ಬಾನು ಮುಷ್ತಾಕ್‌ಗೆ ಶಾಂತಲಾ ಪಾಟೀಲ್ ಪುರಸ್ಕಾರ
Team Udayavani, Sep 27, 2017, 1:27 PM IST
ಧಾರವಾಡ: ಇಂಧುಮತಿ ಹಾಗೂ ಡಾ| ಪಾಟೀಲ ಪುಟ್ಟಪ್ಪ ಅವರ ಪುತ್ರಿ ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರವನ್ನು ಸಾಹಿತಿ ಬಾನು ಮುಷ್ತಾಕ್ ಅವರಿಗೆ ನಗರದ ಕವಿಸಂನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. 15 ಸಾವಿರ ನಗದು ಒಳಗೊಂಡ ಪುರಸ್ಕಾರ ಸ್ವೀಕರಿಸಿದ ಬಾನು ಮಾತನಾಡಿ, ಧರ್ಮ, ರಾಜಕಾರಣ ಮತ್ತು ಲೈಂಗಿಕ ಜೀವನಗಳಲ್ಲಿ ಮಹಿಳೆ ಇನ್ನೂ ಅಸ್ಪೃಶ್ಯಳು.
ತಮ್ಮ ಪತಿಯ ನಿರಂತರ ಸಹಕಾರ ಇಲ್ಲದೇ ಹೋಗಿದ್ದರೆ ತಾವು ಈಗಾಗಲೇ ಮೂಲಭೂತವಾದಿಗಳಿಂದ ಹೆಚ್ಚಿನ ಕಿರುಕುಳ ಅನುಭವಿಸಬಹುದಿತ್ತು ಎಂದು ಅವರು ಹೇಳಿದರು. ಬರಹ ನನ್ನ ಜೀವನದ ಏಕಮೇವ ಗುರಿಯಾಗಿತ್ತು. ನಾನು ಬರೆಯುವವರೆಗೆ ಲೇಖಕಿಯರು ಮಹಿಳೆಯರ ಕೇವಲ ಮೇಲ್ಪದರಿನ ಸಮಸ್ಯೆಗಳ ಬಗ್ಗೆ ವೈಭವೀಕರಿಸಿ ಬರೆಯುತ್ತಿದ್ದರು.
ಇಂಥ ಹಿನ್ನೆಲೆಯಲ್ಲಿ ನಾನು ನನ್ನ ಸಮಾಜದಲ್ಲಿಯೇ ಇದ್ದ ಮಹಿಳೆಯರ ಬದುಕಿನ ಬವಣೆಯನ್ನು ಬರಹ ರೂಪದಲ್ಲಿ ಚಿತ್ರೀಕರಿಸಲು ಬಯಸಿದೆ. ಮಹಿಳೆಯರ ಕಷ್ಟಕೋಟಲೆ ಬಗ್ಗೆ ಎದೆಯಲ್ಲಿ ಉರಿ ಇತ್ತು. ಇದನ್ನು ಶಮನಿಸಿದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ಬೆಂಕಿಯನ್ನೇ ಉಗುಳುತ್ತಿದ್ದರು. ಇಂತದರಲ್ಲಿಯೇ ನಾನು ದಿಟ್ಟತನದಿಂದ ನಮ್ಮದೇ ಸಮಾಜದ ಮಹಿಳೆಯರ ವಸ್ತುಸ್ಥಿತಿಯನ್ನು ಬಿಂಬಿಸುವ ಪ್ರಯತ್ನ ಮಾಡಿದೆ ಎಂದರು.
ಗೌರಿ ಲಂಕೇಶ ಮತ್ತು ಡಾ| ಕಲಬುರ್ಗಿ ಅವರ ಹತ್ಯೆಯನ್ನು ಪ್ರಸ್ತಾಪಿಸಿದ ಅವರು, ಇಂತಹ ದುರ್ಗತಿ ಅವರಿಗೆ ಸತ್ಯ ಹೇಳಿದ್ದರಿಂದಲೇ ಬಂತೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಅಧ್ಯಕ್ಷತೆ ವಹಿಸಿ ಪುರಸ್ಕಾರ ಪ್ರದಾನ ಮಾಡಿದ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಬುದ್ಧಿಜೀವಿಗಳು, ಸಾಹಿತಿಗಳು ಹಾಗೂ ಪತ್ರಕರ್ತರು ವಿವಾದಾತ್ಮಕ ವಿಷಯಗಳನ್ನು ಚರ್ಚಿಸುವ ಬದಲಾಗಿ ಜನಸಾಮಾನ್ಯರಿಗೆ ನೇರವಾಗಿ ಅಗತ್ಯವಿರುವ ವಿಷಯ, ವಸ್ತುಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು.
ದೇಶದ ಇತಿಹಾಸದಲ್ಲಿ ಮಹಿಳೆ ಸೇರಿದಂತೆ ಯಾರೊಬ್ಬರಿಗೂ ರಾಜಕೀಯ ಅಸ್ಪೃಶ್ಯತೆ ಇಲ್ಲ ಎಂದರು. ಕವಿವಿ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ| ಶಾಂತಾ ಇಮ್ರಾಪುರ, ನಾಡೋಜ ಡಾ| ಪಾಟೀಲ ಪುಟ್ಟಪ್ಪ ಮಾತನಾಡಿದರು. ದತ್ತಿ ದಾನಿ ವಿಜಯಮಾಲಾ ಇದ್ದರು. ಸಂಘದ ಕಾರ್ಯಾಧ್ಯಕ್ಷ ಡಾ| ಡಿ.ಎಂ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಮನೋಜ ಪಾಟೀಲ ನಿರೂಪಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.