಬಹುದು. ಈ ಪುರಾತನ ನಾಣ್ಯವು ವಿಕ್ರಮ ಸಂವತ್ಸರದ 1740 ರಲ್ಲಿ ಟಂಕಿಸಿದ್ದ ಬೆಳ್ಳಿಯ ವರಹವಾಗಿದೆ. ಇದರ ಮೇಲ್ಮೆಯಲ್ಲಿ ಶ್ರೀ ರಾಮದೇವರ ದರ್ಬಾರಿನ ರಾಮಾಯಣ ಆಧಾರಿತ ಚಿತ್ರ ಟಂಕಿಸಲಾಗಿದೆ.
ಈ ಚಿತ್ರದಲ್ಲಿ ಚಾಮರದ ಕೆಳಗೆ ಕುಳಿತಿರುವ ಶ್ರೀ ರಾಮದೇವರು ಹಾಗೂ ಸೀತಾಮಾತೆ, ಪಕ್ಕದಲ್ಲಿ ಲಕ್ಷಣ, ಭರತ, ಶತೃಘ್ನರ ಪರಿವಾರವಿದೆ. ಕೆಳಗೆ ಕುಳಿತ ಭಂಗಿಯಲ್ಲಿರುವ ರಾಮಭಕ್ತ ಹನುಂತ ದೇವರನ್ನು ಕಾಣಬಹುದು. ನಾಣ್ಯದ ಹಿಂಭಾಗದಲ್ಲಿ ಬಿಲ್ಲು ಬಾಣಧಾರಿಗಳಾದ ರಾಮ, ಲಕ್ಷ್ಮಣರು ವನವಾಸಕ್ಕೆ ಹೊರಟ ಚಿತ್ರವಿದೆ. ದೇವನಾಗರಿ ಲಿಪಿಯಲ್ಲಿರುವ “ರಾಮ ಲಕ್ಷಣ ಜಾನಕಿ ಜೈ ಭೋಲೋ ಹನುಮಾನ ಕಿ” ಎಂಬ ಅರ್ಥವಿರುವ ಸಾಲುಗಳು ಪ್ರಾಕೃತ ಭಾಷೆಯಲ್ಲಿ ಮುದ್ರಿತವಾಗಿದೆ ಎಂದು ಧಾರವಾಡದ ಸಂಸ್ಕೃತ ವಿದ್ವಾಂಸ ಡಾ. ವೆಂಕಟ ನರಸಿಂಹಾಚಾರ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಡಾ. ಗುರುರಾಜ ಕಳ್ಳೀಹಾಳ್ ಅವರ ಪತ್ನಿ ಡಾ.ಪರಿಮಳಾ ಕಳ್ಳೀಹಾಳ್ ಅವರ ತೀರ್ಥರೂಪರಾದ ದಿವಂಗತ ನಾಮಗೊಂಡ್ಲು ರಾಮಚಂದ್ರರಾಯರ ಮನೆತನದ ಸಂಗ್ರಹವಿದು. ತಲೆತಲಾಂತರದಿಂದ ಪೂಜೆಗೊಳ್ಳುತ್ತಾ ಬಂದಿರುವ ಈ ಅಪರೂಪದ ನಾಣ್ಯವನ್ನು ರಾಮದರ್ಬಾರ್ ಟೋಕನ್ ಅಂತಲೂ ಕರೆಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.