ಶೆಟ್ಟರ ವಿರುದ್ಧ ಸಮರ್ಥ ಅಭ್ಯರ್ಥಿ: ದಿಗ್ವಿಜಯ ಚರ್ಚೆ
Team Udayavani, Apr 19, 2017, 3:08 PM IST
ಹುಬ್ಬಳ್ಳಿ: ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ವಿರುದ್ಧ ಕಾಂಗ್ರೆಸ್‌ನಿಂದ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ರಾಜ್ಯದ ಉಸ್ತುವಾರಿ ದಿಗ್ವಿಜಯ ಸಿಂಗ್ ಅವರ ಮಂಗಳವಾರದ ಹುಬ್ಬಳ್ಳಿ ಭೇಟಿ ವೇಳೆ ಚರ್ಚೆ ನಡೆದಿದೆ ಎನ್ನಲಾಗಿದೆ. ಜತೆಗೆ ಸರಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಪ್ರತಿಪಕ್ಷಗಳು ಸದನದ ಒಳ-ಹೊರಗೆ ಮುಗಿಬಿದ್ದು ಆರೋಪ ಮಾಡಿದಾಗ ಸಮರ್ಥನೆ ಹಾಗೂ ಬೆಂಬಲದ ಕೊರತೆ ಎದ್ದು ಕಾಣುತ್ತಿದೆ.
ಒಂದಿಬ್ಬರು ನಾಯಕರು ಬಿಟ್ಟರೆ ಕೆಲ ಬಾರಿ ಸಿಎಂ ಏಕಾಂಗಿಯಾಗಿ ಪ್ರತ್ಯುತ್ತರ ನೀಡುವ ಸ್ಥಿತಿ ಇದೆ. ರಾಜ್ಯ ಹಾಗೂ ಜಿಲ್ಲೆ-ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆ ಕೊರತೆ, ಕಾಲ ಕಾಲಕ್ಕೆ ಸಭೆ, ಕಾರ್ಯಕರ್ತರೊಂದಿಗೆ ಸಮಾಲೋಚನೆ ಇಲ್ಲದಿರುವುದು, ಹೊಂದಾಣಿಕೆ ರಾಜಕೀಯ ಕುರಿತ ವಿಚಾರಗಳೂ ಪ್ರಸ್ತಾಪವಾದವು ಎಂದು ಮೂಲಗಳು ತಿಳಿಸಿವೆ.
ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ: ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಪಕ್ಷದ ಮುಖಂಡರ ಸಭೆ ನಡೆಸಿದ ದಿಗ್ವಿಜಯ್, ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಶೆಟ್ಟರ ಅವರಂತಹ ನಾಯಕರನ್ನು ಸೋಲಿಸಬೇಕಾದರೆ ಸಮರ್ಥ ಅಭ್ಯರ್ಥಿ ಅಗತ್ಯವಿದೆ. ಯಾವುದೇ ರಾಜಿಗೆ ಮುಂದಾಗದೆ ಗೆಲುವಿಗಾಗಿ ಕೊನೆ ಕ್ಷಣದವರೆಗೂ ಹೋರಾಡುವ, ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವವರಿಗೆ ಟಿಕೆಟ್ ನೀಡಿ ಎಂಬ ಅನಿಸಿಕೆಯೂ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಿದರೆ ಶೆಟ್ಟರ ಅವರನ್ನು ಸೋಲಿಸಬಹುದು ಹಾಗೆಯೇ ಅವಿಭಜಿತ ಧಾರವಾಡ ಜಿಲ್ಲೆಗಳಲ್ಲಿ ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರಗಳಿಗೆ ಯಾರನ್ನು ಅಭ್ಯರ್ಥಿಯಾಗಿ ಮಾಡಿದರೆ ಸೂಕ್ತ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ.
ದಿಗ್ವಿಜಯ ಅವರನ್ನು ಭೇಟಿ ಮಾಡಿದ ಅವಿಭಜಿತ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ತಾವು ಹೇಗೆ ಸಮರ್ಥ ಅಭ್ಯರ್ಥಿ ಎಂಬುದನ್ನು ಸ್ವತಃ ಇಲ್ಲವೇ ಬೆಂಬಲಿಗರ ಮೂಲಕ ಬಿಂಬಿಸಲು ಯತ್ನಿಸಿದರು. ಅವರ ಅನಿಸಿಕೆ ಆಲಿಸಿದ ಸಿಂಗ್ ಬಳಿಕ ಜತೆಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಅವರಿಂದಲೂ ಹೆಚ್ಚಿನ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ.
ಇನ್ನು ಕೆಲವರು ಇಂತಹವರಿಗೆ ಟಿಕೆಟ್ ಕೊಡಿ ಎಂದು ಶಿಫಾರಸು ಮಾಡುವ ಬದಲು ಪಕ್ಷ-ಸರಕಾರ ವಿಚಾರದಲ್ಲಿ ಸಚಿವರು-ಶಾಸಕರ ವರ್ತನೆ, ಪಕ್ಷ ಸಂಘಟನೆ ಸೊರಗುತ್ತಿರುವ ಕುರಿತು ಪ್ರಸ್ತಾಪಿಸಿದರು. ಇದನ್ನು ದಿಗ್ವಿಜಯ ಸಿಂಗ್ ಸುಮಾರು ರ್ಧ ತಾಸು ಆಸಕ್ತಿಯಿಂದ ಆಲಿಸಿದರು ಎಂದು ಮೂಲಗಳು ತಿಳಿಸಿವೆ.
ಪಕ್ಷ ವ್ಯವಸ್ಥೆ ಬದಲಾಯಿಸಿ: ನಮ್ಮದೇ ಮತದಾರರು ಇದ್ದಾರೆ ಎಂದು ನಂಬಿಕೊಂಡೇ ಮುಂದುವರಿದಿದ್ದೇವೆ ಹೊರತು ಪಕ್ಷ ಸಂಘಟನೆಗೆ ಸಮರ್ಪಕ ಯತ್ನ, ಶ್ರಮ ಇಲ್ಲವಾಗುತ್ತಿದೆ. ಪಕ್ಷದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ, ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸುವುದಾದರೆ ಸಕ್ರಿಯರಿಗೆ ಅವಕಾಶ ನೀಡಿ. ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ರೂಪರೇಷೆ ಸಿದ್ಧಪಡಿಸಿ ಎಂದು ಕೆಲವರು ಸಲಹೆ ನೀಡಿದರು.
ಬಿಜೆಪಿಯವರು ಬೂತ್ -ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಕಟ್ಟಲು ತರಬೇತಿ, ಸಭೆ- ಸಮಾರಂಭ ನಡೆಸುತ್ತಿದ್ದಾರೆ. ಆದರೆ, ನಮ್ಮಲ್ಲಿ ಜಿಲ್ಲಾ ಮತ್ತು ಬ್ಲಾಕ್ ಘಟಕಗಳು ಅನೇಕ ಕಡೆ ಇದ್ದೂ ಇಲ್ಲದಂತಿವೆ. ಹೀಗಾಗಿ ಸಭೆ ನಡೆಸುವುದು ದೂರದ ಮಾತು. ಹೊಂದಾಣಿಕೆ ರಾಜಕೀಯ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಎಂದು ಆಗ್ರಹಿಸಿದರು ಎನ್ನಲಾಗಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ
Congress Government: ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು?: ಆರ್.ಬಿ.ತಿಮ್ಮಾಪುರ
Hubli: ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸ್ವಾಗತಿಸುವೆ: ಎಸ್.ಆರ್.ಪಾಟೀಲ
Alnavar: ಬೈಕ್ – ಕಾರು ಅಪಘಾತ; ಬೈಕ್ ಸಹಸವಾರ ಸಾವು
ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.