ದೇಶ ಕಂಡ ಅದ್ಬುತ ಗಾಯಕ ಡಾ| ಪಿ.ಬಿ. ಶ್ರೀನಿವಾಸ
Team Udayavani, Apr 24, 2018, 5:20 PM IST
ಇಳಕಲ್ಲ: ಪಿ.ಬಿ. ಶ್ರೀನಿವಾಸ ಅವರು ಅಸಾಮಾನ್ಯ ವ್ಯಕ್ತಿತ್ವದಿಂದ ಸಮಾಜದ ಮೇಲೆ ಬಹು ದೊಡ್ಡ ಪ್ರಭಾವನ್ನು ಬೀರಿ ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ
ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ಚಲನಚಿತ್ರ ಸಾಹಿತಿ ದೊಡ್ಡರಂಗೇಗೌಡ ಹೇಳಿದರು.
ನಗರದ ಕಂಠಿ ವೃತ್ತದ ಬಳಿಯ ಅನುಭವ ಮಂಟಪದಲ್ಲಿ ಸ್ನೇಹರಂಗ ಹಾಗೂ ರವೀಂದ್ರ ದೇವಗಿರಿಕರ ಅವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಡಾ| ಪಿ.ಬಿ. ಶ್ರೀನಿವಾಸರ ಐದನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪಿ.ಬಿ. ಶ್ರೀನಿವಾಸ ಅವರು ಇಂದು ಬೌದ್ಧಿಕವಾಗಿ ಇಲ್ಲದೇ ಇರಬಹುದು. ಆದರೆ ಅವರು ಹಾಡಿದ ಹಾಡುಗಳು ಈ ಭೂಮಿ, ಸೂರ್ಯ, ಚಂದ್ರ ಇರುವವರೆಗೂ ಹಾಡಿನ ಮೂಲಕ ಜೀವಂತವಾಗಿದ್ದಾರೆ. ಜ್ಯೋತಿಷಿಗಳ ಭವಿಷ್ಯ ಸುಳ್ಳು ಮಾಡಿ ಜೀವನದಲ್ಲಿ ದೊಡ್ಡ ಸಾಧನೆ ತೋರಿಸಿದ್ದರಿಂದ ಅವರ ತಂದೆ ತಾಯಿಗಳು ಪ್ರತಿವಾದಿ ಭಯಂಕರ ಶ್ರೀನಿವಾಸನೆಂದು ಕರೆಯುತ್ತಿದ್ದರು.
ಮಾಧುರ್ಯಕ್ಕೆ ಮತ್ತೂಂದು ಹೆಸರು ಪಿ.ಬಿ.ಎಸ್. ಅವರು ಕೇವಲ ಗಾಯಕರಾಗಿರದೇ ಕನ್ನಡ, ತೆಲಗು, ತಮಿಳು, ತುಳು, ಹಿಂದಿ ಭಾಷೆಗಳಲ್ಲಿ ಸಾಹಿತ್ಯವನ್ನು ಉರ್ದುವಿನಲ್ಲಿ ಗಜ್ಹಲ್‌ಗಳನ್ನು ರಚಿಸುತ್ತಿದ್ದರು. ಸಂಗೀತ ಭಾಷಾತೀತ, ಜಾತ್ಯತೀತ, ನಾದಾತೀತ, ಧರ್ಮಾತೀತ, ದೇಶಾತೀತ. ಸಂಗೀತ ಸಿದ್ಧ ಔಷದ್ಧಿ. ಇದಕ್ಕೆ ಮರಳಾಗದವರೇ ಇಲ್ಲ, ನಾನು ಒಬ್ಬ ಪಿ.ಬಿ. ಶ್ರೀನಿವಾಸ ಅವರ ದೊಡ್ಡ ಅಭಿಮಾನಿ ಎಂದರು.
ಶಿರೂರದ ಡಾ| ಬಸವಲಿಂಗ ಸ್ವಾಮಿಗಳು ಮಾತನಾಡಿ, ಪಿ.ಬಿ. ಶ್ರೀನಿವಾಸ ಹಾಡಿನ ಭಾವನೆಗಳನ್ನು ದ್ವನಿಯಲ್ಲಿ ತರುತ್ತಿದ್ದುದರಿಂದ ಕೇಳುಗರ ಭಾವನೆಗಳು ಅರಳುತ್ತಿದ್ದವು. ಹಿಂದೆ ಸಾಮಾಜಿಕ ಸ್ವಾಸ್ತ್ಯ ಇಟ್ಟುಕೊಂಡು ಚಿತ್ರಗಳನ್ನು ನಿರ್ಮಿಸುತ್ತಿದ್ದರು. ಇದರಿಂದ ಮನುಷ್ಯನ ಮನಸ್ಸು ಉದ್ವೇಗಗೊಳ್ಳದೆ ಮನಸ್ಸು ಅರಳಿಸುತ್ತಿತ್ತು. ಆದರೆ ಇಂದಿನ ಸಿನಿಮಾಗಳಾಗಲಿ, ದೂರದರ್ಶನದ ಧಾರವಾಹಿಗಳಾಗಲೀ ಮನುಷ್ಯನ ಮನಸ್ಸನ್ನು ವಿಕಾರ ಮತ್ತು ಉದ್ವೇಗಗೊಳಿಸಿ ಅವರನ್ನು ತಪ್ಪು ದಾರಿಗೆಳೆಯುತ್ತಿವೆ ಎಂದ ಅವರು, ನಗರದ ವೃತ್ತಿ ರಂಗಭೂಮಿ ಕಲಾವಿದೆ ಗಂಗಮ್ಮ ಆರೇರ ಅವರನ್ನು ಗೌರವಿಸಿ ಸತ್ಕರಿಸಿ ರವೀಂದ್ರ ದೇವಗಿರಕರ 25 ಸಾವಿರ ರೂ. ಕಾಣಿಕೆ ನೀಡಿ ಅಸಹಾಯಕರಾಗಿದ್ದ ಕಲಾವಿದೆಗೆ ಸಹಾಯ ಮಾಡಿ ಕಲಾ ಪೋಷಕರಾಗಿದ್ದಾರೆಂದು ಹೇಳಿದರು.
ಡಾ| ಪಿ.ಬಿ. ಶ್ರೀನಿವಾಸರ ಪುಣ್ಯಸ್ಮರಣೆ ಅಂಗವಾಗಿ ಪ್ರತಿವರ್ಷ ವೃತ್ತಿ ರಂಗಭೂಮಿ ಕಲಾವಿದರನ್ನು ಗೌರವಿಸುತ್ತಿರುವ ಕಲಾಪೋಷಕ ರವೀಂದ್ರ ದೇವಗಿರಿಕರ ಈ ವರ್ಷ ನಗರದ ವೃತ್ತಿ ರಂಗಭೂಮಿ ಹಿರಿಯ ಕಲಾವಿದೆ ಗಂಗಮ್ಮ ಆರೇರ ಅವರಿಗೆ 25 ಸಾವಿರ ಕಾಣಿಕೆಯೊಂದಿಗೆ ಗೌರವಿಸಿ ಸನ್ಮಾನಿಸಿದರು. ನಟಿ ಶ್ರೀಮತಿ ಜಯಲಕ್ಷ್ಮಿ, ಸಾಹಿತಿ ದೊಡ್ಡರಂಗೇಗೌಡ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಆರ್. ಶ್ರೀನಾಥ ಅವರನ್ನು ಸನ್ಮಾನಿಸಿದರು. ಬಳಿಕ ಪಿ.ಬಿ.ಶ್ರೀನಿವಾಸ ಅವರ ಸುಮಧುರ ಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.