ಅಧಿಕಾರಿಗಳ ಮುಂದಿದೆ ಸಮಸ್ಯೆಗಳ ಸಾಲು ಸಾಲು!
Team Udayavani, Jan 7, 2017, 12:10 PM IST
ಹುಬ್ಬಳ್ಳಿ: ಪಡಿತರ ಸರಿಯಾಗಿ ವಿತರಣೆ ಮಾಡುತ್ತಿಲ್ಲ, ಪದೇ-ಪದೇ ಆಧಾರ ನಕಲು ಪ್ರತಿ ಪಡೆಯುತ್ತೀರಿ. ದಿನದ ದುಡಿಮೆ ಕಳೆದುಕೊಂಡು ಪಡಿತರಕ್ಕಾಗಿ ಕಾಯುವ ಸ್ಥಿತಿ ಬಂದಿದೆ. ಇದಕ್ಕೆ ಪರಿಹಾರ ಇಲ್ಲವೇ ಎಂಬ ಆತಂಕದ ಪ್ರಶ್ನೆಗಳನ್ನು ಸಾರ್ವಜನಿಕರು ಅಧಿಕಾರಿಗಳ ಮುಂದಿಟ್ಟರು.
ಶುಕ್ರವಾರ ನಡೆದ ವಾರ್ಡ್ 45ರಲ್ಲಿ ಬರುವ ಪ್ರದೇಶಗಳ ಕುಂದು-ಕೊರತೆ ನಿವಾರಣಾ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಇಲಾಖೆ ಸಹಾಯಕ ಉಪನಿದೇಶಕ ನಾಗರಾಜ ಬನವಾಸಿ, ಕೊಳಚೆ ನಿರ್ಮೂಲನಾ ಮಂಡಳಿಯ ಹನುಮಂತ ರೆಡ್ಡಿ, ಪಾಲಿಕೆ ವಲಯ ಸಹಾಯಕ ಆಯುಕ್ತ ಕಾಂಬ್ಳೆ ಅವರಿಗೆ ಸಾರ್ವಜನಿಕರಿಂದ ವಿವಿಧ ಪ್ರಶ್ನೆಗಳು ಎದುರಾದವು.
ವಾರ್ಡ್ನ ವಿವಿಧ ಪ್ರದೇಶಗಳಲ್ಲಿ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುವುದಿಲ್ಲ, ಚರಂಡಿ ಸ್ವತ್ಛ ಮಾಡುವುದಿಲ್ಲ, ರಸ್ತೆಗಳು ಹಾಳಾಗಿವೆ ಎಂಬ ಹಲವಾರು ಸಮಸ್ಯೆಗಳನ್ನು ಪಾಲಿಕೆ ಸದಸ್ಯ ಮತ್ತು ಅಧಿಕಾರಿಗಳಿಗೆ ಹೇಳಿದರು. ಮಹಿಳೆಯೊಬ್ಬರು ಕಳೆದ 4 ತಿಂಗಳಿಂದ ಪಡಿತರ ವಿತರಣೆ ಮಾಡುತ್ತಿಲ್ಲ,
ಕೂಪನ್ ಪಡೆಯಲು ಅಲೆದಾಡಿಸುತ್ತಿದ್ದಾರೆ ಹೊರತು ಪಡಿತರ ಮಾತ್ರ ವಿತರಣೆ ಮಾಡುತ್ತಿಲ್ಲ ಎಂಬ ಸಮಸ್ಯೆಗೆ ಉತ್ತರಿಸಿದ ಆಹಾರ ಇಲಾಖೆ ಅಧಿಕಾರಿ ನಾಗರಾಜ ಬನವಾಸಿ, ಕಳೆದ ಬಾರಿ ಪಡಿತರ ಚೀಟಿಗೆ ಆಧಾರ ಲಿಂಕ್ ಮಾಡಬೇಕು ಎಂದು ಮಾಹಿತಿ ನೀಡಿದಾಗ ಒಂದು ಕಾರ್ಡ್ಗೆ ಒಬ್ಬೊಬ್ಬರು, ಇಬ್ಬರು ಮಾತ್ರ ಆಧಾರ ಲಿಂಕ್ ಮಾಡಿಸಿಕೊಂಡಿದ್ದಾರೆ.
ಇದರಿಂದ ಇನ್ನುಳಿದ ಪಡಿತರದಾರರಿಗೆ ಪಡಿತರ ವಿತರಣೆ ಮಾಡಲು ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಇದೀಗ ಮತ್ತೆ ಆಧಾರ ಕಾರ್ಡ್ ಲಿಂಕ್ ಮಾಡಲು ಸೂಚನೆ ನೀಡಿದ್ದು, ಆದ್ದರಿಂದ ಎಲ್ಲ ಪಡಿತರದಾರರು ಆಧಾರ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಗವಿ ಓಣಿಯ ಮೋಗೇರ ಚಾಳನಲ್ಲಿ ಕುಡಿಯುವ ನೀರು, ಒಳಚರಂಡಿ ಸಮಸ್ಯೆಯಾಗಿದ್ದು ಮೂರು ವಾರ್ಡ್ಗಳು ಈ ಭಾಗಕ್ಕೆ ಕೂಡುತ್ತಿದ್ದು ಯಾರ ಬಳಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ತಿಳಿಯುತ್ತಿಲ್ಲ. ಈ ಕುರಿತು ಗವಿ ಓಣಿಯನ್ನು ಒಂದೇ ವಾರ್ಡ್ಗೆ ಸೇರಿಸುವ ಮೂಲಕ ವಾರ್ಡ್ನ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು.
ಗವಿ ಓಣಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಶನಿವಾರ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರ ಸಮ್ಮುಖದಲ್ಲಿ ಭೇಟಿ ನೀಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಗಿರಣಿ ಚಾಳದ ನಿವಾಸಿಯೊಬ್ಬರು ನೀರಿನ ಬಿಲ್ ಮನ್ನಾ ಮಾಡಿ ದಿನನಿತ್ಯ ದುಡಿದುಕೊಂಡು ಜೀವನ ನಡೆಸುತ್ತಿರುವ ನಮಗೆ ಸಾವಿರಾರು ರೂ. ನೀರಿನ ಬಿಲ್ ಪಾವತಿಗೆ ಸಾಧ್ಯವಾಗದು ಎಂದರು.
ಸೂರು ನೀಡಿ: ಗಿರಣಿ ಚಾಳ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ನಿವಾಸಿಗಳಿಗೆ ಸರಿಯಾದ ಮನೆಗಳಿಲ್ಲ. ಆಶ್ರಯ ಯೋಜನೆಯಲ್ಲಿ ಸೂರು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಬಡವರಿಗೆ 7.25 ಯೋಜನೆಯಡಿ ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ ವಿಶೇಷ ಯೋಜನೆಗಳಿದ್ದು, ಅಂಥವರು ಪಾಲಿಕೆ ನಲ್ಮ ಕಚೇರಿಗೆ ಭೇಟಿ ನೀಡಿ ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಿದರು.
ಅಂಥವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು. ಇನ್ನು ಬಡವರು ನಿರುದ್ಯೋಗಿಗಳಿಗೆ ವಿವಿಧ ಯೋಜನೆಗಳಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಪಾಲಿಕೆ ಸದಸ್ಯ ಮೋಹನ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಹನುಮಂತಪ್ಪ ಮಾನಪಲ್ಲಿ, ಮೇಘರಾಜ ಹಿರೇಮನಿ, ಕಾಲಕುಡಕಿ, ಕೃಷ್ಣಾ ಜಕ್ಕಪ್ಪನವರ ಸೇರಿದಂತೆ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.