4 ದಿನದಲ್ಲಿ 18.1 ಟನ್ ಮಾವು ಬಿಕರಿ- 9.75 ಲಕ್ಪ ರೂ. ವಹಿವಾಟು
Team Udayavani, May 30, 2018, 5:01 PM IST
ಧಾರವಾಡ: ಇಲ್ಲಿಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕಳೆದ ನಾಲ್ಕು ದಿನಗಳ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮಂಗಳವಾರ ತೆರೆ ಬಿತ್ತು.
ಮೇ 26ರಿಂದ ಮೇ 28 ರವರೆಗೆ ಆಯೋಜಿಸಲಾಗಿತ್ತು. ಆದರೆ ಮೇ 28ರಂದು ಕರ್ನಾಟಕ ಬಂದ್ ಇದ್ದುದರಿಂದ ಹಿನ್ನಡೆ ಆಗಿದ್ದರಿಂದ ಮಂಗಳವಾರವೂ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ನಾಲ್ಕು ದಿನಗಳಲ್ಲಿ 18.1 ಟನ್‌ಗಳಷ್ಟು ಹಣ್ಣು ಮಾರಾಟ ಆಗಿದ್ದು, ಒಟ್ಟು 6086 ಡಜನ್ ಹಣ್ಣು ಮಾರಾಟ ಆಗುವ ಮೂಲಕ 9.75 ಲಕ್ಷ ರೂ.ಗಳಷ್ಟು ವ್ಯಾಪಾರ ವಹಿವಾಟು ಆಗಿದೆ. ಮೇಳದ ಕೊನೆಯ ದಿನವಾಗಿದ್ದ ಮಂಗಳವಾರ 4.6 ಟನ್ ಹಣ್ಣು ಮಾರಾಟ ಆಗಿದ್ದು, 1550 ಡಜನ್ ಹಣ್ಣು ಮಾರಾಟ ಆಗುವ ಮೂಲಕ 2.32 ಲಕ್ಷ ರೂ.ಗಳ ವಹಿವಾಟು ಆಗಿದೆ.
ಉತ್ತಮ ಪ್ರತಿಕ್ರಿಯೆ: ಮಾವು ಮೇಳದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ತಳಿಯ ಮಾವಿನ ಸಸಿಗಳ ಮಾರಾಟ ಏರ್ಪಡಿಸಲಾಗಿತ್ತು. ನಾಲ್ಕು ದಿನಗಳ ಅವಧಿಯಲ್ಲಿ 500 ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಸಸ್ಯಗಳು ಮಾರಾಟವಾದವು. ಸ್ಥಳದಲ್ಲಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಸಕ್ತ ರೈತರಿಗೆ ಮಾವು ಬೆಳೆಸುವ ವಿಧಾನ
ಮತ್ತು ಪದ್ಧತಿ ಕುರಿತು ನಾಲ್ಕು ದಿನಗಳ ಕಾಲ ಅಗತ್ಯ ಮಾಹಿತಿ ನೀಡಿದರು.
ಬರೀ ಅಲ್ಫೋನ್ಸೋ ಮೇಳ: ಈ ವರ್ಷದ ಮಾವು ಮೇಳದಲ್ಲಿ ಅತೀ ಹೆಚ್ಚು ಮಾರಾಟವಾಗಿದ್ದು ಧಾರವಾಡದ ಅಲ್ಫೋನ್ಸೋ ತಳಿ ಮಾತ್ರ. ಕಳೆದ ವರ್ಷ ಇಲ್ಲಿ ಮಲ್ಲಿಕಾ, ಸಕ್ಕರೆ ಗುಟ್ಲಿ,ಕಲಮಿ, ರತ್ನಾಗಿರಿ ಸೇರಿದಂತೆ ವಿವಿಧ ತಳಿಯ ಮಾವುಗಳು ಮಾವು ಪ್ರಿಯರಿಗೆ ಲಭ್ಯವಾಗಿದ್ದವು. ಆದರೆ ಈ ವರ್ಷ ಮೇಳದ ಮೊದಲ ದಿನ ಹೊರತು ಪಡಿಸಿದರೆ ಉಳಿದ ಮೂರು ದಿನಗಳ ಕಲಾ ಬರೀ ಅಲ್ಫೋನ್ಸೋ ಮಾತ್ರ ಮಾರಾಟವಾಗಿದ್ದು ಕಂಡು ಬಂತು.
ಬಾವಲಿ ಮಾವಿನ ಕಾಯಿ ತಿನ್ನೋದಿಲ್ಲ
ನನಗ ಈಗ 76 ವರ್ಷ ತಮ್ಮಾ. ನಾವು ಹುಟ್ಟಿದಾಗಿನಿಂದ ನೋಡೇನಿ ಬಾವುಲಿ ಎಂದಾರ ಮಾವಿನ ಕಾಯಿ, ಹಣ್ಣು ತಿಂತೈತೇನ. ಮಂದಿ ಗಾಳಿ ಸುದ್ದಿ ನಂಬಿ ಮಾವಿನ ಹಣ್ಣು ತಿನ್ನೂದು ಬಿಟ್ಟರು. ಈ ಮೇಳದಾಗ ನಮ್ಮನ್ನ ಒಂದಿಷ್ಟು ಮಂದಿ ಚಿಕ್ಕಿ ಬಿದ್ದ ಹಣ್ಣಿಗೆ ಬಾವುಲಿ ತಿಂದತೇನು ? ಅಂತ ಕೇಳಿದ್ರು. ಇದರಿಂದ ವ್ಯಾಪಾರಕ್ಕೆ ಹೊಡತ ಕುಂತತ.
ರೇಣಕವ್ವ ತಳವಾರ, ಜೋಗೆಲ್ಲಾಪೂರ ಮಾವು ವ್ಯಾಪಾರಿ
ಹೆಚ್ಚಾಗದ ಮಾರಾಟ
ಕಳೆದ ವರ್ಷ ಮೂರು ದಿನಗಳ ಕಾಲ ನಡೆದ ಮಾವು ಮೇಳದಲ್ಲಿ 5000ಕ್ಕೂ ಅಧಿಕ ಡಜನ್ ಹಣ್ಣು ಮಾರಾಟವಾಗಿತ್ತು. ಆದರೆ ಈ ವರ್ಷ ನಾಲ್ಕು ದಿನಗಳ ಕಾಲ ನಡೆದರೂ ಬರೀ 6086 ಡಜನ್ ಹಣ್ಣು ಮಾರಾಟವಾಗಿದೆ. ಹೀಗಾಗಿ ಹಣ್ಣು ಮಾರಾಟಕ್ಕೆ ಬಂದ ಮಾವು ಬೆಳೆಗಾರರು ಇದರಿಂದ ಬೇಸರಗೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಂತೆ, ಕಂತೆ ವೈರಸ್‌ನಿಂದ ಸುಸ್ತಾಗಿ ಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.