Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಸಾಹೇಬರು ಕುಟುಂಬಕ್ಕೆ ಸಮಯ ನೀಡಿದ್ದು ಕಡಿಮೆ ಎಂದ ಪತ್ನಿ ಜ್ಯೋತಿ
Team Udayavani, May 8, 2024, 12:40 PM IST
ಹುಬ್ಬಳ್ಳಿ: ಲೋಕ ಮತ ಸಮರ ಮುಗಿಸಿರುವ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬುಧವಾರ ಕುಟುಂಬ ಸದಸ್ಯರೊಂದಿಗೆ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.
ಮನೆಯಲ್ಲಿ ಪತ್ನಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲ ಕಳೆದರು, ಕೆಲ ಕಾಲ ಮೊಮ್ಮಗಳೊಂದಿಗೆ ಆಟವಾಡಿದರು. ಪಕ್ಷದ ಕೆಲ ಪ್ರಮುಖರು, ಹಿತೈಷಿಗಳು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಮತದಾನ ಮಾಹಿತಿ ಪಡೆದುಕೊಂಡರು.
ಜೋಶಿಯವರ ಪತ್ನಿ ಜ್ಯೋತಿ ಜೋಶಿ ಮಾತನಾಡಿ,’ಸಾಹೇಬರು ಕುಟುಂಬಕ್ಕೆ ಸಮಯ ನೀಡಿದ್ದು ಕಡಿಮೆ. ಫಲಿತಾಂಶ ಬರುವವರೆಗಾದರೂ ಕುಟುಂಬಕ್ಕೆ ಸಮಯ ನೀಡುತ್ತಾರೆ ಎಂದು ಕೊಂಡಿದ್ದೇವೆ. ಸಚಿವರಾಗಿ ದೆಹಲಿಯಲ್ಲಿ ಹೆಚ್ಚು ಕಳೆದರು, ದೇಶದ ಕಾರ್ಯಕ್ಕೆ ಒತ್ತು ಕೊಟ್ಟಿದ್ದರು. ಚುನಾವಣೆ ಘೋಷಣೆ ನಂತರ ಪ್ರಚಾರದಲ್ಲಿ ತೊಡಗಿದವರು ಈ ದಿನ ಇಷ್ಟೊಂದು ಸಮಯ ನಮ್ಮೊಂದಿಗೆ ಇದ್ದಾರೆಂಬ ಖುಷಿ ತಂದಿದೆ.
ಅವರ ಸಣ್ಣ ಮಗಳು ಯಾವ ತರಗತಿ ಎಂಬುದು ಸಹ ಅವರಿಗೆ ಸರಿಯಾಗಿ ತಿಳಿದಿಲ್ಲ.ಅಷ್ಟರ ಮಟ್ಟಿಗೆ ಅವರು ಕೆಲಸ, ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಕುಟುಂಬಕ್ಕೆ ಸಮಯ ನೀಡದಿದ್ದರೂ ದೇಶ ಕಾರ್ಯದಲ್ಲಿ, ಸೇವೆಯಲ್ಲಿತೊಡಗಿದ್ದರ ಖುಷಿ ಇದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.