ರೈತರ ಪಂಪ್‌ಸೆಟ್‌ಗಳಿಗೆ ಏಳು ತಾಸು ತ್ರಿಫೇಸ್ ವಿದ್ಯುತ್
ಸಿಂಗಲ್ಫೇಸ್ ವಿದ್ಯುತ್ ಪೂರೈಕೆ ವೇಳೆಯಲ್ಲಿ ಪಂಪ್‌ಸೆಟ್ ಚಾಲನೆಯಲ್ಲಿಡಬೇಡಿ
Team Udayavani, Jul 24, 2019, 3:58 PM IST
ಧಾರವಾಡ: ನಿಗದಿ ಗ್ರಾಮದ ಮಲೆನಾಡು ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ ಗ್ರಾಹಕ ಜಾಗೃತಿ ಸಭೆ ಜರುಗಿತು.
ಧಾರವಾಡ: ನೀರಾವರಿ ಪಂಪ್‌ಸೆಟ್ ಫೀಡರ್‌ಗಳಿಗೆ (ಮಾರ್ಗಗಳಿಗೆ) ಸರ್ಕಾರಿ ಆದೇಶದನ್ವಯ ತ್ರಿಫೇಸ್ ವಿದ್ಯುತ್ ಪೂರೈಕೆಯನ್ನು 7 ಗಂಟೆಗಳ ಕಾಲ ಎರಡು ಅಥವಾ ಒಂದೇ ಸರದಿಯಲ್ಲಿ ನೀಡಲಾಗುತ್ತಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಧಾರವಾಡ ಗ್ರಾಮೀಣ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಟಿಂಗರೀಕರ ಹೇಳಿದರು.
ನಿಗದಿ ಗ್ರಾಮ ಹಾಗೂ ಅಳ್ನಾವರ ಪಟ್ಟಣದಲ್ಲಿ ಪ್ರತ್ಯೇಕವಾಗಿ ಜರುಗಿದ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆ ಮತ್ತು ಉಳಿತಾಯದ ಕುರಿತ ಗ್ರಾಹಕ ಜಾಗೃತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾತ್ರಿ ಹೊಲದಲ್ಲಿರುವ ಮನೆಗಳಿಗಾಗಿ ಓಪನ್‌ಡೆಲಾr (ಸಿಂಗಲ್ ಫೇಸ್) ನೀಡಲಾಗುತ್ತಿದೆ. ಈಗಾಗಲೇ ಎಲ್ಲ ಉಪಕೇಂದ್ರಗಳಲ್ಲಿ ನೀರಾವರಿ ಪಂಪ್‌ಸೆಟ್ ಮಾರ್ಗಗಳಿಗೆ ನ್ಯೂಮರಿಕಲ್ರಿಲೆ ಅಳವಡಿಸಲಾಗಿದ್ದು, ಉಳಿದಂತಹ ಮಾರ್ಗಗಳಿಗೆ ಆ. 1ರೊಳಗಾಗಿ ನ್ಯೂಮರಿಕಲ್ರಿಲೆ ಅಳವಡಿಸಲಾಗುತ್ತಿದೆ ಎಂದರು.
ಹೆಸ್ಕಾಂ ಗ್ರಾಹಕರು ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಿ ತಮ್ಮ ಅಹವಾಲು ಸಲ್ಲಿಸಬಹುದು. ಪ್ರತಿ ತಿಂಗಳ 3ನೇ ಶನಿವಾರದಂದು ನಡೆಯುವ ವಿದ್ಯುತ್ ಅದಾಲತ್ ಹಾಗೂ ಗ್ರಾಹಕರ ಸಂವಾದ ಸಭೆಯಲ್ಲಿ ಭಾಗವಹಿಸಿ ತಮ್ಮ ದೂರುಗಳನ್ನು ನೀಡಬಹುದು. ಒಂದು ವೇಳೆ ರೈತರು ಓಪನ್ ಡೆಲಾr(ಸಿಂಗಲ್ ಫೇಸ್ ಪೂರೈಕೆ) ಸಮಯದಲ್ಲಿ ಕೆಪ್ಯಾಸಿಟರ್ ಅಳವಡಿಸಿ ತಮ್ಮ ಪಂಪ್‌ಸೆಟ್‌ಗಳನ್ನು ಚಾಲನೆ ಮಾಡಿದರೆ ಸಂಪೂರ್ಣ ಮಾರ್ಗ (ಫೀಡರ್) ಟ್ರಿಪ್ ಆಗಿ ಹೊಲದಲ್ಲಿರುವ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತದೆ. ರೈತರು ತ್ರಿಫೇಸ್ ವಿದ್ಯುತ್ ಪೂರೈಕೆ ಸಮಯದಲ್ಲಿ ಮಾತ್ರ ತಮ್ಮ ಪಂಪ್‌ಸೆಟ್‌ಗಳನ್ನು ಚಾಲನೆಯಲ್ಲಿಟ್ಟು ಸಹಕರಿಸಬೇಕು ಎಂದ ಮನವಿ ಮಾಡಿದರು.
ಗ್ರಾಮೀಣ ಶಾಖೆ-2ರ ಶಾಖಾಧಿಕಾರಿ ಸಹದೇವ ಇಂಗಳಗಿ ಹಾಗೂ ಅಳ್ನಾವರ ಶಾಖೆಯ ರೋಹಿತ್ ಸಾಳುಂಕೆ ಮಾತನಾಡಿದರು.
ಪ್ರಾಂಶುಪಾಲ ಸಿ.ಎನ್. ಹೆಬ್ಟಾಳ, ಶಿವು ಬಸನಕೊಪ್ಪ, ನಿಗದಿಯ ಮಲೆನಾಡು ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ಅಧ್ಯಕ್ಷ ಮಲ್ಲನಗೌಡ ಎಸ್. ಪಾಟೀಲ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಅರವಿಂದ ಬೆಲ್ಲದ
Hubli: ಮೀಟರ್ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.