ದುಶ್ಚಟ ದೂರವಿಡುತ್ತದೆ ಧಾರ್ಮಿಕ ಪುಸ್ತಕದ ಓದು
Team Udayavani, Jan 10, 2017, 12:26 PM IST
ಧಾರವಾಡ: ಯಾವ ವ್ಯಕ್ತಿ ಧಾರ್ಮಿಕ ಪುಸ್ತಕಗಳನ್ನು ಓದಲು ಆಸಕ್ತಿ ಪಡುತ್ತಾನೋ ಆ ವ್ಯಕ್ತಿ ದುಶ್ಚಟಗಳಿಂದ ದೂರವಿರುತ್ತಾನೆ ಎಂದು ಮಾಜಿ ಸಚಿವ ಖಮರುಲ್ ಇಸ್ಲಾಂ ಅಭಿಪ್ರಾಯಪಟ್ಟರು. ಇಲ್ಲಿನ ಎ.ಕೆ.ಇನಾಂದಾರ ನಗರದಲ್ಲಿ ನಡೆದ ಫಿರದೌಸ್ ಕಿತಾಬ ಘರನ ಸುವರ್ಣ ಮಹೋತ್ಸವ ಮತ್ತು “ನೋವಿನ ಧ್ವನಿ’ ಪಾಕ್ಷಿಕ ಪತ್ರಿಕೆಯ 7ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧಾರ್ಮಿಕ ಪುಸ್ತಕಗಳ ಓದುವ ವ್ಯಕ್ತಿ ತನ್ನ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಮೂಲಕ ಸಮಾಜದ ಗೌರವಕ್ಕೆ ಪಾತ್ರನಾಗುತ್ತಾನೆ. ಇಂತಹ ಉರ್ದು ಪುಸ್ತಕಗಳನ್ನು ಪೂರೈಸುವುದರ ಮೂಲಕ ಮೀರ ಮೆಹಮೂದ ಇನಾಂದಾರ ಅವರು ಜನರಿಗೆ ಸನ್ಮಾರ್ಗದೆಡೆಗೆ ನಡೆಸುವ ಕಾರ್ಯದಲ್ಲಿ ತೊಡಗಿದ್ದರಿಂದಲೇ ಇಂದು ಸುವರ್ಣ ಮಹೋತ್ಸವ ಆಚರಿಸುವಂತಾಯಿತು ಎಂದರು.
ಅತಿಥಿ, ಖ್ಯಾತ ಸಾಹಿತಿ ರಂಜಾನ ದರ್ಗಾ ಮಾತನಾಡಿ, ಯಾವ ವ್ಯಕ್ತಿಗಳು ಬ್ರಿಟಿಷರೊಂದಿಗೆ ಕೈ ಜೋಡಿಸಿದ್ದರೋ ಅಂಥವರು ದೇಶಾಭಿಮಾನದ ಮಾತುಗಳನ್ನಾಡುತ್ತಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಯಾರು ತಮ್ಮ ಪ್ರಾಣ ತೆತ್ತಿದ್ದಾರೋ, ಯಾರು ತಮ್ಮ ರಕ್ತ ಹರಿಸಿದ್ದಾರೋ ಅಂಥವರು ದೇಶಾಭಿಮಾನಿಗಳಲ್ಲ ಎಂದು ಕೆಲವರು ಹೇಳುತ್ತಿರುವುದು ಬೇಸರದ ಸಂಗತಿ ಎಂದರು.
ಸಚಿವ ವಿನಯ ಕುಲಕರ್ಣಿ ಮಾತನಾಡಿ, ನಾವೆಲ್ಲ ಜಾತಿ- ಮತ-ಪಂಥ ಮರೆತು ಸಹೋದರತ್ವ ಭಾವನೆ ಬೆಳೆಸಲು ಕೈ ಜೋಡಿಸಬೇಕಿದೆ. ಸತತ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಖಮರುಲ್ ಇಸ್ಲಾಂ ಅವರ ಜೀವನ ಸಾಧನೆ ಬಿಂಬಿಸುವ “ಖಮರುಲ್ ಇಸ್ಲಾಂ ಕಿ ಕಹಾನಿ ಕುಛ್ ಮೇರಿ ಕುಛ್ ಉನ್‌ಕಿ ಜುಬಾನಿ’ ಪುಸ್ತಕವನ್ನು ಮೀರಮೆಹಮೂದ ಇನಾಂದಾರ ಅವರು ಉರ್ದು ಭಾಷೆಯಲ್ಲಿ ಬರೆದಿದ್ದು ಸಂತೋಷದ ಸಂಗತಿ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇಸ್ಲಾಯಿಲ್ ತಮಟಗಾರ, ದೀಪಕ ಚಿಂಚೂರೆ, ಯಾಸೀನ ಹಾವೇರಿಪೇಟ, ಎಂ.ಎಂ.ಪಾಟೀಲ, ಡಾ|ಅಬ್ದುಲ್ ಕರೀಂ, ಸಾಹಿತಿ ಮಹಮ್ಮದಅಲಿ ಗೂಡುಭಾಯಿ, ಅನೀಸ ಬಾರೂದವಾಲೆ, ಮೌಲಾನಾ ನೂ.ಬಾಷಾಸಾಬ ಹವಾಲ್ದಾರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.