ಮಹಿಳಾ ಉದ್ಯಮಿಗಳಿಗೆ ಸಖಿ ಬೆಳಕು
Team Udayavani, Apr 12, 2021, 2:06 PM IST
ಹುಬ್ಬಳ್ಳಿ: ಮಹಿಳಾ ಉದ್ಯಮಿಗಳ ಕೌಶಲ ಹೆಚ್ಚಳದ ತರಬೇತಿ, ವಹಿವಾಟು ವೇಗವರ್ಧನೆ, ರಫ್ತು ಚಿಂತನೆಯ ಮಹತ್ವದ ಕನಸಿನೊಂದಿಗೆ ಉದಯಿಸಿರುವ ಸ್ವಾವಲಂಬಿ ಸಖಿ ಉತ್ಪಾದಕರ ಕಂಪನಿ, ಕರ್ನಾಟಕ-ತೆಲಂಗಾಣ ರಾಜ್ಯಗಳಲ್ಲಿ ಸೀಮಿತ ವಹಿವಾಟಿನಲ್ಲಿದ್ದ ಸಾವಿರಾರು ಮಹಿಳಾ ಉದ್ಯಮಿಗಳಿಗೆ ಭರವಸೆಯ ಬೆಳಕಾಗಿ ಪ್ರಜ್ವಲಿಸುತ್ತಿದೆ.
ಉತ್ತರ ಕರ್ನಾಟಕದ ಮಟ್ಟಿಗೆ ಸಾಮಾಜಿಕ ಉದ್ಯಮಕ್ಕೊಂದು ಹೊಸ ಭಾಷ್ಯೆ ಬರೆದ ದೇಶಪಾಂಡೆ ಫೌಂಡೇಶನ್, ಉದ್ಯಮ ಕ್ಷೇತ್ರದಲ್ಲಿ ವಿಶೇಷವಾಗಿಮಹಿಳೆಯರು ಹಾಗೂ ಸಣ್ಣ-ಸೂಕ್ಷ್ಮ ಉದ್ಯಮದಾರರ ಕೌಶಲ ಹೆಚ್ಚಳ, ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾಗಿದೆ. ಹೊಲಿಗೆ, ಎಂಬ್ರಾಯಿಡರ್ ಕೆಲಸ, ಟೆರಾಕೋಟಾ, ಕಸೂತಿ ಕಲೆ, ಆಹಾರ ಪದಾರ್ಥಗಳತಯಾರಿಕೆ, ಹ್ಯಾಂಡಿಕ್ರಾಫ್ಟ್, ಲೋಹದ ಉತ್ಪನ್ನಗಳು ಹೀಗೆ ವಿವಿಧ ವೃತ್ತಿಯಲ್ಲಿದ್ದರೂ ತಮ್ಮದೇ ಸೀಮಿತ ಸ್ಥಿತಿಯಲ್ಲಿದ್ದ, ಕೌಶಲ, ಹೊಸ ವಿನ್ಯಾಸ, ಮಾರುಕಟ್ಟೆ ಕೊರತೆ ಎದುರಿಸುತ್ತಿದ್ದ ಸಣ್ಣ-ಸೂಕ್ಷ್ಮ ಮಹಿಳಾಉದ್ಯಮದಾರರನ್ನು ಗುರುತಿಸಿ ಅವರಿಗೆ ತರಬೇತಿ,ಮಾರ್ಗದರ್ಶನ, ಸಾಲ ಸಂಪರ್ಕ, ಮಾರುಕಟ್ಟೆ ಬೆಂಬಲ ಕಾರ್ಯವನ್ನು ಕೈಗೊಳ್ಳ ಲಾಗಿದ್ದು,ಇದೆಲ್ಲದರ ಪರಿಣಾಮವಾಗಿ ತರಬೇತಿ ಪಡೆದಮಹಿಳಾ ಉದ್ಯಮದಾರರ ಒಟ್ಟಾರೆ ವಹಿವಾಟು18-19 ಲಕ್ಷ ರೂ.ಗಳಿಂದ 1.50 ಕೋಟಿ ರೂ.ಗೆ ನೆಗೆತಕಾಣುವಂತಾಗಿದೆ.
ಮಹಿಳಾ ಉದ್ಯಮದಾರರ ಮಾಸಿಕ ವಹಿವಾಟು 10,000ದಿಂದ 40,000 ಸಾವಿರ ರೂ.ವರೆಗೆಹೆಚ್ಚಳವಾಗಿದೆ. 24 ಮಹಿಳೆಯರು 40 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಪಡೆದುಕೊಂಡು ತಮ್ಮ ವಹಿವಾಟುವಿಸ್ತರಿಸಿಕೊಂಡಿದ್ದಾರೆ. ಮಹಿಳಾ ಉದ್ಯಮದಾರರತರಬೇತಿ-ಮಾರ್ಗದರ್ಶನಕ್ಕೆ ರಾಜ್ಯದ ಧಾರವಾಡ,ಹಾವೇರಿ, ಗದಗ, ಬೆಳಗಾವಿ ಉತ್ತರ ಕನ್ನಡ ಜಿಲ್ಲೆಗಳುಹಾಗೂ ತೆಲಂಗಾಣದ ನಿಜಾಮಬಾದ್, ಕರೀಂನಗರಜಿಲ್ಲೆಗಳನ್ನು ಆಯ್ದುಕೊಳ್ಳಲಾಗಿದೆ.
ಯುಎನ್‌ಡಿಪಿ ಯೋಜನೆ: ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಉದ್ಯಮಶೀಲತೆ, ಉದ್ಯಮಬೆಳವಣಿಗೆ ಕೌಶಲ, ಮೌಲ್ಯವರ್ಧನೆ, ಮಾರುಕಟ್ಟೆ,ಬ್ರಾಂಡಿಂಗ್, ಹೊಸ ವಿನ್ಯಾಸ ಇನ್ನಿತರ ವಿಷಯಗಳಸುಮಾರು 15 ಸಾವಿರಕ್ಕೂ ಅಧಿ ಕ ಮಹಿಳೆಯರನ್ನುಅರ್ಜಿ ಹಾಕಿದ್ದರು. ಅದರಲ್ಲಿ ಸುಮಾರು 4,000ಮಹಿಳೆಯರನ್ನು ತರಬೇತಿಗೆ ಗುರುತಿಸಲಾಗಿತ್ತು.ಇದರಲ್ಲಿ ಅಂತಿಮವಾಗಿ 1,000 ಜನರನ್ನು ಆಯ್ಕೆ ಮಾಡಿ ಅವರಿಗೆ ಮೊದಲ ಹಂತದಲ್ಲಿ ತರಬೇತಿ ನೀಡಲಾಗಿತ್ತು. ಉದ್ಯಮಶೀಲತೆ ಜಾಗೃತಿ ಯೋಜನೆ ಅಡಿಯಲ್ಲಿಶೇ.50ರಷ್ಟು ಸೂಕ್ಷ್ಮ ಉದ್ಯಮದಾರರು, ಶೇ.30ರಷ್ಟುಸ್ವಯಂ ಉದ್ಯೋಗಿಗಳು, ಶೇ.20ರಷ್ಟು ಮಹತ್ವಾಕಾಂಕ್ಷಿ ಉದ್ಯಮಿದಾರರು ಎಂದು ವಿಂಗಡಿಸಿ ಅವರ ವೃತ್ತಿ ಹಾಗೂ ಉದ್ಯಮದಲ್ಲಿನ ಕೊರತೆಗಳನ್ನು ಗುರುತಿಸಿ ಅದರ ನಿವಾರಣೆಗೆ ಪೂರಕ ತರಬೇತಿ ಹಾಗೂ ಮಾರ್ಗದರ್ಶನ ಕೈಗೊಳ್ಳಲಾಗಿತ್ತು. ಮೊದಲ ಹಂತದಲ್ಲಿಹೊಸ ವಿನ್ಯಾಸ, ಡಿಜಿಟಲ್ ಮಾರ್ಕೆಟಿಂಗ್, ಸುಸ್ಥಿರತೆಕುರಿತಾಗಿ ತರಬೇತಿ ನೀಡಲಾಗಿದ್ದು, ಮೊದಲಹಂತದಲ್ಲಿ ತರಬೇತಿ ನೀಡಿದವರಿಗೆ ಎರಡನೇ ಹಂತದಲ್ಲಿಸಮುದಾಯ ನಾಯಕತ್ವದ ಜವಾಬ್ದಾರಿ ನಿರ್ವಹಣೆಗೆ ಆಯ್ಕೆ ಮಾಡಲಾಗಿತ್ತು.
100 ಬಿಜ್ ಸಖೀಯರು: ಉದ್ಯಮಶೀಲತೆ ಜ್ಞಾನ, ಚಿಂತನೆ,ಹೊಸತವನ್ನು ಹಸ್ತಾಂತರಿಸುವ ನಿಟ್ಟಿನಲ್ಲಿ 100 ಜನಸಮುದಾಯ ನಾಯಕರು( ಬಿಜ್ ಸಖೀ)ನ್ನು ಗುರುತಿಸಿಅವರಿಗೆ ಐದು ದಿನಗಳ ವಿಶೇಷ ತರಬೇತಿ ನೀಡಲಾಗಿತ್ತು.ಸಮುದಾಯ ನಾಯಕತ್ವದ ಜವಾಬ್ದಾರಿ ಹೊತ್ತ ಸಖಿಯರಿಗೆ ಒಬ್ಬರಿಗೆ 10 ಜನ ಮಹಿಳಾ ಉದ್ಯಮಿಗಳ ತರಬೇತಿ, ಬೆಳವಣಿಗೆ ಜವಾಬ್ದಾರಿ ನೀಡಲಾಗಿದ್ದು, 100ಜನರು ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯ 1,000 ಜನಮಹಿಳಾ ಉದ್ಯಮಿದಾರರು ತಮ್ಮ ಉದ್ಯಮ ಬೆಳವಣಿಗೆಜತೆಗೆ ಸಮುದಾಯ ನಾಯುಕತ್ವದ ಗುಣ ಹೊಂದುವ ರೀತಿಯಲ್ಲಿ ತರಬೇತಿಯಲ್ಲಿ ತೊಡಗಿದ್ದಾರೆ.
ಸ್ವಾವಲಂಬಿ ಸಖೀ ಉತ್ಪಾದಕರ ಕಂಪನಿ: ಉದ್ಯಮಶೀಲತೆ, ಉದ್ಯಮ ಬೆಳವಣಿಗೆ, ಹೊಸ ವಿನ್ಯಾಸ ಹಾಗೂ
ಕೌಶಲತೆ ತರಬೇತಿ-ಮಾರ್ಗದರ್ಶನ ಪಡೆದ ಮಹಿಳಾ ಉದ್ಯಮದಾರರು ತಮ್ಮದೇ ಉತ್ಪಾದಕ ಕಂಪನಿ ಆರಂಭಿಸಿ ಒಂದೇ ಬ್ರಾಂಡ್‌ನಡಿ ಮಾರಾಟಕ್ಕೆ ಚಿಂತಿಸಿದ ಪರಿಣಾಮಸ್ವಾವಲಂಬಿ ಸಖೀ ಉತ್ಪಾದಕರ ಕಂಪನಿ ಅಸ್ತಿತ್ವಕ್ಕೆ ಬಂದಿದೆ.
2020ರ ಅ.9ರಂದು ಕಂಪನಿ ನೋಂದಣಿ ಮಾಡಲಾಗಿದ್ದು, ಕಂಪನಿಯಲ್ಲಿ ಸುಮಾರು 200 ಜನಷೇರುದಾರರು ಇದ್ದಾರೆ. ಕಂಪನಿ ಸದಸ್ಯತ್ವ ಶುಲ್ಕವಾಗಿ ಪ್ರತಿ ಸದಸ್ಯರಿಂದ 100 ರೂ. ಪಡೆಯಲಾಗಿದ್ದು,ಷೇರು ಹಣವಾಗಿ ಒಬ್ಬರಿಂದ 500 ರೂ.ಗಳನ್ನು ಪಡೆಯಲಾಗಿದ್ದು, 1.20 ಲಕ್ಷ ರೂ. ಷೇರು ಬಂಡವಾಳಶೇಖರಣೆಯಾಗಿದೆ. ಕಂಪನಿಯಲ್ಲಿ ಪ್ರತಿಯೊಬ್ಬ ಷೇರುದಾರರಿಗೆ ಒಂದು ಷೇರು, ಒಂದು ಮತದ ಅವಕಾಶಕ್ಕೆ ಸೀಮಿತಗೊಳಿಸಲಾಗಿದೆ.
ಕಂಪನಿ ಮಾಡುವುದರಿಂದ ಒಂದೇ ಬ್ರಾಂಡ್‌ನಡಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಮಾರಾಟಕ್ಕೆ ಸುಲಭವಾಗಲಿದೆ. ಜತೆಗೆ ಕಚ್ಚಾ ಸಾಮಗ್ರಿಗಳನ್ನುಸಾಮೂಹಿಕವಾಗಿ ಖರೀದಿಸುವುದರಿಂದ ಕಡಿಮೆದರದಲಿ ದೊರೆಯುಲಿದೆ. ಈಗಾಗಲೇ ಕಂಪನಿಜತೆ ಒಡಂಬಡಿಕೆ ಮಾಡಿಕೊಂಡಿರುವ ಮುಂಬೆ„ನ ಕಂಪನಿಯೊಂದು ಬೈ ಬ್ಯಾಕ್ ಗ್ಯಾರೆಂಟಿ ಅಡಿಯಲ್ಲಿಬ್ಯಾಗ್‌ಗಳನ್ನು ತಯಾರಿಸಿಕೊಡಲು ಕೇಳಿದ್ದು, ಈಗಾಗಲೇ ಬ್ಯಾಗ್‌ಗಳನ್ನು ತಯಾರಿಸಿ ಕಳುಹಿಸಲಾಗಿದೆ. ಬರುವ ದಿನಗಳಲ್ಲಿ ಕೆಲವೊಂದು ಉತ್ಪನ್ನಗಳನ್ನು ರಫ್ತು ಮಾಡುವಚಿಂತನೆಯನ್ನು ಹೊಂದಲಾಗಿದೆ. ನಬಾರ್ಡ್ ನೆರವು ಸಹ ದೊರೆಯತೊಡಗಿದೆ.
ಲಾಕ್‌ಡೌನ್ ಸಮಯದಲ್ಲಿ ಸುಮಾರು 1.72ಲಕ್ಷ ಮಾಸ್ಕ್ಗಳನ್ನು ತಯಾರಿಸಲಾಗಿದ್ದು, ಮೂರುಲೇಯರ್‌ನ ಸ್ಟೆರಲೈಡ್ ಮಾಸ್ಕ್ಗಳನ್ನು ಮಾರುಕಟ್ಟೆಗೆನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣಗಿಸಿದಬಾಳೆಹಣ್ಣು(ಸುಕೇಳಿ) ತಯಾರಿಕೆಗೆ ಮಹಿಳೆಯರಿಗೆತರಬೇತಿ ನೀಡಲಾಗಿದ್ದು, ಪುಣೆ-ಮುಂಬೈ ಇನ್ನಿತರಕಡೆಯಿಂದ ಪ್ರಸ್ತುತ ಮಾಸಿಕ 5 ಕ್ವಿಂಟಲ್‌ನಷ್ಟುಮಾರಾಟವಾಗುತ್ತಿದ್ದು, ಅದನ್ನು 12-15 ಕ್ವಿಂಟಲ್‌ಗೆಹೆಚ್ಚಿಸಲು ಯೋಜಿಸಲಾಗಿದೆ. ಒಟ್ಟಾರೆಯಾಗಿ ಮಹಿಳಾ ಉದ್ಯಮದಾರರನ್ನು ಕೌಶಲಯುತಗೊಳಿಸುವ ಆಮೂಲಕ ಸುಸ್ಥಿರ ಉದ್ಯಮ ನಿರ್ಮಾಣದ ಮಹತ್ವದ ಕಾರ್ಯವನ್ನು ದೇಶಪಾಂಡೆ ಫೌಂಡೇಶನ್ ಮಾಡುತ್ತಿದೆ.
ಕರ್ನಾಟಕದಲ್ಲಿ ಮಹಿಳೆಯರ ಉದ್ಯಮಬೆಳವಣಿಗೆಗೆ ಉತ್ತಮ ಅವಕಾಶ ಇದ್ದು,ಬರುವ ದಿನಗಳಲ್ಲಿ ಉತ್ಪಾದಕರ ಕಂಪನಿಯನ್ನು ಪ್ರತಿ ಜಿಲ್ಲೆಯಲ್ಲೂ ಕೈಗೊಳ್ಳಲು, ಒಂದೇಬ್ರಾಂಡ್‌ನಡಿ ಉತ್ಪನ್ನಗಳ ಮಾರಾಟದ ಜತೆಗೆ ರಫ್ತುಗೆ ಗಮನ ನೀಡಲಾಗುತ್ತದೆ. ಲಿಜ್ಜತ್‌ಪಾಪಡ್ ಮಾದರಿಯಲ್ಲಿ ಸ್ವಂತ ಕಂಪನಿ, ಸ್ವಂತಉತ್ಪಾದನೆ ಮಾದರಿಯಲ್ಲಿ ಉತ್ತರ ಕರ್ನಾಟಕಮಹಿಳೆಯರನ್ನು ಸಜ್ಜುಗೊಳಿಸಲಾಗುತ್ತಿದೆ. – ಸಂದೀಪ ಬಿ., ಕಾರ್ಯನಿರ್ವಾಹಕ, ದೇಶಪಾಂಡೆ ಫೌಂಡೇಶನ್ ಸಿಇಒ ಕಚೇರಿ
ಮಹಿಳಾ ಉದ್ಯಮದಾರರಲ್ಲಿ ತರಬೇತಿನಂತರ ಮಹತ್ವದ ಬದಲಾವಣೆಕಂಡು ಬಂದಿದೆ. ಹೊಸ ವಿನ್ಯಾಸ, ಗುಣಮಟ್ಟದ ಉತ್ಪನ್ನದ ಜತೆಗೆ ಆದಾಯದಲ್ಲಿಬೆಳವಣಿಗೆಯಾಗಿದ್ದು, ಅನೇಕ ಮಹಿಳೆಯರು ಯಶಸ್ವಿನತ್ತ ಸಾಗುತ್ತಿದ್ದಾರೆ. – ಈರಣ್ಣ ರೊಟ್ಟಿ, ಇಡಿಪಿ ಯೋಜನೆ ಮುಖ್ಯಸ್ಥ
–ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.