ಕನ್ನಡಪರ ಸಂಘಟನೆಗಳ ಒಕ್ಕೂಟ ರಚನೆಗೆ ಸಿದ್ಧ
Team Udayavani, Jul 22, 2017, 12:02 PM IST
ಧಾರವಾಡ: ರಾಜ್ಯದಲ್ಲಿರುವ ಒಳನಾಡು ಮತ್ತು ಹೊರನಾಡು ಕನ್ನಡಪರ ಸಂಘಟನೆಗಳ ಒಕ್ಕೂಟ ರಚನೆಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಮುಂದಾಗಲಿದೆ ಎಂದು ಸಂಘದ ಅಧ್ಯಕ್ಷ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದರು.
ನಗರದ ಕವಿಸಂನಲ್ಲಿ ಸಂಘದ 128ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ 50 ವರ್ಷಗಳಿಗೆ ಮೇಲ್ಪಟ್ಟು ಕನ್ನಡಕ್ಕಾಗಿ ಶ್ರಮಿಸಿದ ಹೊರನಾಡು-ಒಳನಾಡು ಕನ್ನಡ ಸಂಘಗಳಿಗೆ ಗೌರವ-ಸನ್ಮಾನ ನೀಡಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಮತ್ತು ಹೊರನಾಡು ಕನ್ನಡಿಗರ ಮನೆ- ಮನಗಳಲ್ಲಿ ನಿರಂತರ ಜಾಗೃತಿ ಮೂಡಿಸಿ ಕನ್ನಡ-ಕನ್ನಡಿಗ-ಕರ್ನಾಟಕದ ವಿಕಾಸದ ಆಸೆಯಗಳಿಗೆ ಸ್ಪಂದಿಸಲು ಗಮನ ಹರಿಸಲಾಗುವುದು ಎಂದರು.
ಕನ್ನಡಪರ ಸಂಘಟನೆಗಳ ಒಕ್ಕೂಟ ರಚನೆ ಆದಾಗ ಕನ್ನಡಪರ ಹೋರಾಟಗಳಿಗೆ ಬಹುದೊಡ್ಡ ಶಕ್ತಿ ಬರುತ್ತದೆ. ಉಸಿರು ಇರುವ ತನಕ ತಾವು ಕನ್ನಡ ಭಾಷೆ, ನೆಲ, ಜಲಗಳ ಉಳಿವಿಗಾಗಿ ನಿರಂತರ ಹೋರಾಟ ಮಾಡುವುದಾಗಿ ಹೇಳಿದ ಪಾಪು, ಕನ್ನಡಪರ ಸಂಘಟನೆಗಳ ಒಕ್ಕೂಟ ರಚನೆಯಾದಲ್ಲಿ ಅದರ ಸಾರಥ್ಯ ವಹಿಸಲು ಕವಿಸಂ ಹಾಗೂ ತಾವು ಸದಾ ಸಿದ್ಧ ಎಂದರು.
ಇದೇ ಸಂದರ್ಭದಲ್ಲಿ ಪುಣೆಯ ಕರ್ನಾಟಕ ಸಂಘ, ಮುಂಬಯಿಯ ಕರ್ನಾಟಕ ಸಂಘ, ಪುಣೆಯ ಕನ್ನಡ ಸಂಘ, ಅಂಬರನಾಥ ಕರ್ನಾಟಕ ವೈಭವ ಸಂಸ್ಥೆ, ಬರೋಡಾದ ಕರ್ನಾಟಕ ಸಂಘ, ಮಂಡ್ಯದ ಕರ್ನಾಟಕ ಸಂಘ, ಕಾಂತಾವರದ ಕನ್ನಡ ಸಂಘ, ಶಿವಮೊಗ್ಗದ ಕರ್ನಾಟಕ ಸಂಘ, ರಾಯಚೂರಿನ ಕರ್ನಾಟಕ ಸಂಘ, ಡಯಟ್ ಹಾಗೂ ಜೀವನ ಶಿಕ್ಷಣ ಮಾಸಪತ್ರಿಕೆ ಸಂಸ್ಥೆಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಮಂಡ್ಯದ ಜಯಪ್ರಕಾಶಗೌಡ, ಜೀವನ ಶಿಕ್ಷಣ ಮಾಸಪತ್ರಿಕೆಯ ಗುರುಮೂರ್ತಿ ಯರಗಂಬಳಿಮಠ, ರಾಯಚೂರಿನ ಮುರಳೀಧರ ಕುಲಕರ್ಣಿ, ಅಂಬರನಾಥನ್, ಆರ್.ಬಿ. ಹೆಬ್ಬಳ್ಳಿ, ಕೆ.ಆರ್. ಮಮದಾಪುರ ಮಾತನಾಡಿದರು.
ಶಿವಶಂಕರ ಹಿರೇಮಠ, ಗಂಗಪ್ಪ, ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಗೌರವ ಉಪಾಧ್ಯಕ್ಷ ಪ್ರೊ|ಐ.ಜಿ.ಸನದಿ, ಮೋಹನ ನಾಗಮ್ಮನವರ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ ಇದ್ದರು. ಕೃಷ್ಣ ಜೋಶಿ ಸ್ವಾಗತಿಸಿದರು. ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಗುರು ತಿಗಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.