ಶಾಲಾ ದುರಸ್ತಿ; ಗ್ರಾಮಸ್ಥರ ಇಚ್ಛಾಶಕ್ತಿಯೇ ಆಸ್ತಿ
•ಶಿಕ್ಷಕರ ಕರೆಗೆ ಓಗೊಟ್ಟ ದ್ಯಾಮಾಪುರ•ವಂತಿಗೆಯಿಂದ ಸೋರುವ ಮಾಳಿಗೆ ರಿಪೇರಿ
Team Udayavani, Aug 20, 2019, 9:39 AM IST
ಕಲಘಟಗಿ: ದ್ಯಾಮಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಮೇಲ್ಛಾವಣಿಯನ್ನು ಗ್ರಾಮಸ್ಥರ ಸಹಾಯಧನದಿಂದ ರಿಪೇರಿ ಮಾಡುತ್ತಿರುವುದು.
ಕಲಘಟಗಿ: ನೆರೆ ಪರಿಹಾರಕ್ಕಾಗಿ ಪರಿತಪಿಸುತ್ತಿರುವ ಜನರೇ ಹೆಚ್ಚಿರುವ ಸಂದರ್ಭದಲ್ಲಿ ತಾಲೂಕಿನ ದ್ಯಾಮಾಪುರ ಗ್ರಾಮಸ್ಥರು ಶಿಕ್ಷಕ ವೃಂದದ ಕೋರಿಕೆಗೆ ಕಟ್ಟುಬಿದ್ದು ಸ್ವಂತ ವಂತಿಗೆಯಿಂದ ಸೋರುತ್ತಿರುವ ಸರ್ಕಾರಿ ಶಾಲಾ ಕೊಠಡಿ ರಿಪೇರಿಗೆ ಮುಂದಾಗಿ ಮಾದರಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಸುರಿದ ನಿರಂತರ ಅಬ್ಬರದ ಮಳೆಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳಲ್ಲಿ ಒಂದು ಕೊಠಡಿ ಮೇಲ್ಛಾವಣಿಯ ತಗಡುಗಳು ಸಂಪೂರ್ಣ ಹಾಳಾಗಿ ಒಳಗಡೆ ನೀರಿನಿಂದಾವೃತವಾಗಿತ್ತು. ನೆರೆಯ ರಜೆ ಮುಗಿದು ಶಾಲೆ ಪುನಾರಂಭ ಗೊಂಡಾಗ ಮಕ್ಕಳನ್ನು ಅಲ್ಲಿ ಕೂಡ್ರಿಸಲಾಗದ ದುಸ್ಥಿತಿ ಇತ್ತು.
ಅದಾಗಲೇ ಬಂದ ಸ್ವಾತಂತ್ರ್ಯೋತ್ಸವಕ್ಕೆ ಪಾಲಕರನ್ನು ಹಾಗೂ ಗ್ರಾಮಸ್ಥರನ್ನೆಲ್ಲ ಆಮಂತ್ರಿಸಿದ ಮುಖ್ಯಾಧ್ಯಾಪಕಿ ಎಸ್.ಬಿ. ಗುಂಡೂರ ಹಾಗೂ ಹಿರಿಯ ಶಿಕ್ಷಕ ಎಸ್.ಬಿ. ಬಾರಕೇರ ಶಾಲಾ ಕಟ್ಟಡದ ದುಸ್ಥಿತಿಯ ಚಿತ್ರಣ ತೆರೆದಿಟ್ಟಿದ್ದಾರೆ. ಪರಿಹಾರಕ್ಕೆ ಮಾರ್ಗೋಪಾಯವನ್ನೂ ಹೇಳಿದ್ದಾರೆ. ಅದರ ಫಲಶೃತಿಯೇ ಇಂದು ಗ್ರಾಮಸ್ಥರೆಲ್ಲರೂ ಸರ್ಕಾರದ ನೆರವನ್ನು ನಿರೀಕ್ಷಿಸದೇ ತಮ್ಮ ಸ್ವಂತ ವಂತಿಗೆಯಿಂದ 50 ಸಾವಿರ ರೂ. ಸಂಗ್ರಹಿಸಿ ಕೊ ಠಡಿ ಮೇಲ್ಛಾವಣಿಗೆ ಹೊಸ ತಗಡು ಹಾಕಿ ದುರಸ್ತಿಗೊಳಿಸುತ್ತಿದ್ದಾರೆ.
ಅಧಿಕಾರಿಗಳ ಸ್ಪಂದನೆ ಅಷ್ಟಕ್ಕಷ್ಟೆ: 1ರಿಂದ 5ನೇ ತರಗತಿಯ ಶಾಲೆಯಲ್ಲಿ ಇರುವುದು ಇಬ್ಬರೇ ಶಿಕ್ಷಕರು. 36 ವಿದ್ಯಾರ್ಥಿಗಳಿದ್ದು, ಮೂರು ತರಗತಿ ಕೋಣೆಗಳಿವೆ. ಅದರಲ್ಲಿ ಒಂದು ಕೋಣೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಬಲಿಗಾಗಿ ಕಾಯುತ್ತಿರುವಂತಿದೆ. ಅಲ್ಲಿ ವರ್ಗವನ್ನು ನಡೆಸದಂತೆ ಗ್ರಾಮಸ್ಥರು ವರ್ಷಗಳ ಹಿಂದೆಯೇ ತಾಕೀತು ಮಾಡಿದ್ದಾರೆ. ಹಲವು ವರ್ಷಗಳಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಅದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟುವ ಯಾವುದೇ ಫಲಪ್ರದ ಕಾರ್ಯ ಜರುಗಿಲ್ಲ.
ಕೆಲ ದಿನಗಳ ಹಿಂದ ಸುರಿದ ಭಾರೀ ಮಳೆಯಿಂದಾಗಿ ಇದ್ದ ಇನ್ನೊಂದು ವರ್ಗದ ಕೋಣೆಯೂ ಸೋರುತ್ತಿರುವುದರಿಂದ ಜಲಾವೃತ್ತ ಗೊಂಡಿತ್ತು. ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿಯೇ ಪ್ರಸ್ತಾಪ ಮಾಡಿದ ಇಬ್ಬರೂ ಶಿಕ್ಷಕರು ಪ್ರಥಮದಲ್ಲಿ ತಮ್ಮ 2000 ರೂ. ದೇಣಿಗೆ ನೀಡಿದರು. ನಂತರ ಎಸ್‌ಡಿಎಂಸಿಯವರು ಹಾಗೂ ಗ್ರಾಮಸ್ಥರೆಲ್ಲರೂ ದೇಣಿಗೆ ಸಂಗ್ರಹಿಸಿ ಶಾಲಾ ಕೊಠಡಿ ದುರಸ್ತಿಗೆ ಮುಂದಾಗಿದ್ದಾರೆ.
ಮಾದರಿ ಶಿಕ್ಷಕರು: ಶಾಲೆಯ ಮುಖ್ಯಾಧ್ಯಾಪಕಿ ಎಸ್.ಬಿ. ಗುಂಡೂರ ಆದರ್ಶ ಶಿಕ್ಷಕಿಯಾಗಿದ್ದಾರೆ. ಪಾಲಕರ ಮನವೊಲಿಸಿ ಎರಡು ಸೆಟ್ ಬಣ್ಣದ ಟ್ರ್ಯಾಕ್‌ಶೂಟ್‌ನಲ್ಲಿ ಸರ್ಕಾರಿ ಶಾಲಾ ಮಕ್ಕಳು ಕಂಗೊಳಿಸುವಂತೆ ಮಾಡಿದ್ದಾರೆ. ಶಾಲೆ ಆವರಣವನ್ನು ಕೈತೋಟದಿಂದ ಪರಿಸರ ಪ್ರೇಮ ಹುಟ್ಟುವಂತೆ ಮಾಡಿದ್ದಾರೆ. ತಮ್ಮ ಸ್ವಂತ ಹಣ ವಿನಿಯೋಗಿಸಿ ನೂರಾರು ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಚಿಕ್ಕಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ಪ್ರೋತ್ಸಾಹ ನೀಡುತಿದ್ದಾರೆ.
ಶಾಲಾ ಮೇಲ್ಛಾವಣಿ ಸೋರುವಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲವಾಗಿತ್ತು. ತತ್‌ಕ್ಷಣ ಸರ್ಕಾರದಿಂದ ರಿಪೇರಿ ಅಸಾಧ್ಯದ ಮಾತು. ಆದ್ದರಿಂದ ಗ್ರಾಮದಲ್ಲಿ ಪಟ್ಟಿ ಹಾಕಿ ಸುಧಾರಣೆ ಮಾಡಬೇಕೆಂಬ ಶಿಕ್ಷಕಿ ಎಸ್.ಬಿ. ಗುಂಡೂರ ಅವರ ಅಭಿಲಾಷೆಗೆ, ನೆರವಾದ ಗ್ರಾಮಸ್ಥರಿಗೆ ಕೃತಜ್ಞರಾಗಿದ್ದೇವೆ. ಸರ್ಕಾರದ ಹಣ ಬಂದಾಗ ಮತ್ತೆ ಅಭಿವೃದ್ಧಿ ಕಾರ್ಯ ಮಾಡುತ್ತೇವೆ.•ವಸಂತ ಮಾಳಗಿ, ಎಸ್‌ಡಿಎಂಸಿ ಅಧ್ಯಕ್ಷ
•ಪ್ರಭಾಕರ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.