ನಾಟಕ ನೋಡಿ ಬರುತ್ತಿದ್ದ ವ್ಯಕ್ತಿ ಕೊಲೆ
Team Udayavani, Mar 17, 2017, 1:08 PM IST
ಧಾರವಾಡ: ನಾಟಕ ನೋಡಿ ಮರಳುವ ಸಂದರ್ಭದಲ್ಲೇ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆಗೈದ ಘಟನೆ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಗ್ರಾಮದ ಮಡಿವಾಳಪ್ಪ ಯಲ್ಲಪ್ಪ ಸಬರದ (40) ಎಂಬಾತನೇ ಕೊಲೆಯಾದ ವ್ಯಕ್ತಿ.
ಗ್ರಾಮದಲ್ಲಿ ಬುಧವಾರ ರಾತ್ರಿ ನಾಟಕ ಪ್ರದರ್ಶನವಿತ್ತು. ಇದೇ ಸಂದರ್ಭದಲ್ಲಿ ಸಮಯ ಸಾಧಿಧಿಸಿದ ಹಂತಕರು, ಗ್ರಾಮದ ಅಗಸಿ ಬಳಿ ಮಡಿವಾಳಪ್ಪನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಈ ಹಿಂದೆ ಅದೇ ಗ್ರಾಮದ ಶಿವಾನಂದ ಚಿಗರಿ ಎಂಬಾತನನ್ನು ಕಿತ್ತೂರ ಬಳಿ ಕೊಲೆಗೈಯಲಾಗಿತ್ತು. ಆ ಪ್ರಕರಣದಲ್ಲಿ ಮಡಿವಾಳಪ್ಪ ಸಹ ಆರೋಪಿಯಾಗಿದ್ದ. ಅದೇ ಸೇಡಿನಿಂದ ಶಿವಾನಂದ ಚಿಗರಿ ಕಡೆಯವರೇ ತನ್ನ ಮಗ ಮಡಿವಾಳಪ್ಪನನ್ನು ಕೊಲೆಗೈದಿದ್ದಾರೆ ಎಂದು ಆತನ ತಂದೆ ಯಲ್ಲಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಪ್ರಶಾಂತ ನಾಯಕ ಮತ್ತು ಪಿಎಸ್‌ಐ ಸಂಗಮೇಶ ಪಾಲಭಾವಿ ಭೇಟಿ ನೀಡಿದ್ದರು. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧನಾ ಕಾರ್ಯ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.