Hubli: ಪುರಾಣ ಪ್ರವಚನಗಳಿಂದ ಆತ್ಮಶುದ್ಧಿ: ಸ್ವಾಮೀಜಿ
Team Udayavani, Aug 30, 2023, 6:46 PM IST
ಹುಬ್ಬಳ್ಳಿ: ಪ್ರತಿನಿತ್ಯ ಪುರಾಣ, ಪ್ರವಚನಗಳಿಂದ ಅನುಭಾವ ಪಡೆಯುವುದರಿಂದ ಪ್ರತಿಯೊಬ್ಬರ ಆತ್ಮ, ಅಂತಃಕರಣ ಶುದ್ಧೀಕರಣವಾಗುತ್ತದೆ ಎಂದು ಸುಳ್ಳ ಪಂಚಗೃಹ ಹಿರೇಮಠ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಹೇಳಿದರು.
ಸುಳ್ಳ ಗ್ರಾಮದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶ್ರಾವಣ ಮಾಸದ ಅಂಗವಾಗಿ ಪಂಚಗೃಹ ಹಿರೇಮಠದಿಂದ ಆಯೋಜಿಸಿರುವ ಕವಿ ರಾಘವಾಂಕ ವಿರಚಿತ ಸೊನ್ನಲಗಿ ಸಿದ್ದರಾಮೇಶ್ವರ ಪುರಾಣ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದ
ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶ್ರಾವಣವು ಪವಿತ್ರ ಮಾಸವಾಗಿದೆ. ವಿವಿಧ ರೀತಿಯ ಹಬ್ಬಗಳಿಂದ ಸಂಭ್ರಮಿಸುತ್ತದೆ. ಶ್ರಾವಣವು ಸತ್ಕಾರ್ಯಗಳಿಗೆ ಸಕಾಲ ಆಗಿದೆ ಎಂದರು. ಸೊನ್ನಲಗಿ ಸಿದ್ದರಾಮ ಮಹಾಯೋಗಿಗಳು ಶಿವಯೋಗಿ ಆಗಿದ್ದರು. ಅವರ ಚರಿತ್ರೆಯನ್ನು ತಿಳಿಯುವ ಮೂಲಕ ಎಲ್ಲರೂ ಪಾವನರಾಗಬೇಕು.
ಮಠ, ದೇವಸ್ಥಾನಗಳಲ್ಲಿ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ ಭಕ್ತರು ಸಕ್ರಿಯವಾಗಿ ಭಾಗವಹಿಸಿ ಪುನೀತರಾಗಬೇಕು ಎಂದರು.
ಪುರಾಣ, ಪ್ರವಚನಗಳಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತದೆ. ಮತ್ತು ಅವರಲ್ಲಿ ಸಂಸ್ಕೃತಿ ಎದ್ದು ಕಾಣುತ್ತದೆ. ಮಹಾತ್ಮರ ಸಾಧು, ಸಂತರ, ಶರಣರ, ಶಿವಯೋಗಿಗಳ ಚರಿತ್ರೆಯಲ್ಲಿ ನಮ್ಮ ಧರ್ಮದ ಸಾಂಸ್ಕೃತಿಕ ಸಿರಿ ಅಡಗಿದೆ. ಎಲ್ಲವನ್ನು ಆಸ್ವಾದಿಸಬೇಕು. ರೇಣುಕರ ಆದಿಯಾಗಿ ಪಂಚ ಆಚಾರ್ಯರು ಬೋಧಿಸಿದ ತತ್ವ, ಸಿದ್ಧಾಂತ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾನವ ಧರ್ಮ ಎತ್ತಿ ಹಿಡಿಯಬೇಕು ಎಂದು ಹೇಳಿದರು.
ಸಣಕಲ್ಲಪ್ಪ ಒಂಟಿ ಪ್ರಾಸ್ತಾವಿಕ ಮಾತನಾಡಿದರು. ಸೋಮಾಪುರ ಹಿರೇಮಠದ ವೇದಮೂರ್ತಿ ಸಿದ್ರಾಮಯ್ಯ ಹಿರೇಮಠ ಪುರಾಣ ಪ್ರವಚನ ನೀಡಿದರು. ಗುರುಸಿದ್ದಯ್ಯ ಸೌದಿಮಠ ಮತ್ತು ದ್ಯಾಮಣ್ಣ ಕುಂಭಾರ ಅವರಿಂದ ಸಂಗೀತ ಸೇವೆ ಜರುಗಿತು. ಸಿದ್ರಾಮಯ್ಯ ಗುರುಸಿದ್ದಯ್ಯ ಹಿರೇಮಠ ನಿರೂಪಿಸಿ, ವಂದಿಸಿದರು. 18ಕ್ಕೆ ಪ್ರವಚನ ಮಂಗಲೋತ್ಸವ: ಆ.28ರಿಂದ ಸೆ.18 ರವರೆಗೆ ಗ್ರಾಮದಲ್ಲಿ ಸೊನ್ನಲಗಿ ಸಿದ್ದರಾಮೇಶ್ವರ ಪುರಾಣ ಪ್ರವಚನ ನಡೆಯಲಿದ್ದು, ಸೆ.18ರಂದು ಪುರಾಣ ಮಂಗಲೋತ್ಸವ ನಡೆಯಲಿದೆ.
ಬಾಳೆಹೊನ್ನೂರ ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ರಂಭಾಪುರಿ ಜಗದ್ಗುರುಗಳ 32ನೇ ವರ್ಷದ ಪೀಠಾರೋಹಣದ ಸವಿನೆನಪಿಗಾಗಿ
ಧಾರವಾಡ ವೀರಶೈವ ಜಂಗಮ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ದತ್ತಿ ಉಪನ್ಯಾಸ ಮಾಲಿಕೆಯ ಉದ್ಘಾಟನೆಯನ್ನು ಜಗದ್ಗುರುಗಳು ನೆರವೇರಿಸಲಿದ್ದಾರೆ. ಬಂಡಿವಾಡ ಆಶ್ರಮದ ಡಾ| ಎ.ಸಿ. ವಾಲಿ ಅವರು ಜಗದ್ಗುರುಗಳ ಕುರಿತು ದತ್ತಿನಿಧಿಯ ಪ್ರಥಮ ಉಪನ್ಯಾಸ ನೀಡಲಿದ್ದಾರೆ. ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.