ದಾಖಲೆ ಬರೆದ ಕುಂದಗೋಳ ಮತದಾರ


Team Udayavani, May 20, 2019, 10:36 AM IST

hub-1

ಹುಬ್ಬಳ್ಳಿ: ಜಿದ್ದಾಜಿದ್ದಿಯಿಂದ ತೀವ್ರ ಕುತೂಹಲ ಕೆರಳಿಸಿರುವ ಕುಂದಗೋಳ ಉಪ ಸಮರದ ಮತದಾನ ಸಣ್ಣಪುಟ್ಟ ಸಮಸ್ಯೆ ಹೊರತು ಪಡಿಸಿದರೆ ರವಿವಾರ ಶಾಂತಿಯುತವಾಗಿ ನಡೆದಿದ್ದು, ಶೇ. 82.42 ಮತದಾನವಾಗಿದೆ.

ಮತದಾರರು ಬೆಳಗ್ಗಿನಿಂದಲೇ ಮತಗಟ್ಟೆ ಮುಂದೆ ಸಾಲಾಗಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬೆಳಗಿನ ಸಮಯದಲ್ಲೇ ಮತ ಚಲಾವಣೆಗೆ ಹೆಚ್ಚು ಆಸಕ್ತಿ ತೋರಿದಂತಿತ್ತು. ಅಂಚಟಗೇರಿ, ಅದರಗುಂಚಿ, ನೂಲ್ವಿ, ಶೆರೇವಾಡ, ಬೆಟದೂರು, ಕುಂದಗೋಳ, ಸಂಶಿ, ಯರಗುಪ್ಪಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿನ ಮತಗಟ್ಟೆಗಳ ಮುಂದೆ ಮತದಾರರು ಸಾಲಾಗಿ ನಿಂತಿರುವುದು ಕಂಡು ಬಂತು. ಕೆಲವೆಡೆ ಒಂದು ಶಾಲೆ ಆವರಣದಲ್ಲಿ ನಾಲ್ಕೈದು ಬೂತ್‌ಗಳನ್ನು ಮಾಡಿರುವ ಕಾರಣ ಶಾಲೆ ಆವರಣ ಜನದಟ್ಟಣೆಯಿಂದ ಕೂಡಿತ್ತು.

ಕೈಕೊಟ್ಟ ಇವಿಎಂ-ವಿವಿ ಪ್ಯಾಟ್: ಅಣಕು ಮತದಾನ ವೇಳೆ ಹಾಗೂ ಮತದಾನ ಆರಂಭವಾದ ನಂತರ ವಿವಿ ಪ್ಯಾಟ್ ಹಾಗೂ ಇವಿಎಂಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಬದಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆನಕನಹಳ್ಳಿಯಲ್ಲಿ ಇವಿಎಂದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷ ಮತದಾನ ವಿಳಂಬವಾಯಿತು. ಚಿಕ್ಕನರ್ತಿ ಸೇರಿದಂತೆ 7 ಮತಗಟ್ಟೆಗಳಲ್ಲಿ ವಿವಿ ಪ್ಯಾಟ್ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡಲೇ ಅವುಗಳನ್ನು ಬದಲಾಯಿಸಿದರು.

ಕಾರ್ಯಕರ್ತರಲ್ಲಿ ಜಿದ್ದಾಜಿದ್ದಿ: ಮತಗಟ್ಟೆ ಬಳಿ ಜಮಾಯಿಸಿದ್ದ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಸನ್ನೆ ಮೂಲಕ ಸೂಚಿಸುತ್ತಿರುವುದು ಕಂಡು ಬಂತು. ಕೇಸರಿ ಶಾಲು ಹಾಗೂ ಕೇಸರಿ, ಬಿಳಿ, ಹಸಿರು ಬಣ್ಣ ಮಿಶ್ರಿತ ಶಾಲು ಹಾಕಿದ ಕಾರ್ಯಕರ್ತರ ಭರಾಟೆ ಜೋರಾಗಿತ್ತು. ಮತಗಟ್ಟೆಯತ್ತ ಸುಳಿಯದಂತೆ ನೋಡಿಕೊಳ್ಳುವಷ್ಟರಲ್ಲಿ ಪೊಲೀಸರು ಬಸವಳಿದಿದ್ದರು. ಯಾವುದೇ ಅಹಿತಕರ ನಡೆಯದಂತೆ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರು. ಮತಗಟ್ಟೆಯಲ್ಲಿ ಪ್ರಚಾರಕ್ಕೆ ಮುಂದಾಗಿದ್ದ ಕೆಲವರನ್ನು ಹೊರ ಹಾಕಿದ ಘಟನೆಯೂ ನಡೆಯಿತು.

ಹಿರಿಯರ-ಅಂಗವಿಕಲರ ಉತ್ಸಾಹ: ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಬಲು ಉತ್ಸಾಹದಿಂದ ಸ್ವಯಂ ಸೇವಕರ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗಾಗಿ ಸಾರಿಗೆ ಸೌಲಭ್ಯ, ಸ್ವಯಂ ಸೇವಕರ ನೆರವು, ಗಾಲಿ ಖುರ್ಚಿ ಸೌಲಭ್ಯ ಕಲ್ಪಿಸಲಾಗಿತ್ತು. ಕ್ಷೇತ್ರದಲ್ಲಿ 2487 ವಿವಿಧ ಪ್ರಕಾರದ ವಿಕಲಚೇತನರನ್ನು ಗುರುತಿಸಿ ಅವರನ್ನು ಮತಗಟ್ಟೆಗೆ ಕರೆತರಲು ಚುನಾವಣಾ ಆಯೋಗದಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿತ್ತು.

ಗಮನ ಸೆಳೆದ ಸಖೀ ಮತಗಟ್ಟೆ

ಮಹಿಳೆಯರು-ವಿಕಲಚೇತನರು ಸಮರ್ಥವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬಲ್ಲರು ಎಂಬುವುದಕ್ಕೆ ಸಖೀ ಹಾಗೂ ಅಂಗವಿಕಲರ ಮತಗಟ್ಟೆಗಳು ಸಾಕ್ಷಿಯಾದವು. ಕುಂದಗೋಳ ಪಟ್ಟಣದ ಸರಕಾರಿ ಹಿಪ್ರಾ ಶಾಲೆಗಳಲ್ಲಿ ಎರಡು ಸಖೀ ಹಾಗೂ ಅಂಬೇಡ್ಕರ್‌ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗವಿಕಲರ ಮತಗಟ್ಟೆ ಸ್ಥಾಪಿಸಲಾಗಿತ್ತು. ಮತ ಚಲಾಯಿಸುವ ಮಹಿಳೆಯರ ಭಾವಚಿತ್ರ ಇರುವ ಸ್ವಾಗತ ಕಮಾನುಗಳು, ರಂಗೋಲಿ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.

ಕ್ಷೇತ್ರವನ್ನು 18 ಸೆಕ್ಟರ್‌ಗಳಾಗಿ ವಿಭಾಗಿಸಿದ್ದು, 4 ಡಿವೈಎಸ್ಪಿ, 7 ಸಿಪಿಐ, 27 ಪಿಎಸ್‌ಐ, 41 ಜನ ಎಎಸ್‌ಐ ಸೇರಿದಂತೆ ಪೊಲೀಸ್‌ ಪೇದೆ, ಗೃಹ ರಕ್ಷಕದಳ, ಕೆಎಸ್‌ಆರ್‌ಪಿಸಿ ಮತ್ತು ಡಿಆರ್‌ತುಕಡಿಗಳನ್ನು ಭದ್ರತೆಗಾಗಿ ನೇಮಿಸಲಾಗಿತ್ತು.

ಶಾಂತಿಯುತ ಮತದಾನ

ಉಪ ಚುನಾವಣೆ ಅಣಕು ಮತದಾನ ವೇಳೆ 10 ವಿವಿ ಪ್ಯಾಟ್, ನೈಜ ಮತದಾನ ಸಂದರ್ಭದಲ್ಲಿ 13 ವಿವಿ ಪ್ಯಾಟ್‌ಗಳನ್ನು ವಿವಿಧ ತಾಂತ್ರಿಕ ಕಾರಣಗಳಿಂದ ಬದಲಿಸಲಾಗಿದ್ದು, ಮತಗಟ್ಟೆ 20ರಲ್ಲಿ ಮತಯಂತ್ರದಲ್ಲಿ ಬೀಪ್‌ ಸೌಂಡ್‌ ಬಾರದ ಹಿನ್ನೆಲೆಯಲ್ಲಿ ಒಂದು ಮತ ಯಂತ್ರ ಬದಲಿಸಲಾಗಿದೆ. ಇದನ್ನು ಹೊರತುಪಡಿಸಿ ಕ್ಷೇತ್ರದಲ್ಲಿ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಈ ಚುನಾವಣೆಯಲ್ಲಿ ನೌಕರರು, ಸಾರ್ವಜನಿಕರು ಉತ್ತಮ ಸಹಕಾರ ನೀಡಿದ್ದಾರೆ ಎಂದು ಚುನಾವಣಾಧಿಕಾರಿ ವಿ. ಪ್ರಸನ್ನ ಹರ್ಷ ವ್ಯಕ್ತಪಡಿಸಿದರು.

ಮತಗಟ್ಟೆಗಳಿಗೆ ಪೂಜೆ

ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಮತಗಟ್ಟೆ ಸಂಖ್ಯೆ 65ರಲ್ಲಿ ಬೆಳಗ್ಗೆ ಮತದಾನ ಆರಂಭವಾಗುವುದಕ್ಕಿಂತ ಮುನ್ನ ಮತಗಟ್ಟೆ ಬಾಗಿಲಿಗೆ ಪೂಜೆ ಮಾಡಿದ ಘಟನೆ ನಡೆಯಿತು. ಬಾಗಿಲಿಗೆ ಅರಿಶಿಣ-ಕುಂಕುಮ ಹಚ್ಚಿ ಮಾಲೆ ಹಾಕಿ ಪೂಜೆ ಮಾಡಿಸಲಾಯಿತು. ಮತಗಟ್ಟೆಗೆ ಕುರುಬ ಸಮಾಜದವರಿಂದ ಪೂಜೆ ಮಾಡುವುದರಿಂದ ಒಳಿತಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಗೆಲುವಿಗಾಗಿ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಇದೇ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಕುಟುಂಬದೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಯರಗುಪ್ಪಿಯಲ್ಲೂ ಕೂಡ ಮತಗಟ್ಟೆ 25ರಲ್ಲಿ ಸ್ಥಳೀಯ ಜನಪ್ರತಿನಿಧಿಯೊಬ್ಬರು ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಗೆಲುವಿಗಾಗಿ ಪೂಜೆ ಸಲ್ಲಿಸಿದ ಘಟನೆ ನಡೆದಿದೆ.
ಬಿಸಿಲಿನಲ್ಲಿ ಮತದಾರರ ಸರದಿ
ಕೆಲ ಮತಗಟ್ಟೆಗಳ ಕಟ್ಟಡ ಚಿಕ್ಕದಾಗಿದ್ದ ಪರಿಣಾಮ ಮತದಾರರು ಬಿಸಿಲಿನಲ್ಲಿಯೇ ನಿಲ್ಲುವಂತಾಗಿತ್ತು. ಎಸ್ಪಿ ಜಿ.ಸಂಗೀತಾ ಮತದಾನ ಪ್ರಕ್ರಿಯೆ ವೀಕ್ಷಣೆ ವೇಳೆ ಶೆರೇವಾಡದ ಮತಗಟ್ಟೆ ಸಂಖ್ಯೆ 58ರಲ್ಲಿ ಈ ಅವ್ಯವಸ್ಥೆ ಕಂಡು ಬಂತು. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಮತದಾರರು ಬಿಸಿಲಿನಲ್ಲಿಯೇ ಸಾಲಿನಲ್ಲಿ ನಿಂತಿರುವುದನ್ನು ಎಸ್ಪಿ ಸಂಗೀತಾ ಅವರು ಗಮನಿಸಿ ಬಿಸಿಲಿನಲ್ಲಿ ನಿಲ್ಲುವ ಬದಲಾಗಿ ಪಕ್ಕದಲ್ಲಿ ನೆರಳಿನಲ್ಲಿ ನಿಲ್ಲಿಸುವಂತೆ ಸೂಚಿಸಿದರು.
ದಾಖಲೆ ಮತದಾನ

ಕುಂದಗೋಳ ವಿಧಾನಸಭೆ ಉಪ ಚುಣಾವಣೆಯಲ್ಲಿ ಶೇ.82.42 ಮತದಾನ ಆಗಿರುವುದು ದಾಖಲೆಯಾಗಿದೆ. ಬೆಳಗ್ಗೆ 9 ಗಂಟೆ ವೇಳೆಗೇ ಶೇ. 9.59 ಮತದಾನ ಆಗುವ ಮೂಲಕ ಈ ಬಾರಿ ದಾಖಲೆ ಮತದಾನದ ನಿರೀಕ್ಷೆ ಮೂಡಿಸಿತ್ತು. 11ಕ್ಕೆ ಶೇ.24.20, ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ.42.54 ಮತ ಚಲಾವಣೆಯಾಗಿದ್ದವು. 3 ಗಂಟೆಗೆ ಶೇ.59.50ರಷ್ಟಾಗಿತ್ತು. ಸಂಜೆ 4 ಗಂಟೆ ನಂತರ ಮತದಾನ ಚುರುಕುಕೊಂಡ ಪರಿಣಾಮ 5 ಗಂಟೆ ಹೊತ್ತಿಗೆ 72.97 ಮತದಾನವಾಯಿತು. ಮತದಾನಕ್ಕೆ ಇನ್ನೂ ಒಂದು ಗಂಟೆ ಬಾಕಿಯಿದೆ ಎನ್ನುವಾಗ ಮತಗಟ್ಟೆ ಮುಂದೆ ಮತ್ತೇ ಸರದಿ ಹೆಚ್ಚಾಯಿತು. ಅಂತಿಮವಾಗಿ ಶೇ.82.42 ಮತದಾನ ಆಗುವ ಮೂಲಕ ದಾಖಲೆಗೆ ಸಾಕ್ಷಿಯಾಯಿತು. 2018ರ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಶೇ.78.67 ಮತದಾನವಾಗಿತ್ತು. ಉಪಚುನಾವಣೆಯಲ್ಲಿ ಶೇ.3.75ರಷ್ಟು ಮತದಾನ ಹೆಚ್ಚಳವಾಗಿದೆ. 2013ರ ಚುನಾವಣೆಯಲ್ಲಿ ಶೇ. 75.87 ಮತದಾನವಾಗಿತ್ತು.
ಯರಗುಪ್ಪಿಯಲ್ಲಿ ಕುಸುಮಾವತಿ-ಅದರಗುಂಚಿಯಲ್ಲಿ ಚಿಕ್ಕನಗೌಡ್ರ ಮತದಾನಗೆಲುವು ನಮ್ಮದೇ..

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಯರಗುಪ್ಪಿ ಗ್ರಾಮದಲ್ಲಿ ಮತ ಚಲಾಯಿಸಿದರೆ, ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಸ್ವಗ್ರಾಮ ಅದರಗುಂಚಿಯಲ್ಲಿ ಮತ ಹಾಕಿದರು.

ಕುಸುಮಾವತಿ ಅವರು ಮಕ್ಕಳಾದ ರೂಪಾ, ದೀಪಾ ಹಾಗೂ ಅಮರಶಿವನೊಂದಿಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಯರಗುಪ್ಪಿ ಗ್ರಾಮದಲ್ಲಿರುವ ಪತಿ ದಿ| ಸಿ.ಎಸ್‌. ಶಿವಳ್ಳಿ ಅವರ ಸಮಾಧಿಗೆ ತೆರಳಿ ನಮಸ್ಕರಿಸಿ ಮತದಾನಕ್ಕೆ ಆಗಮಿಸಿದರು. ಪುತ್ರಿ ರೂಪಾ ಶಿವಳ್ಳಿ ಅವರೊಂದಿಗೆ ಆಗಮಿಸಿ ಗ್ರಾಮದ 25ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕುಸುಮಾವತಿ, 10 ಸಾವಿರ ಮತಗಳಿಂದ ಗೆಲುವು ಖಚಿತವಾಗಿದೆ. ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ನನ್ನ ಚುನಾವಣೆ ಮಾಡಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದಾಗ ಪತಿ ಶಿವಳ್ಳಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದ ಬಡ ಜನತೆ ಬಗ್ಗೆಯಿದ್ದ ಕಾಳಜಿ ಹಾಗೂ ಪಕ್ಷದ ನಾಯಕರು, ಕಾರ್ಯಕರ್ತರ ಅವಿರತ ಕಾರ್ಯ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಜನರೊಂದಿಗೆ ನನ್ನ ಪತಿ ಹೊಂದಿದ್ದ ಬಾಂಧವ್ಯದಿಂದ ನನ್ನ ಕ್ಷೇತ್ರದ ಜನರು ಕೈ ಬಿಡುವುದಿಲ್ಲ ಎಂದು ಪತಿಯನ್ನು ನೆನೆದು ಕಣ್ಣೀರು ಹಾಕಿದರು.

ಕುಟುಂಬ ಸಮೇತ ಚಿಕ್ಕನಗೌಡ್ರ ಮತದಾನ: ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಅದರಗುಂಚಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿದರು. ಗ್ರಾಮದ 65 ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕೇವಲ 634 ಮತಗಳಿಂದ ಪರಾಭವಗೊಂಡಿದ್ದೆ. ಇದರಿಂದ ಕ್ಷೇತ್ರದ ಜನರಲ್ಲಿ ಸಾಕಷ್ಟು ಅನುಕಂಪವಿದೆ. ಇನ್ನೂ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ದೊಡ್ಡ ಪ್ರಮಾಣದಲ್ಲಿದೆ. ನಮ್ಮ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಚುನಾವಣೆ ಮಾಡಿದ್ದಾರೆ. 4ನೇ ಬಾರಿಗೆ ನಾನು ಶಾಸಕನಾಗುವುದು ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಸಿಲಿನ ಝಳ; ಮತಕೇಂದ್ರಗಳಲ್ಲಿ ನೀರಿನ ವ್ಯವಸ್ಥೆ
ಹುಬ್ಬಳ್ಳಿ:
ಸಿ.ಎಸ್‌. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ರವಿವಾರ ಮತದಾನ ನಡೆಯಿತು. ಬಿಸಿಲಿನ ಝಳದಿಂದಾಗಿ ಮತದಾರರಿಗೆ ಹಲವು ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳನ್ನು ಬಿಟ್ಟರೆ ಬಿರುಸಿನಿಂದ ಮತದಾನ ನಡೆಯಿತು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಬೆಳಗ್ಗೆ 7 ಗಂಟೆಯಿಂದಲೇ ಎಲ್ಲ ಗ್ರಾಮಗಳಲ್ಲಿ ತಂಡೋಪತಂಡವಾಗಿ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡು ಬಂದಿತು.

ಬಿಸಿಲಿನ ಬೇಗೆ: ಒಂದೆಡೆ ಚುನಾವಣೆ ಕಾವು ಜೋರಾಗಿದ್ದರೆ, ಇನ್ನೊಂದೆಡೆ ವಿಪರೀತ ಬಿಸಿಲಿನ ತಾಪದಿಂದ ಮತದಾರರು ಸೇರಿದಂತೆ ಎಲ್ಲರೂ ಬಳಲುವಂತಾಯಿತು. ಬೆಳಗ್ಗೆ ಬಿಸಿಲಿನ ತಾಪ ಆರಂಭವಾಗುವ ಮುನ್ನ ಜನರು ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು. ನಂತರ ಮಧ್ಯಾಹ್ನ 11 ಗಂಟೆ ನಂತರ ಬಿಸಿಲಿನ ಆರ್ಭಟದ ನಡುವೆಯೂ ಹಲವರು ಮತ ಚಲಾಯಿಸಿದರು.

ಮಧ್ಯಾಹ್ನ ಇಳಿಕೆ: ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯ ಆರಂಭದಲ್ಲಿ ಉತ್ತಮ ಮತದಾನವಾಯಿತು. ಮಧ್ಯಾಹ್ನ 12 ಗಂಟೆ ನಂತರ ಸ್ವಲ್ಪ ಇಳಿಕೆ ಕಂಡು ಸಂಜೆ ಆಗುತ್ತಿದ್ದಂತೆ ಮತ್ತೆ ತುರುಸು ಪಡೆದುಕೊಂಡಿತು.

ವಿವಿ ಪ್ಯಾಟ್‌ನಲ್ಲಿ ದೋಷ

ಯರಗುಪ್ಪಿ, ಚಿಕ್ಕನರ್ತಿ, ಬೆನಕನಹಳ್ಳಿ, ಗುಡಗೇರಿ ಗ್ರಾಮಗಳಲ್ಲಿ 20-25 ನಿಮಿಷ ಕಾಲ ವಿವಿಪ್ಯಾಟ್ ಕಾರ್ಯನಿರ್ವಹಿಸದ ಪರಿಣಾಮ ನಂತರ ಕಾಯ್ದಿರಿಸಿದ ಪ್ಯಾಟ್‌ಗಳನ್ನು ತಂದು ಜೋಡಿಸಿ ಮತದಾನ ಕ್ಕೆ ವ್ಯವಸ್ಥೆ ಮಾಡಲಾಯಿತು.

ಇತಿಹಾಸದಲ್ಲಿ ಪ್ರಥಮ

ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗಳು ಹಲವು ಏರಿಳಿತ ಕಂಡಿವೆ. ಆದರೆ ಈ ಬಾರಿಯಷ್ಟು ತುರುಸಿನ ಚುನಾವಣೆ ಹಿಂದೆಂದೂ ಕಂಡಿಲ್ಲ ಎಂಬುದು ಸ್ಥಳೀಯರ ಮಾತಾಗಿತ್ತು. ಕಳೆದ ಹಲವಾರು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಅತೀ ಹೆಚ್ಚು ಪ್ರಚಾರ, ಅತೀ ಹೆಚ್ಚು ಮುಖಂಡರಿಂದ ಪ್ರಚಾರ ಮಾಡಲಾಯಿತು. ಕಳೆದ 11 ಚುನಾವಣೆಗಳಲ್ಲಿ ಈ ಬಾರಿಯಂತಹ ಚುನಾವಣೆ ಎಂದೂ ಕಂಡಿಲ್ಲ ಎಂದು ಅರಳಿಕಟ್ಟಿ ಗ್ರಾಮದ ಹಿರಿಯ ಅಲ್ಲಾಭಕ್ಷ್ ಹೇಳಿದರು.

•ಜಿ. ಸಂಗೀತಾ, ಎಸ್ಪಿ

ಟಾಪ್ ನ್ಯೂಸ್

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.