ರಾಮದುರ್ಗ: ರೈತರ ಹೊಲಗಳಿಗೆ ಕೃಷಿ ಅಧಿಕಾರಿ ಭೇಟಿ
Team Udayavani, Aug 18, 2018, 5:31 PM IST
ರಾಮದುರ್ಗ: ರಾಜ್ಯದಲ್ಲಿ ಪ್ರಥಮ ಬಾರಿಗೆ ಗೋವಿನ ಜೋಳದ ಬೆಳೆಯಲ್ಲಿ ಕಾಣಿಸಿಕೊಂಡ ಲದ್ದಿ ಹುಳುವಿನ ಬಾದೆ ಹಿನ್ನೆಲೆಯಲ್ಲಿ ಉಪ ಕೃಷಿ ನಿರ್ದೇಶಕ ಎಚ್.ಡಿ. ಕೊಳೇಕರ ತಾಲೂಕಿನ ಹಲಗತ್ತಿಯ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಯ ಸರ್ವೇಕ್ಷಣೆ ನಡೆಸಿದರು.
ನಂತರ ಮಾತನಾಡಿದ ಅವರು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆಯುತ್ತಿರುವ ಗೋವಿನ ಜೋಳದ ಬೆಳೆಯಲ್ಲಿ ಸೈನಿಕ ಹುಳು ಬಾದೆ ಕಂಡು ಬಂದಿದ್ದು, ಕಾರಣ ರೈತರು ಎಮ್ ಮೆಕ್ಟಿನ್ ಬೆಂಜೋಯೇಟ್ ಎಂಬ ಕೀಟ ನಾಶಕವನ್ನು ಪ್ರತಿ ಟ್ಯಾಂಕಿಗೆ 5 ಗ್ರಾಂ ಬೆರೆಯಿಸಿ ಸಿಂಪಡಿಸುವ ಮೂಲಕ ಕೀಟದ ಹತೋಟಿಗೆ ತರಬಹುದು. ಅಲ್ಲದೇ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ. 50 ಸಹಾಯಧನದಲ್ಲಿ ಈ ಕೀಟನಾಶಕ ಲಭ್ಯವಿದ್ದು, ರೈತರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಕೀಟವು ರಾತ್ರಿ ಹೊತ್ತು ಎಲೆ ಮತ್ತು ಸುಳಿಯಲ್ಲಿ ಹಾನಿ ಮಾಡಿ ದಿನದ ಸಮಯದಲ್ಲಿ ಮಣ್ಣಿನ ಕೊರಕಲು ಮತ್ತು ಸುಳಿಯ ಒಳಭಾಗದಲ್ಲಿ ವಿಶ್ರಮಿಸುವದರಿಂದ ರಾಸಾಯನಿಕ ಸಿಂಪರಣೆಯನ್ನು ಸಾಯಂಕಾಲ ಅಥವಾ ಬೆಳಗಿನ ಜಾವದಲ್ಲಿ ಮಾಡುವದು ಸೂಕ್ತ ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳಾದ ಆರ್.ವಿ. ದಾಸರ, ಎ.ಡಿ. ಅಂಗಡಿ, ಬಿ.ಕೆ. ಮುಚಖಂಡಿ, ವಿ.ಎಚ್. ದಾಸರ, ಗೋವಿಂದರಡ್ಡಿ ಜ್ಯಾಯನ್ನವರ, ರೈತರಾದ ಹನಮಂತ ಹೊಸಕೋಟಿ, ಬಿ.ವೈ. ನಡಮನಿ, ಎಸ್.ಎಚ್. ಕಡಕೋಳ, ಮಾರುತಿ ಧರಿಗೋಣಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.