ರಸ್ತೆಗಳ ಪುನರ್ ನಿರ್ಮಾಣಕ್ಕೆ 120 ಕೋಟಿ ರೂ. ಅನುದಾನ
Team Udayavani, Sep 30, 2019, 9:45 AM IST
ನವಲಗುಂದ: ನೆರೆಹಾವಳಿಯಿಂದ ರಸ್ತೆಗಳ ಪುನರ್ ನಿರ್ಮಾಣಕ್ಕೆ ಸರಕಾರದಿಂದ 120 ಕೋಟಿ ಅನುದಾನ ಮಂಜೂರಾತಿ ಪಡೆಯಲಾಗಿದೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ತಾಲೂಕಿನ ಶಿರೂರ-ಅಳಗವಾಡಿ ರಸ್ತೆಯ ಭೂಮಿಪೂಜೆ ನೆರವೇರಿಸಿ ಶಿರೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರವಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನ ಶಿರೂರದಿಂದ ಅಳಗವಾಡಿ ರಸ್ತೆಗೆ ರೂ. 19.50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಲೋಕೋಪಯೋಗಿ, ಜಿಪಂ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನ ದೊರೆತಿದೆ. ಲೋಕೋಪಯೋಗಿ, ಜಿಪಂ, ಪುರಸಭೆ ಒಟ್ಟಾಗಿ 25 ಕೋಟಿ ಮಂಜೂರಾಗಿದೆ. ಲೋಕೋಪಯೋಗಿ ಅಡಿ 27 ಕೋಟಿ ರೂ. ಮಂಜೂರಾಗಿದ್ದು ಕುಸುಗಲ್‌ದಿಂದ ಇಂಗಳಹಳ್ಳಿ ರಸ್ತೆ, ತಿರ್ಲಾಪುರದಿಂದ ಬ್ಯಾಹಟ್ಟಿ ರಸ್ತೆ, ಯಮನೂರದಿಂದ ಮೊರಬ ರಸ್ತೆ, ನವಲಗುಂದದಿಂದ ನಲವಡಿ ರಸ್ತೆ, ನವಲಗುಂದದಿಂದ ಇಬ್ರಾಹಿಂಪುರ ರಸ್ತೆ, ನಾವಳ್ಳಿಯಿಂದ ಅಟ್ನೂರ ರಸ್ತೆ, ನವಲಗುಂದದಿಂದ ದಾಟನಾಳ ರಸ್ತೆ, ಮಣಕವಾಡ ಹತ್ತಿರ ಸಿ.ಡಿ. ಮಾಡುವುದು ಸೇರಿದಂತೆ ಬೆಳಹಾರ ಕಾಲವಾಡ ಹೆಬ್ಬಳ್ಳಿ ರಸ್ತೆ ಬೆಳವಟಗಿ ಅಮರಗೋಳ ರಸ್ತೆ, ಯಮನೂರ-ತಿರ್ಲಾಪುರ-ಮೊರಬ ರಸ್ತೆ,ಶಿವಳ್ಳಿ-ಹನಸಿ ವ್ಹಾಯಾ ಮೊರಬ-ಶಿರಕೋಳ ರಸ್ತೆ, ಯಮನೂರ-ಹಾಳಕುಸುಗಲ್ ರಸ್ತೆ, ನವಲಗುಂದ- ಇಬ್ರಾಹಿಂಪುರ- ನಾವಳ್ಳಿ-ತುಪ್ಪದಕುರಟ್ಟಿ ರಸ್ತೆ, ಗುಡಿಸಾಗರ-ನಾಗನೂರ- ಕಡದಳ್ಳಿ- ತಡಹಾಳ- ಕೊಂಗವಾಡ-ದಾಟನಾಳ ರಸ್ತೆ, ಕುಸುಗಲ್-ಬ್ಯಾಹಟ್ಟಿ ರಸ್ತೆ, ಇಂಗಳಹಳ್ಳಿ-ಗದಗ ರೋಡ್, ಬ್ಯಾಹಟ್ಟಿ-ಹೆಬಸೂರ ರಸ್ತೆಗಾಗಿ 2.95 ಕೋಟಿ ರೂ. ಅಲ್ಲದೇ ಜಿಪಂ ಗ್ರಾಮೀಣ ಅಭಿವೃದ್ಧಿ ರಸ್ತೆಗಾಗಿ 8 ಕೋಟಿ ರೂ. ಮಂಜೂರಾಗಿದ್ದು ಹೊಲಗಳ ರಸ್ತೆ ಅಭಿವೃದ್ಧಿ ಪಡಿಸಲಾಗುವುದೆಂದು ಹೇಳಿದರು.
ಅಣ್ಣಿಗೇರಿ, ನವಲಗುಂದ ಪುರಸಭೆಗಳ ಮೂಲಸೌಕರ್ಯಕ್ಕೆ 12 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ನೆರೆಹಾವಳಿಯಿಂದ ಹಾಳಾದ ರಸ್ತೆ, ಸೇತುವೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಿ ರೈತರಿಗೆ ಅನುಕೂಲವಾಗುವಂತೆ ನೀರು ಬಳಕೆ ಮಾಡಲು ನೀಲನಕ್ಷೆ ತಯಾರಿಸಿದ್ದು, ಯೋಜನೆಯನ್ನು ಕಾರ್ಯಗತ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಸಿದ್ದನಗೌಡ ಪಾಟೀಲ. ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ತಾಪಂ ಅಧ್ಯಕ್ಷೆ ಅನ್ನಪೂರ್ಣ ಇದ್ದ ರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.