ಇಲಿ ಉಪಟಳ: ರೈತರಲ್ಲಿ ತಳಮಳ
Team Udayavani, Jun 20, 2018, 4:34 PM IST
ಕುಂದಗೋಳ: ಪ್ರಸಕ್ತ ಸಾಲಿನ ಮುಂಗಾರು ಚುರುಕಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ರೈತರು ಸಂತಸಗೊಂಡಿದ್ದರು. ಭೂಮಿ ಒಡಲಿಗೆ ಬೀಜ ಭಿತ್ತಿ ಸಮೃದ್ಧ ಬೆಳೆ ಬರುವ ಕನಸಿನಲ್ಲಿದ್ದ ರೈತರಿಗೆ ಇಲಿ ಹಾಗೂ ಮಿಡಿತೆ ಕಾಟ ದೊಡ್ಡ ತಲೆ ನೋವಾಗಿದೆ.
ಕಳೆದ 4-5 ವರ್ಷಗಳ ಬರದಿಂದ ಸಮರ್ಪಕ ಬೆಳೆ ಕಾಣದ ರೈತರು ಈ ವರ್ಷವಾದರೂ ಉತ್ತಮ ಬೆಳೆ ಬರಬಹುದೆಂದು ಆಶಿಸಿದ್ದರು. ಆದರೆ ಇಲಿಗಳು ಹೊಲದಲ್ಲಿ ಹಾಕಿದ ಹತ್ತಿ ಬೀಜಗಳನ್ನು ಹಾಳು ಮಾಡುತ್ತಿವೆ. ಮೊಳಕೆ ಮುನ್ನವೇ ಬೀಜ ಇಲಿಗಳ ಪಾಲಾಗುತ್ತಿದೆ. ಇಲಿ ಹತೋಟಿಗಾಗಿ ರೈತರು ಹರಸಾಹಸ ಪಡುತ್ತಿದ್ದಾರೆ. ಹೊಲದಲ್ಲಿ ಹಾಕಿದ ಬೀಜವನ್ನು ಎರಡು ಬಾರಿ ಇಲಿಗಳು ತಿಂದಿದ್ದರಿಂದ ಸತತ 3ನೇ ಬಾರಿ ಹತ್ತಿ ಬೀಜ ಹಾಕಲು ಮುಂದಾಗಿದ್ದಾರೆ.
ಚುರುಮರಿ ಹಾಗೂ ಕುಸುಬೆ ಮುಂತಾದ ಇಲಿಗೆ ಪ್ರಿಯವಾದ ವಸ್ತುಗಳೊಂದಿಗೆ ಪಾಷಾಣವನ್ನು ಬೆರೆಸಿ ಹೊಲದಲ್ಲಿಟ್ಟು ಇಲಿಗಳನ್ನು ಹತೋಟಿ ಮಾಡುತ್ತಿದ್ದಾರೆ. ಈ ಕುರಿತಂತೆ ಕೃಷಿ ಇಲಾಖಾಧಿಕಾರಿ ಸಿ.ಜೆ. ಮೈತ್ರಿ ಅವರನ್ನು ಮಾತನಾಡಿಸಿದಾಗ, ನಮ್ಮ ಇಲಾಖೆಯಲ್ಲಿ ಈ ಮೊದಲು ಇಲಿ ಹತೋಟಿಗಾಗಿ ಝಿಂಕ್, ಪಾಸ್ಪೇಟ್ ಔಷ ಧಿ ಇತ್ತು. ಆದರೀಗ ಅದನ್ನು ತಡೆಯಲಾಗಿದ್ದು, ಇಲಿ ಪಾಷಾಣವನ್ನೇ ರೈತರು ಬಳಸಬೇಕು ಎಂದು ಸಲಹೆ ನೀಡಿದರು.
ಹರಸಾಹಸದ ಮಧ್ಯೆ ಇಲಿಗಳನ್ನು ಹತೋಟಿ ಮಾಡಿದಾಗಲೂ ಹತ್ತಿ ಬೀಜ ಮೊಳಕೆಯೊಡೆದಾಗ ಮಿಡತೆ ಅದನ್ನು ಕಚ್ಚುತ್ತಿರುವುದರಿಂದ ಹತ್ತಿ ಬೆಳೆ ನಾಶವಾಗುತ್ತಿದೆ. ಇಲಿ ಹಾಗೂ ಕೀಟ ಬಾಧೆಯಿಂದ ರೈತರು ತತ್ತರಿಸುತ್ತಿದ್ದಾರೆ. ಮಿಡತೆ ಹತೋಟಿಗೆ ಪ್ಯಾರೇಟ್ ಹಾಗೂ ಮಿಡತೆ ಪಾಷಾಣಗಳನ್ನು ಬಳಸುತ್ತಿದ್ದಾರೆ.ಕುಂದಗೋಳ: ಹೊಲದಲ್ಲಿ ಇಲಿ ತಿಂದಿರುವ ಹತ್ತಿ ಬೀಜ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.