ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
Team Udayavani, May 5, 2019, 11:10 AM IST
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ಸಂಘದ ಸದಸ್ಯರಿಗಾಗಿ ಆಯೋಜಿಸಲಾದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಇಲ್ಲಿನ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ನಗರದ ಶ್ರೀಯಾ ಪ್ರಾಪರ್ಟೀಸ್ ವ್ಯವಸ್ಥಾಪಕ ನಿರ್ದೇಶಕ ಸೂರಜ ಅಳವಂಡಿ ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು. ಸ್ವರ್ಣ ಸಮೂಹ ಸಂಸ್ಥೆ ಚೇರ್ಮನ್ ಡಾ|ಚಿಗುರುಪಾಟಿ ವಿ.ಎಸ್.ವಿ. ಪ್ರಸಾದ, ಕೆಎಸ್‌ಸಿಎ ಧಾರವಾಡ ವಲಯ ಚೇರ್ಮನ್ ವೀರಣ್ಣ ಸವಡಿ ಹಾಗೂ ಸಂಯುಕ್ತ ಕರ್ನಾಟಕ ಸಿಇಒ ಎ.ಸಿ. ಗೋಪಾಲ ಅವರು ಅಥಿತಿಗಳಾಗಿ ಪಾಲ್ಗೊಂಡರು. ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಉದಯವಾಣಿ ಸಂಪಾದಕ ವೆಂಕಟೇಶ ಪ್ರಭು, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ವಾಸುದೇವ ಹೆರಕಲ್, ಪ್ರಜಾವಾಣಿ ಬ್ಯುರೋ ಮುಖ್ಯಸ್ಥ ಬಿ.ಎನ್.ಶ್ರೀಧರ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಡಾ| ಬಂಡು ಕುಲಕರ್ಣಿ, ಹೊಸ ದಿಗಂತದ ಸ್ಥಾನಿಕ ಸಂಪಾದಕ ರಘುಪತಿ ಯಾಜಿ, ಸಂಘದ ಪದಾಧಿಕಾರಿಗಳಾದ ಸುಶಿಲೇಂದ್ರ ಕುಂದರಗಿ, ಜಗದೀಶ ಬುರ್ಲಬಡ್ಡಿ, ಗಿರೀಶ ಪಟ್ಟಣಶೆಟ್ಟಿ, ಗುರುರಾಜ ಹೂಗಾರ, ಪರಶುರಾಮ ತಹಶೀಲ್ದಾರ, ವಿರೇಶ ಹಂಡಗಿ, ಕೃಷ್ಣ ದಿವಾಕರ, ಗುರು ಭಾಂಡಗೆ, ರಾಜ್ಯ ಸಮಿತಿ ಸದಸ್ಯ ಲೋಚನೇಶ ಹೂಗಾರ ಮೊದಲಾದವರು ಉಪಸ್ಥಿತರಿದ್ದರು.
ಮೊದಲ ಪಂದ್ಯದಲ್ಲಿ ಲೀಡ್ ಸ್ಟೋರಿ ಇಲೆವೆನ್ ತಂಡ ನ್ಯೂಸ್ ಇಲೆವೆನ್ ತಂಡವನ್ನು 9ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ನ್ಯೂಸ್ ಇಲೆವೆನ್ ತಂಡ 6 ಓವರ್‌ಗಳಲ್ಲಿ 22 ರನ್ ಗಳಿಸಿದರೆ, 2.3 ಓವರ್‌ಗಳಲ್ಲಿ ಒಂದು ವಿಕೆಟ್ ಮಾತ್ರ ಕಳೆದುಕೊಂಡು ಗುರಿ ತಲುಪಿದ ಲೀಡ್ ಸ್ಟೋರಿ ಇಲೆವೆನ್ ತಂಡ ಜಯ ಗಳಿಸಿತು.
ಪೇಜ್ 3 ಇಲೆವೆನ್ ತಂಡ ನೀಡಿದ 35 ರನ್‌ಗಳ ಗುರಿಯನ್ನು ಕ್ಲಿಕ್ ಕ್ಲಿಕ್ ಇಲೆವೆನ್ ತಂಡ ಒಂದು ವಿಕೆಟ್ ಕಳೆದುಕೊಂಡು 3.4 ಓವರ್‌ಗಳಲ್ಲಿ ತಲುಪಿ ಎರಡನೇ ಸುತ್ತಿಗೆ ಮುನ್ನಡೆಯಿತು.
ಸ್ಟಿಂಗ್ ಇಲೆವೆನ್ ತಂಡ ನೀಡಿದ 29 ರನ್‌ಗಳ ಗುರಿಯನ್ನು ಆ್ಯಂಕರ್ ಇಲೆವೆನ್ ತಂಡ 4.1 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ತಲುಪಿ ಜಯ ದಾಖಲಿಸಿತು.
ಸ್ಪೇಶಲ್ ಸ್ಟೋರಿ ಇಲೆವೆನ್ ತಂಡ 72 ರನ್ ಗಳಿಸಿದರೆ, ಫ್ಲೈಯರ್ ಇಲೆವೆನ್ ತಂಡ 6 ವಿಕೆಟ್ ಕಳೆದುಕೊಂಡು 30 ರನ್‌ಗಳನ್ನು ಗಳಿಸಿ ಸೋಲನುಭವಿಸಿತು.
ಎಕ್ಸ್‌ಕ್ಲ್ಯೂಸಿವ್ ಇಲೆವೆನ್ ತಂಡ ಎಡಿಟೋರಿಯಲ್ ಇಲೆವೆನ್ ವಿರುದ್ಧ ಒಂದು ರನ್‌ನ ರೋಚಕ ಜಯ ಗಳಿಸಿತು. ಮೊದಲು ಆಡಿದ ಎಕ್ಸ್‌ಕ್ಲ್ಯೂಸಿವ್ ಇಲೆವೆನ್ ತಂಡ 39 ರನ್ ಗಳಿಸಿದರೆ ಎಡಿಟೋರಿಯಲ್ ಇಲೆವೆನ್ ತಂಡ 38 ರನ್ ಮಾತ್ರ ಗಳಿಸಿತು.
ಹೆಡ್‌ಲೈನ್ ಇಲೆವೆನ್ ತಂಡ ನೀಡಿದ 55 ರನ್‌ಗುರಿ ಬೆನ್ನತ್ತಿದ ಬೈಲೈನ್ ತಂಡ 6 ವಿಕೆಟ್ ಕಳೆದುಕೊಂಡು 21 ರನ್ ಗಳಿಸಿ ಸೋಲು ಕಂಡಿತು.
ಭಾನುವಾರ ಬೆಳಗ್ಗೆ ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಜರುಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.