ಮಾತಿನಿಂದ ಗೋ ರಕ್ಷಣೆ ಅಸಾಧ್ಯ: ಶಂಕರಾನಂದ
Team Udayavani, Apr 16, 2018, 5:21 PM IST
ಹುಬ್ಬಳ್ಳಿ: ದೇಶಭಕ್ತಿ, ಧರ್ಮ ಪಾಲನೆ, ಗೋವು ರಕ್ಷಣೆ ಕೇವಲ ಬಾಯಿ ಮಾತಿನಲ್ಲಿದ್ದರೆ ಸಾಲದು ಕೃತಿಯಲ್ಲಿರಬೇಕು ಎಂದು ಆರ್‌ಎಸ್‌ಎಸ್‌ನ ಶಂಕರಾನಂದ ಹೇಳಿದರು.
ಉಣಕಲ್ಲ ಟಿಂಬರ್ ಯಾರ್ಡ್‌ನ ಪಾಟಿದಾರ ಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋಸೇವಾ ವಿಭಾಗದಿಂದ ನಡೆದ ಹುಬ್ಬಳ್ಳಿ ಮಹಾನಗರ ಗೋ ಜಪ ಸಮರ್ಪಣಾ ಮಹಾಯಜ್ಞದ ಸಮಾರೋಪದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬನಲ್ಲೂ ದೇಶಭಕ್ತಿ, ಧರ್ಮ ಪಾಲನೆ ಮಾಡುವ ಮನಸ್ಸಿದೆ. ಇನ್ನೊಬ್ಬರಿಗೆ ಉತ್ತಮವಾಗಿ ಸಂದೇಶವನ್ನು ಕೂಡ ನೀಡುತ್ತಾರೆ. ಆದರೆ ಬಹುತೇಕರು ಕಾರ್ಯರೂಪದಲ್ಲಿ ಅಳವಡಿಸಿಕೊಳ್ಳುವುದಿಲ್ಲ ಎಂದರು.
ರಾಷ್ಟ್ರದಲ್ಲಿ ನಡೆಯುತ್ತಿರುವ ಈ ಮಹಾಯಜ್ಞದ ಮೂಲಕ ಗೋ ರಕ್ಷಣೆ ಮಾಡುವ ಸಂದೇಶ ರವಾನೆಯಾಗಿದೆ. ಇಂತಹ ಯಾಗ ಯಜ್ಞಗಳನ್ನು ಮಾಡಿದಾಕ್ಷಣ ಗೋ ರಕ್ಷಣೆಯಾಗುತ್ತದೆ ಎಂದಲ್ಲ. ಈ ಕಾರ್ಯವನ್ನು ಇಷ್ಟಕ್ಕೆ ಸೀಮಿತ ಮಾಡದೆ ಪ್ರತಿಯೊಬ್ಬರು ಗೋ ರಕ್ಷಣೆ ಮಾಡುವ ಪಣ ತೊಡಬೇಕು. ದೇಶಭಕ್ತಿ, ಧರ್ಮ ಪಾಲನೆ, ಸತ್ಯದಂತಹ ಜೀವನದ ಮೌಲ್ಯಗಳನ್ನು ಸಾಧ್ಯವಾದಷ್ಟು ಕಾರ್ಯರೂಪಕ್ಕೆ ತರಬೇಕು ಎಂದರು.
ಜೀತಾಲಾಲ್ ಪಟೇಲ್ ಗೋ ಉತ್ಪನ್ನಗಳ ಬಳಕೆ ಹಾಗೂ ಅವುಗಳ ಪರಿಣಾಮಕಾರಿ ಶಕ್ತಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ಮಾಹಿತಿ ನೀಡಿದರು. ವೈಷ್ಣೋದೇವಿ ಮಂದಿರದ ಶ್ರೀ ದೇವಪ್ಪಜ್ಜ, ಮಹಾಯಜ್ಞ ಕಾರ್ಯಕ್ರಮದ ಅಧ್ಯಕ್ಷ ಭವರಲಾಲ್ ಆರ್ಯ, ಉಪಾಧ್ಯಕ್ಷ ಜೇಠಾಲಾಲಜಿ
ಪಟೇಲ್, ಜಗದೀಶಗೌಡ ಪಾಟೀಲ, ಸಂಚಾಲಕ ಭರತ ಜೈನ್, ಸದಾನಂದ ಕಾಮತ, ಮೃತ್ಯುಂಜಯ ಬಡಗಣ್ಣವರ ಇನ್ನಿತರರಿದ್ದರು.
ಸುಬ್ರಾಯ ಭಟ್ ನೇತೃತ್ವದಲ್ಲಿ ಜಪ ಯಜ್ಞ ಹಾಗೂ ಪೂರ್ಣಾಹುತಿ ನಡೆಯಿತು. ಪೂರ್ಣಾಹುತಿಯಲ್ಲಿ ಆರ್‌ಎಸ್‌ಎಸ್‌ನ ಮಂಗೇಶ ಭೇಂಡೆ, ಮಜೇಥಿಯಾ ಫೌಂಡೇಶನ್‌ನ ಜಿತೇಂದ್ರ ಮಜೇಥಿಯಾ ಸೇರಿದಂತೆ ಸಂಘ ಪರಿವಾರದ ಪ್ರಮುಖರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.