ಬಡ ರೋಗಿಗಳಿಗೆ ರೋಟರಿ ವರದಾನ
100ಕ್ಕೂ ಹೆಚ್ಚು ಮಂದಿಗೆ ಉಚಿತ-ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್
Team Udayavani, Mar 22, 2021, 4:04 PM IST
ಹುಬ್ಬಳ್ಳಿ: ರೋಟರಿ ಕ್ಲಬ್ ಹುಬ್ಬಳ್ಳಿ ಸೌಥ್ ನಿಂದ ಪ್ರತಿದಿನ ಒಬ್ಬ ಬಡ ಹಾಗೂ ಅರ್ಹ ರೋಗಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೂ ಸುಮಾರು100ಕ್ಕೂ ಅಧಿಕ ರೋಗಿಗಳು ಕಡಿಮೆ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪ್ರಯೋಜನ ಪಡೆದುಕೊಂಡಿದ್ದಾರೆ.
ಗೋಕುಲ ರಸ್ತೆಯ ಭಾಣಜಿ ಡಿ. ಖೀಮಜಿ ಲೈಫ್‌ಲೈನ್ ಡಯಾಲಿಸಿಸ್ ಸೆಂಟರ್‌ಗೆ ರೋಟರಿಕ್ಲಬ್‌ನಿಂದ ಫೆಬ್ರವರಿಯಲ್ಲಿ 52 ಲಕ್ಷ ವೆಚ್ಚದಲ್ಲಿ 6ಡಯಾಲಿಸಿಸ್ ಯಂತ್ರ ನೀಡಲಾಗಿದೆ. ಅದರಲ್ಲಿ26 ಲಕ್ಷ ರೂ.ಗಳನ್ನು ಇಂಟರ್‌ನ್ಯಾಷನಲ್ ರೋಟರಿ ಕ್ಲಬ್ ಹಾಗೂ ಇನ್ನುಳಿದ 26 ಲಕ್ಷ ರೂ.ಗಳನ್ನು ರೋಟರಿ ಕ್ಲಬ್ ಹುಬ್ಬಳ್ಳಿ ಸೌಥ್‌ನಿಂದನೀಡಲಾಗಿದೆ. ಇಲ್ಲಿಯವರೆಗೂ ಅತೀ ಕಡಿಮೆದರದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗಿದೆ.850 ರೂ.ಗೆ ಡಯಾಲಿಸಿಸ್: ಮೂತ್ರಪಿಂಡ ಸಮಸ್ಯೆ ಇರುವವರು ವೈದ್ಯರ ಶಿಫಾರಸು ಮೇರೆಗೆ ಡಯಾಲಿಸಿಸ್ ಚಿಕಿತ್ಸೆಗೆ ಸುಮಾರು 1,200 ರೂ. ಗಿಂತ ಅಧಿಕ ಹಣ ನೀಡಬೇಕಾಗುತ್ತದೆ. ಇದು ಬಡ ರೋಗಿಗಳಿಗೆ ಹೊರೆಯಾಗುತ್ತದೆ. ಇದನ್ನುಮನಗಂಡ ರೋಟರಿ ಕ್ಲಬ್‌ನವರು ಉಚಿತಹಾಗೂ ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್‌ನೀಡುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.
ಪ್ರತಿದಿನ ಒಬ್ಬರಿಗೆ ಉಚಿತ ಡಯಾಲಿಸಿಸ್ ಹಾಗೂ ಆರ್ಥಿಕವಾಗಿ ದುರ್ಬಲರಿಗೆ 850 ರೂ.ಗೆಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ.ದಾನಿಗಳಿಂದ ನೆರವು: ಡಯಾಲಿಸಿಸ್ ಕೇಂದ್ರದಲ್ಲಿಬಡವರಿಗೆ ಉಚಿತ ಡಯಾಲಿಸಿಸ್ ನೀಡುವ ಕುರಿತು ಹಲವು ದಾನಿಗಳು ರೋಟರಿ ಕ್ಲಬ್ ಹುಬ್ಬಳ್ಳಿಸೌಥ್ ಜೊತೆ ಕೈಜೋಡಿಸಿದ್ದಾರೆ. ಇಲ್ಲಿಯವರೆಗೆಸುಮಾರು 710 ಡಯಾಲಿಸಿಸ್ ಚಿಕಿತ್ಸೆ ನೀಡಲುಕ್ಲಬ್ ಸನ್ನದ್ಧವಾಗಿದೆ. ಇದರಲ್ಲಿ ದಾನಿಗಳಿಂದಸುಮಾರು 350 ರೋಗಿಗಳಿಗೆ ಹಾಗೂ ಕ್ಲಬ್‌ಪದಾಧಿ ಕಾರಿಗಳಿಂದ 360 ರೋಗಿಗಳಿಗೆಡಯಾಲಿಸಿಸ್ ಚಿಕಿತ್ಸೆಗೆ ನೆರವು ನೀಡಲಾಗುವುದು.ಕೆಲ ದಾನಿಗಳು 60 ಡಯಾಲಿಸಿಸ್, ಇನ್ನೊಬ್ಬರುವರ್ಷಕ್ಕೆ 50 ಡಯಾಲಿಸಿಸ್, ಮತ್ತೂಬ್ಬರುವರ್ಷಕ್ಕೆ 50 ಡಯಾಲಿಸಿಸ್ ಹೀಗೆ ಬಡವರಿಗೆಡಯಾಲಿಸಿಸ್ ಚಿಕಿತ್ಸೆಗೆ ನೆರವು ನೀಡಿದ್ದಾರೆ.
ಅವರೆಲ್ಲರ ಸಹಕಾರದಿಂದ ಪ್ರತಿದಿನ ಓರ್ವ ಬಡರೋಗಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ. ಉಚಿತ ಡಯಾಲಿಸಿಸ್ ಸೌಲಭ್ಯ ಸಂಬಂಧರೋಟರಿ ಕ್ಲಬ್ ಸೌಥ್‌ನ ನಾಲ್ಕು ಜನ ಹಾಗೂಆಸ್ಪತ್ರೆಯ ಇಬ್ಬರು ವೈದ್ಯರ ಸಮಿತಿ ಇದ್ದು,ಅವರು ರೋಗಿಯ ಸಂಪೂರ್ಣ ಮಾಹಿತಿ ಕಲೆಹಾಕಿ ಉಚಿತ ಚಿಕಿತ್ಸೆಗೆ ಅರ್ಹರಾಗಿದ್ದಾರೆ ಎಂದುಶಿಫಾರಸು ಮಾಡಿದ ನಂತರ ಅಂತಹವರಿಗೆಆಸ್ಪತ್ರೆಯಿಂದ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತದೆ.
ಬಡವರಿಗೆ ಉಚಿತ ಡಯಾಲಿಸಿಸ್ ಮಾಡುವ ಮೂಲಕ ಅವರ ಆರೋಗ್ಯಸುಧಾರಿಸುವಲ್ಲಿ ಕ್ಲಬ್ ವತಿಯಿಂದ ಅಲ್ಪಸಹಾಯ ಹಸ್ತ ಚಾಚಲಾಗಿದೆ. ಇದರಿಂದಹಲವು ರೋಗಿಗಳ ಜೀವ ಉಳಿಸಿದಸಮಾಧಾನ ಹಾಗೂ ಸಂತಸ ಮೂಡಿದೆ. – ಮಂಜುನಾಥ ಹೊಂಬಳ, ಅಧ್ಯಕ್ಷ, ರೋಟರಿ ಕ್ಲಬ್ ಹುಬ್ಬಳ್ಳಿ ಸೌಥ್
ರೋಟರಿ ಕ್ಲಬ್ ಕೈಗೊಂಡಿರುವ ಉಚಿತ ಹಾಗೂ ರಿಯಾಯಿತಿ ದರದ ಡಯಾಲಿಸಿಸ್ ಚಿಕಿತ್ಸೆ ಮಹತ್ ಕಾರ್ಯದಹಿಂದೆ ಅನೇಕ ದಾನಿಗಳ ನೆರವು ಇದೆ.ಕೆಲವರಂತೂ ಹೆಸರು ಹೇಳುವುದು ಬೇಡಎಂದು ದೇಣಿಗೆ ನೀಡುತ್ತಿದ್ದಾರೆ. ಬಡವರಿಗೆಉಚಿತ ಡಯಾಲಿಸಿಸ್ ಚಿಕಿತ್ಸೆ ಕೊಡಿಸುವಮನಸ್ಸಿರುವ ದಾನಿಗಳು ರೋಟರಿ ಕ್ಲಬ್ ಹುಬ್ಬಳ್ಳಿ ಸೌಥ್ ಪದಾ ಧಿಕಾರಿಗಳನ್ನು ಸಂಪರ್ಕಿಸಬಹುದು. – ಅನಿಲ ಜೈನ್, ರೋಟರಿ ಕ್ಲಬ್ ಡಯಾಲಿಸಿಸ್ ಸಮಿತಿ ಚೇರ್ಮೇನ್
-ಬಸವರಾಜ ಹೂಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.