![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Apr 29, 2017, 12:50 PM IST
ಕಲಘಟಗಿ: ಕೋಟ್ಯಂತರ ರೂ. ವಂಚನೆ ಮಾಡಿ ಪರಾರಿಯಾದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾ ತಂಡವು, ಶುಕ್ರವಾರ ಆರೋಪಿಗಳ ಮನೆ, ಕಚೇರಿಗಳಿಗೆ ಭೇಟಿ ನೀಡಿತು. ನಂತರ ಕಲಘಟಗಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ತೆರಳಿ ಕಡತ ಮತ್ತು ದಾಖಲಾತಿಗಳನ್ನು ಪರಿಶೀಲಿಸಿತು.
ಈಗಾಗಲೇ ಸ್ಥಳೀಯ ಪೊಲೀಸರು ಸೀಜ್ ಮಾಡಿರುವ ಪಟ್ಟಣದ ಸೋಮಲಿಂಗೇಶ್ವರ ಮಠದ ಎದುರಿನ ಮಹಡಿ ಮನೆ, ಹಳೆಯ ನ್ಯಾಯಾಲಯದ ಕೆಳಗಡೆ ಇರುವ ಮನೆ ಮತ್ತು ಕಾರ್ಯಾಲಯ, ಯುವಶಕ್ತಿ ಸರ್ಕಲ್ ನಲ್ಲಿರುವ ಪಟ್ಟಣ ಪಂಚಾಯತ ವಾಣಿಜ್ಯ ಮಳಿಗೆಯಲ್ಲಿರುವ ಕಾರ್ಯಾಲಯದ ಕಟ್ಟಡಗಳನ್ನು ವೀಕ್ಷಿಸಿದರು.
ಹಣ ಹೂಡಿ ವಂಚನೆಗೊಳಗಾದ ಬಹುತೇಕರ ಹತ್ತಿರ ಇರುವ ಸಹಕಾರಿ ಬ್ಯಾಂಕ್‌ನ ವಿತ್‌ಡ್ರಾವಲ್ ಸ್ಲಿಪ್‌ಗ್ಳನ್ನು ಕಂಡ ತನಿಖಾ ತಂಡ, ನೇರವಾಗಿ ಕಲಘಟಗಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ತೆರಳಿ ಕಡತ ಮತ್ತು ದಾಖಲಾತಿಗಳನ್ನು ಪರಿಶೀಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಕುದೂರ, ಹಣ ಕಳೆದುಕೊಂಡು ತೊಂದರೆಯಲ್ಲಿ ಸಿಲುಕಿರುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತನಿಖೆ ನಡೆಸಲಾಗುವುದು. ಹೂಡಿಕೆದಾರರು ಮಾಹಿತಿ ನೀಡಲು ಹಿಂಜರಿಯಬಾರದು.
ಎಲ್ಲ ಮಾಹಿತಿಗಳನ್ನೂ ನೀಡುವುದರಿಂದ ತನಿಖೆಗೆ ಸಹಕಾರಿಯಾಗಲಿದೆ. ಈ ವಂಚನೆ ಪ್ರಕರಣದಲ್ಲಿ ಖಾಸನೀಸ್ ಸಹೋದರರಿಗೆ ಸಹಕರಿಸಿದ ಎಲ್ಲರಿಂದಲೂ ಮಾಹಿತಿ ಸಂಗ್ರಹಿಸಿ ಕ್ರಮ ಜರುಗಿಸಲಾಗುವುದು ಎಂದರು. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು. ಇದರಲ್ಲಿ ಸಂಶಯ ಬೇಡ ಎಂದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.