ತವರಿಗೆ ಮರಳಲು “ಸೇವಾಸಿಂಧು’ ಸೇತು
Team Udayavani, May 3, 2020, 11:36 AM IST
ಧಾರವಾಡ: ಕೋವಿಡ್-19 ನಿಯಂತ್ರಣಕ್ಕಾಗಿ ಲಾಕ್‌ಡೌನ್-3 ಮುಂದುವರಿಯಲಿರುವುದರಿಂದ ರಾಜ್ಯದಿಂದ ದೇಶದ ಬೇರೆ ರಾಜ್ಯಗಳಿಗೆ ಹೋಗುವವರು ಹಾಗೂ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರು ಕರ್ನಾಟಕ ಸರ್ಕಾರದ ಸೇವಾಸಿಂಧು ಯೋಜನೆಯ sevasindhu. karnataka.gov.in ವೆಬ್‌ಸೈಟ್ ಮೂಲಕ ತಮ್ಮ ಹೆಸರು, ವಿವರಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಸೇವಾ ಸಿಂಧು ಯೋಜನೆಯು ರಾಜ್ಯ ಸರ್ಕಾರದ ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ಸಮಸ್ತ ನಾಗರಿಕರಿಗೆ ತಲುಪಿಸುವ ಆನ್ ಲೈನ್ ವ್ಯವಸ್ಥೆಯಾಗಿದೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಬರದೆ ಆನ್‌ಲೈನ್‌ನಲ್ಲಿ ಮೊಬೈಲ್ ಮೂಲಕವೂ ತಮ್ಮ ಹೆಸರು ನೋಂದಾಯಿಸಿ ಕೊಳ್ಳಬಹುದು. ಪ್ರಯಾಣಕ್ಕೆ ಅನುಮತಿ ಬಯಸು ವವರು ಈ ವೆಬ್‌ಸೈಟ್ ಮೂಲಕ ಹೆಸರು, ಮೊಬೈಲ್ ಸಂಖ್ಯೆ, ವಯಸ್ಸು ನಮೂದಿಸಬೇಕು. ವಲಸೆ ಕಾರ್ಮಿಕರು/ಯಾತ್ರಿ/ಪ್ರವಾಸಿಗರು/ ವಿದ್ಯಾರ್ಥಿ/ಯಾವ ವರ್ಗಕ್ಕೆ ಸೇರಿದವರು ಎಂಬುದನ್ನು ಆಯ್ಕೆ ಮಾಡಬೇಕು. ವರ್ತಮಾನದ ವಾಸದ ವಿಳಾಸ, ತಲುಪಬೇಕಾದ ವಿಳಾಸ, ಅಂಚೆ ಪಿನ್‌ಕೋಡ್, ಪ್ರಯಾಣದವ್ಯವಸ್ಥೆ, ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ದಾಖಲಿಸಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.