ಪೌರಕಾರ್ಮಿಕರಿಗೆ ಸಂಚಾರಿ ವಿಶ್ರಾಂತಿ ಗೃಹ
ಪುರುಷ-ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆಸಮವಸ್ತ್ರ ಬದಲಿಸಲು ಬಹಳಷ್ಟು ಅನುಕೂಲ
Team Udayavani, Mar 11, 2021, 10:00 PM IST
ಹುಬ್ಬಳ್ಳಿ: ಮಹಾನಗರ ಸ್ವತ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗಾಗಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸಂಚಾರಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ ಯೋಜನೆ ರೂಪಿಸಿದೆ. ಸ್ವತ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ, ಚಹಾ, ವಿಶ್ರಾಂತಿಗಾಗಿ ನಿಗದಿತ ಸ್ಥಳವಿಲ್ಲ. ಎಲ್ಲಿ ಬೇಕೆಂದರಲ್ಲಿ ಕುಳಿತು, ನಿಂತು ಬೆಳಗಿನ ಉಪಾಹಾರ ಸೇವಿಸುತ್ತಾರೆ. ಇನ್ನು ಮನೆಯಿಂದ ಬರುವಾಗ ಧರಿಸಿದ ಸಮವಸ್ತ್ರದ ಮೇಲೆಯೇ ಕೆಲಸ, ಇದರಲ್ಲಿಯೇ ಉಪಾಹಾರ ಎಲ್ಲವೂ ಮುಗಿಸುತ್ತಾರೆ.
ಇನ್ನು ಕೊಂಚ ದಣಿವಾರಿಸಿಕೊಳ್ಳಲು ಯಾವುದಾದರೂ ಮರದ ಕೆಳಗೋ, ಕಟ್ಟಡದ ನೆರಳನ್ನೋ ಶ್ರಯಿಸಬೇಕು. ಕೆಲವೆಡೆ ಇದು ಕೂಡ ಇರಲ್ಲ. ಕುಡಿಯುವ ನೀರಿಗಾಗಿ ಅವರಿವರ ಮನೆ ತಡಕಾಡುವ ಪರಿಸ್ಥಿತಿಯಿದೆ. ಹೀಗಾಗಿ ಮಹಾನಗರದ ಸ್ವತ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ವಿಶ್ರಾಂತಿ ಅಗತ್ಯವಾಗಿದೆ ಎನ್ನುವ ಕಾರಣದಿಂದ ಮಹಾನಗರ ಪಾಲಿಕೆ 15 ಹಣಕಾಸು ಆಯೋಗದ ಅನುದಾನದಡಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಹೇಗಿರುತ್ತೆ ವಿಶ್ರಾಂತಿ ಗೃಹ: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸುವ ವಿಶ್ರಾಂತಿ ಗೃಹಗಳು ಸುಲಭವಾಗಿ ಸ್ಥಳಾಂತರಿಸುವ ಮೊಬೈಲ್ ವ್ಯವಸ್ಥೆ ಹೊಂದಿವೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆಯಿರುತ್ತದೆ. ಪ್ರತ್ಯೇಕ ಶೌಚಾಲಯಗಳು, ಶುಚಿಯಾಗಲು ನೀರು ಹಾಗೂ ಪೂರಕ ವ್ಯವಸ್ಥೆ ಇರುತ್ತದೆ. ವಿಶ್ರಾಂತಿ ಪಡೆಯಲು ಒಂದಿಷ್ಟು ಕುರ್ಚಿಗಳು, ಈ ಕೊಠಡಿಯಲ್ಲೇ ಬೆಳಗಿನ ಉಪಾಹಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಇದೇ ಸ್ಥಳಕ್ಕೆ ಆಗಮಿಸಿ ತಮ್ಮ ಸಮವಸ್ತ್ರ ಧರಿಸುವುದು, ಕರ್ತವ್ಯ ಮುಗಿದ ನಂತರ ತಮ್ಮ ವಸ್ತ್ರಗಳನ್ನು ಧರಿಸಬಹುದಾಗಿದೆ.
ಇನ್ನು ಸ್ವತ್ಛತಾ ಕೆಲಸಕ್ಕೆ ಬಳಸುವ ಸಾಮಗ್ರಿಗಳನ್ನು ಇಲ್ಲಿಯೇ ಇಡಬಹುದಾಗಿದೆ. ಹೀಗೆ ಪ್ರತ್ಯೇಕ ವಿಶ್ರಾಂತಿ ಗೃಹದಿಂದ ಪ್ರಮುಖವಾಗಿ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬಹುದಾಗಿದೆ ಎನ್ನುತ್ತಾರೆ ಪಾಲಿಕೆ ಅ ಧಿಕಾರಿಗಳು. ಕಡಿಮೆ, ಗುಣಮಟ್ಟ: ವಿಶ್ರಾಂತಿ ಗೃಹ ನಿರ್ಮಾಣಕ್ಕಾಗಿ 2.40 ಕೋಟಿ ರೂ. ಮೀಸಲಿಡಲಾಗಿದ್ದು, 12 ವಲಯಗಳಲ್ಲಿ ತಲಾ ಒಂದರಂತೆ ಶಾಶ್ವತ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕೆಂದು ಆರಂಭದಲ್ಲಿ ಯೋಚಿಸಲಾಗಿತ್ತು. ಆದರೆ ಇದು ಅತ್ಯಂತ ವೆಚ್ಚದಾಯಕವಾಗಿದ್ದು, ಒಂದು ವಿಶ್ರಾಂತಿ ಗೃಹಕ್ಕೆ ಕನಿಷ್ಠ 30-32 ಲಕ್ಷ ರೂ. ಬೇಕಾಗುತ್ತದೆ.
ಇನ್ನು ಸ್ಥಳದ ಲಭ್ಯತೆ, ಕಾರ್ಮಿಕರಿಗೆ ಬೇಡಿಕೆ ಎಲ್ಲವನ್ನೂ ಅವಲೋಕಿಸಿದಾಗ ಶಾಶ್ವತ ವಿಶ್ರಾಂತಿ ಗೃಹ ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಬಂದ ನಂತರ ಮೊಬೈಲ್ ವಿಶ್ರಾಂತಿ ಗೃಹಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಈ ಗೃಹ ನಿರ್ಮಿಸಲು 8-9 ಲಕ್ಷ ರೂ. ವೆಚ್ಚವಾಗಲಿದೆ. ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆಲ ವಾರ್ಡುಗಳಲ್ಲಿ ಮೊಬೈಲ್ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಲಾಗಿದೆ. ಇವುಗಳ ಬಗ್ಗೆ ಅಧ್ಯಯನ ಮಾಡಿರುವ ಇಲ್ಲಿನ ಪಾಲಿಕೆ ಅ ಕಾರಿಗಳು ಮೊಬೈಲ್ ವಿಶ್ರಾಂತಿ ಗೃಹಗಳು ಅತ್ಯಂತ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಇವುಗಳನ್ನು ಕೆಲವೇ ಗಂಟೆಗಳಿಗೆ ಬೇಕಾದ ಸ್ಥಳಗಳಿಗೆ ಸ್ಥಳಾಂತರ ಮಾಡಬಹುದಾಗಿದ್ದು, ಖರ್ಚು ಕೂಡ ಕಡಿಮೆಯಿದೆ.
ಮೊದಲು ಪ್ರಾಯೋಗಿಕ: ಪ್ರತಿಯೊಂದು ವಾರ್ಡಿನಲ್ಲಿ ಸೂಕ್ತ ಸ್ಥಳ ಗುರುತಿಸಿ ವಿಶ್ರಾಂತಿ ಗೃಹ ನಿರ್ಮಿಸಬೇಕೆನ್ನುವ ಗುರಿಯಿದೆ. ಆದರೆ ಇದರ ಸಾಧಕ-ಬಾಧಕ ಅರಿಯುವ ಉದ್ದೇಶದಿಂದ ಆರಂಭದಲ್ಲಿ ಒಂದು ವಿಶ್ರಾಂತಿ ಗೃಹ ಯಾವುದಾದರೂ ಒಂದು ವಾರ್ಡಿನಲ್ಲಿ ಕೂಡಿಸಲಿದ್ದಾರೆ. ಈ ವಿಶ್ರಾಂತಿ ಗೃಹದ ಬಳಕೆಯ ಪರಿಣಾಮ, ಎಷ್ಟರ ಮಟ್ಟಿಗೆ ಪೌರಕಾರ್ಮಿಕರಿಗೆ ಅನುಕೂಲವಾಗಲಿದೆ, ಇರುವ ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ಮಾಡಬೇಕಾದ ಎಂಬಿತ್ಯಾದಿ ಅಂಶಗಳನ್ನು ಅರಿತು ಉಳಿದ ವಾರ್ಡುಗಳಿಗೆ ವಿಸ್ತರಿಸುವ ಗುರಿಯಿದೆ. ವಿಶ್ರಾಂತಿ ಗೃಹಗಳ ನಿರ್ವಹಣೆ ಆಯಾ ಪೌರಕಾರ್ಮಿಕರದ್ದಾಗಿದೆ. ಸಂಬಂಧಿ ಸಿದ ಆರೋಗ್ಯ ನಿರೀಕ್ಷಕರು ಇದರ ಮೇಲುಸ್ತುವಾರಿಯಾಗಿರುತ್ತಾರೆ. ಸ್ವತ್ಛತೆ, ಸುಸ್ಥಿತಿಯಲ್ಲಿ ಕಾಪಾಡುವುದು ಇವರ ಜವಾಬ್ದಾರಿಯಾಗಿರುತ್ತದೆ. ಪ್ರಾಯೋಗಿಕ ಹಂತದಲ್ಲಿ ವಿಶ್ರಾಂತಿ ಕೊಠಡಿ ಯಶಸ್ವಿಯಾದರೆ.
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.