ಜಮಖಂಡಿ ತಾಲೂಕಿನಲ್ಲಿಯೇ ಹಿಪ್ಪರಗಿ ಉಳಿಸಿ
Team Udayavani, Jun 20, 2018, 4:42 PM IST
ಜಮಖಂಡಿ: ನೂತನ ತಾಲೂಕು ರಬಕವಿ-ಬನಹಟ್ಟಿಯಲ್ಲಿ ಜಮಖಂಡಿ ತಾಲೂಕಿನಲ್ಲಿದ್ದ ಹಿಪ್ಪರಗಿ ಗ್ರಾಮವನ್ನು ಸೇರ್ಪಡೆಗೊಳಿಸಿದ್ದನ್ನು ವಿರೋಧಿಸಿ ಸೋಮವಾರ ಹಿಪ್ಪರಗಿ ಗ್ರಾಮಸ್ಥರು ಪಾದಯಾತ್ರೆ ಪ್ರತಿಭಟನೆ ಮೂಲಕ ಉಪವಿಭಾಗಾ ಧಿಕಾರಿ ಎಂ.ಪಿ.ಮಾರುತಿ ಅವರಿಗೆ ಮನವಿ ಸಲ್ಲಿಸಿದರು. ನಗರದ ಎ.ಜಿ.ದೇಸಾಯಿ ವೃತ್ತದಿಂದ ಆರಂಭಗೊಂಡಗೊಂಡ ಪಾದಯಾತ್ರೆ ಪ್ರತಿಭಟನೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಕುಡಚಿ ರಸ್ತೆಯಲ್ಲಿ ಬರತಕ್ಕ ಮಿನಿ ವಿಧಾನಸೌಧ ಆಗಮಿಸುವ ಮೂಲಕ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಹಿಪ್ಪರಗಿ ಗ್ರಾಮ ನೂತನ ತಾಲೂಕಿಗೆ ಸೇರ್ಪಡೆಗೊಳಿಸಿದ್ದರಿಂದ ಹೋಗಿ ಬರಲು ಬಸ್ ಸಂಚಾರ ವ್ಯವಸ್ಥೆಯಿಲ್ಲ. ಪ್ರತಿಯೊಂದು ಜಮ ಖಂಡಿ ತಾಲೂಕಿಗೆ ನಂಟಿಕೊಂಡಿರುವ ಶಿಕ್ಷಣ, ವ್ಯಾಪಾರ, ಬ್ಯಾಂಕ್ ಸಾಲ ಸೌಲಭ್ಯ ಸಹಿತ ಹತ್ತಾರು ತೊಂದರೆಗಳನ್ನು ಅನುಭವಿಸಬೇಕಾಗಿದೆ. ಯಾವುದೇ ಕೆಲಸಕ್ಕಾಗಿ ತಹಶೀಲ್ದಾರ್ ಹತ್ತಿರ ಹೋಗಬೇಕಾದರೇ ನೂತನ ತಾಲೂಕು ಬನಹಟ್ಟಿ ರಬಕವಿ-ಬನಹಟ್ಟಿ ಹೋಗಬೇಕು. ಉಪವಿಭಾಗಾಧಿಕಾರಿ ಕಚೇರಿಗೆ ಭೇಟಿಯಾಗ ಬೇಕಾದಲ್ಲಿ ಜಮಖಂಡಿ ತಾಲೂಕಿಗೆ ಆಗಮಿಸುವ ಮೂಲಕ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸರಕಾರ ಕೂಡಲೇ ಎಚ್ಚೆತ್ತು ಜಮಖಂಡಿ ತಾಲೂಕಿನಲ್ಲಿ ಹಿಪ್ಪರಗಿ ಗ್ರಾಮ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಜಮಖಂಡಿ ತಾಲೂಕಿನಲ್ಲಿದ್ದ ಕಲ್ಲಹಳ್ಳಿ, ಮಧುರಖಂಡಿ ಹಾಗೂ ಹಿಪ್ಪರಗಿ ಗ್ರಾಮಗಳನ್ನು ನೂತನ ತಾಲೂಕು ರಬಕವಿ-ಬನಹಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದರು. ನಂತರ ಕಲ್ಲಹಳ್ಳಿ, ಮಧುರಖಂಡಿ ಗ್ರಾಮಗಳನ್ನು ಮತ್ತೇ ಜಮಖಂಡಿ ತಾಲೂಕಿಗೆ ಸೇರ್ಪಡೆಗೊಂಡ ಕಾನೂನಿನ ರೀತಿಯಲ್ಲಿ ಹಿಪ್ಪರಗಿ ಗ್ರಾಮವನ್ನು ಸೇರ್ಪಡೆಗೊಳಿಸಬೇಕು. ಕಳೆದ 5 ವರ್ಷಗಳಿಂದ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದು, ಸರಕಾರ ಕಣ್ಮುಚ್ಚಿ ಕುಳಿತ್ತಿದ್ದು, ಈಗಲಾದರೂ ನೋವಿಗಳಿಗೆ ಸರಕಾರ ಸ್ಪಂದಿಸಬೇಕು. ಸರಕಾರ ಪ್ರತಿಭಟನೆಗೆ, ಮನವಿಗೆ ಸ್ಪಂದಿಸದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ಅನ್ನಪ್ಪ ಸಾವಳಗಿ, ಅಡಿವೆಪ್ಪ ಗುರವ, ಧರೆಪ್ಪ ಧರಿಗೋಣ, ನಾಗೇಶ ಜತ್ತಿ, ಬಸಪ್ಪ ಫಕೀರಪ್ಪಗೋಳ, ನಿಜಾಮ್ ಜಂಗ್ಲಿ, ಶಿವಗೌಡ ಪಾಟೀಲ, ಸಂಗನಗೌಡ ಲಕ್ಕಪ್ಪಗೋಳ, ನಾಗರಾಜ ಕಣಬೂರ, ಎಸ್.ಆರ್.ಗಾಳಿ, ಹನುಮಂತ ಗಾಣಿಗೇರ, ಅನ್ನಪ್ಪ ಮಂಟೂರ, ಈರಪ್ಪ ತುಪ್ಪದ, ಪರಸಪ್ಪ ಕಾಂಬಳೆ, ಮಹಾಂತೇಶ ತೇಲಿ, ಸಂಗಪ್ಪ ಮಲಕ್ಕಪ್ಪನ್ನವರ, ಚೆನ್ನಪ್ಪ ಮಾಲಿಗಾಂವಿ, ಗಿರಮಲ್ಲ ಕನ್ನೊಳ್ಳಿ, ಪ್ರಭು ಲಕ್ಕಪ್ಪಗೋಳ, ಸದಾಶಿವ ಬಾಗೇವಾಡಿ, ಶ್ರೀಶೈಲ ಪಾಲಭಾವಿ, ಪಾಂಡು ಪೂಜೇರಿ, ಸಂಗಪ್ಪ ದೇಸಾಯಿ, ಮೈಬೂಬ ಜಮಾದಾರ, ಭೀಮಪ್ಪ ಕಾಮಗೊಂಡ ಸಹಿತ ಹಿಪ್ಪರಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.