ಎರಡು ಕಾಲೋನಿ ದತ್ತು ಪಡೆದ ಸಂಗಮೇಶ
Team Udayavani, May 3, 2018, 4:39 PM IST
ಜಮಖಂಡಿ: ಜಮಖಂಡಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಂಗಮೇಶ ನಿರಾಣಿ ವಿಭಿನ್ನ ಮಾದರಿಯಲ್ಲಿ ಮತ ಯಾಚನೆ ಮಾಡಿದ ಪ್ರಸಂಗ ಬುಧವಾರ ನಡೆದಿದೆ. ನಿರಾಣಿ ಅವರು ಸಮಸ್ಯೆ ಕೇಳಲು ಜನರ ಬಳಿ ಹೋಗಿ, ಹೆಚ್ಚೆಚ್ಚು ಜನಪ್ರಿಯವಾಗುತ್ತಿರುವುದು ಕಂಡು ಬಂದಿದೆ ಎಂದು ನಗರಸಭೆ ಸದಸ್ಯೆ ಮಾಲಾಬಾಯಿ ಆಲಬಾಳ ಹೇಳಿದರು.
ಇಲ್ಲಿನ ಜಯನಗರ ಬಡಾವಣೆಯಲ್ಲಿ ಸಂಗಮೇಶ ನಿರಾಣಿ ಹಮ್ಮಿಕೊಂಡ ಬಡವರ ಮನೆ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರನ್ನೇ ಹೈಕಮಾಂಡ್ ಮಾಡಿ, ಸಮೃದ್ಧ ಜಮಖಂಡಿಯ ಕನಸು ಹೊತ್ತು, ಸಮಸ್ಯೆಗಳ ಸರ್ವೇ, ಪರಿಹಾರದ ಯೋಜನೆ ಸಿದ್ಧಪಡಿಸಿಕೊಂಡೆ ಚುನಾವಣೆಗಿಳಿದಿರುವ ನಿರಾಣಿ ತಮ್ಮ ಕ್ಷೇತ್ರಾಭಿವೃದ್ಧಿ ಪ್ರಣಾಳಿಕೆ, ಮನೆ ಮನೆ ಪಾದಯಾತ್ರೆ ನಡೆಸಿದ್ದು, ಈಗ ಹಲವು ಕಾಲೋನಿಗಳ ಸಮಸ್ಯೆಗಳನ್ನು ಮನಗಾಣಲು ಬಡವರ ಮನೆ ವಾಸ್ತವ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಎಂದರು.
ಮಂಗಳವಾರ ರಾತ್ರಿ ನಗರದ ಜಯನಗರ-ಮಹಾಲಿಂಗೆಶ್ವರ ಬಡಾವಣೆಯ ಮುನೇರಾ ಮೀರಾಸಾಬ ಮಕಾಂದಾರ (ಖಾಜಿಬಾಯಿ) ಅವರ ಮನೆಯಲ್ಲಿ ವಾಸ್ತವ್ಯ ಮಾಡಿ, ಮಂಜುನಾಥ ಹೊಸಮನಿ ಅವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ನಿವೃತ್ತಿನಾಥ ವಾಸ್ಟರ್, ಶಿವು ಗಸ್ತಿ, ಶ್ರೀಕಾಂತ ಕಾಳೆ, ಶ್ರೀನಾಥ ನವಣಿ, ಯಮನಪ್ಪ ಗುಣದಾಳ, ಮುತ್ತಪ್ಪ ಪೂಜಾರಿ, ಮಂಜುನಾಥ ಹೊಸಮನಿ, ಲಾಲಸಾಬ ಮುಜಾವರ, ವಿಟ್ಠಲರಾವ್ ಶಾಸ್ತ್ರಿ, ಪುಂಡಲೀಕ ವಾಸ್ಟರ್, ಹನಮಂತ ಗಸ್ತಿ, ರಾಮಣ್ಣ ಚಿಗರಿ, ಶಿವಪ್ಪ ಪರೀಟ, ದಶರಥ ಕಟ್ಟಿಮನಿ, ಅಪ್ಪಣ್ಣ ಬೈಲಪತ್ತಾರ ಇದ್ದರು.
ಎರಡು ಕಾಲೋನಿಗಳ ದತ್ತು: ಸಮಸ್ಯೆಗಳ ಆಗರವಾದ ಜಯನಗರ ಮತ್ತು ಮಹಾಲಿಂಗೇಶ್ವರ ಕಾಲೋನಿಗಳನ್ನು ಅಭಿವೃದ್ಧಿಗಾಗಿ ದತ್ತು ಪಡೆಯುವುದಾಗಿ ಸಂಗಮೇಶ ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ
KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ
BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!
Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ
Bantwal: 5ನೇ ಮದುವೆಗೆ ಸಿದ್ಧತೆ.. 4ನೇ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ ಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.